ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ || ರಾಜ್ಯದ ಸಹಾರಿಗಳು ಮತ್ತು ಕುಟುಂಬದವರಿಗೆ ಸುವರ್ಣಾವಕಾಶ :

ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ||
ರಾಜ್ಯದ ಸಹಾರಿಗಳು ಮತ್ತು ಕುಟುಂಬದವರಿಗೆ ಸುವರ್ಣಾವಕಾಶ :

ನೋಂದಣಿ ಪ್ರಾರಂಭ : 01/01/2024 ರಿಂದ 



 

               ಇವತ್ತಿನ ಲೇಖನದಲ್ಲಿ ಸಹಕಾರಿ ಸದಸ್ಯರಿಗೆ  ಸಿಗಲಿರುವ ಯಶಸ್ವಿನ ಕಾರ್ಡ್ ನೋಂದಣಿ ಪ್ರಾರಂಭವಾಗಿದ್ದು ಅರ್ಹರು ಇದರ ಪ್ರಯೋಜನ ಪಡೆಯಲು ಸಂಪೂರ್ಣ ಮಾಹಿತಿ ಪಡೆಯಿರಿ.

ಸಹಕಾರ ಸಂಘಗಳ/ಸಹಕಾರಿ  ಸ್ವ-ಸಹಾಯ ಗುಂಪುಗಳ ಸದಸ್ಯರು, ಸಹಕಾರಿ ಮೀನುಗಾರರು, ಸಹಕಾರಿ ಬೀಡಿ ಕಾರ್ಮಿಕರು, ಸಹಕಾರಿ ನೇಕಾರರು ಹಾಗೂ ಮಾಸಿಕ ರೂ 30,000/- ಮತ್ತು ಅದಕ್ಕಿಂತ ಕಡಿಮೆ ಒಟ್ಟು ವೇತನ ಪಡೆಯುತ್ತಿರುವ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ್ 1959 ರಡಿ ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಸಹಕಾರ ಸಂಘಗಳ ನೌಕರರಿಗೂ ಕೂಡ ಈ ಯೋಜನೆಯಡಿ ಸೌಲಭ್ಯ ಲಭ್ಯ.

ಯಶಸ್ವಿನಿ ಸಹಕಾರಿಗಳ ಪಾಲಿನ ಸಂಜೀವಿನಿ :

✔  ಗ್ರಾಮೀಣ ಸಹಕಾರ ಸಂಘಗಳ/ಸಹಕಾರಿ ಸ್ವ-ಸಹಾಯ ಗುಂಪುಗಳ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ 500/- ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ 100/- ಪಾವತಿಸತಕ್ಕದ್ದು.

✔  ನಗರ ಸಹಕಾರ ಸಂಘಗಳ ಗರಿಷ್ಟ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ 1000 ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ 200 ಗಳನ್ನೂ ಪಾವತಿಸತಕ್ಕದ್ದು.

✔  ಯಶಸ್ವಿನಿ ಯೋಜನೆಯಲ್ಲಿ "ಕುಟುಂಬ" ಎಂದರೆ ಪ್ರಧಾನ ಅರ್ಜಿದಾರರ ತಂದೆ/ತಾಯಿ, ಗಂಡ/ಹೆಂಡತಿ, ಗಂಡು ಮಕ್ಕಳು ಮದುವೆಯಾಗದ ಹೆಣ್ಣು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು  ಎಂದು ಅರ್ಥೈಸುವುದು. ಒಂದು ಮನೆಯಲ್ಲಿ ಸೊಸೆ ಪ್ರಧಾನ ಅರ್ಜಿದಾರರಾಗಿದ್ದಲ್ಲಿ ಅವರ ಅತ್ತೆ/ಮಾವ ಅರ್ಹ ಸದಸ್ಯರಾಗುತ್ತಾರೆ. ಅರ್ಜಿದಾರರ ತಂದೆ/ ತಾಯಿಯವರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲು ಬರುವುದಿಲ್ಲ.

✔  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸದಸ್ಯರ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.

✔  ಯಶಸ್ವಿನಿ ನೋಂದಣಿಗಾಗಿ ನೀವು ಸದಸ್ಯರಾಗಿರುವ ಸಹಕಾರ ಸಂಘ/ಬ್ಯಾಂಕ್ ನ್ನು ಅಥವಾ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಸಂಪರ್ಕಿಸಿ.

whatss


 ✔  2023-24 ನೇ ಸಲಿಗೆ ಚಿಕಿತ್ಸೆ ಅವಧಿಯನ್ನು ಏಪ್ರಿಲ್ 2024 ರಿಂದ ಮಾರ್ಚ್ 2025 ರವರೆಗಿನ ನಿಗದಿ ಪಡೆಸಿದೆ.

✔  ಯಶಸ್ಸಿನಿ ಯೋಜನೆಯ ಪ್ರೋಟೋಕಾಲ್ ಪ್ರಕಾರ ಯಶಸ್ಸಿವಿ ಫಲಾನುಭವಿಗಳು ಜನರಲ್ ವಾರ್ಡ್ ನಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅರ್ಹರಿರುತ್ತಾರೆ. ಒಂದು ವೇಳೆ ಯೋಜನೆಯಡಿ ನಿಗದಿಪಡಿಸಿರುವ ಜನರಲ್ ವಾರ್ಡ್ ಗೆ ಬದಲಾಗಿ ಉನ್ನತ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯಲು ಸ್ವ-ಇಚ್ಚೆಯಿಂದ ಲಿಖಿತ ಮೂಲಕ ಒಪ್ಪಿಗೆ  ಸೂಚಿಸಿದ್ದಲ್ಲಿ,ಸದರಿ ಫಲಾನುಭವಿಗಳಿಗೆ ಯೋಜನೆಯಡಿ ನಿಗದಿ ಪಡಿಸಿರುವಂತೆ ಜನರಲ್ ವಾರ್ಡ್ ಗೆ ಅನ್ವಯಿಸುವ ಚಿಕಿತ್ಸೆಯ ಪ್ಯಾಕೇಜ್ ನ ವೆಚ್ಚವನ್ನು ಮಾತ್ರ ಭರಿಸಲಾಗುವುದು. ಉನ್ನತ ವಾರ್ಡ್ / ಸ್ಪೆಷಲ್ ವಾರ್ಡಿಗೆ ಆಗುವ ಹೆಚ್ಚುವರಿ ವ್ಯತ್ಯಾಸದ ಚಿಕಿತ್ಸಾ ಮೊತ್ತವನ್ನು ಸದರಿ ಫಲಾನುಭವಿಗಳೇ ಭರಿಸತಕ್ಕದ್ದು.

✔  ಒಂದು ವೇಳೆ ಫಲಾನುಭವಿಗಳು ಉನ್ನತ Implants ಅಥವಾ Lens ಪಡೆಯಲು ಸ್ವ-ಇಚ್ಚೆಯಿಂದ ಲಿಖಿತ ಮೂಲಕ ಒಪ್ಪಿಗೆ ಸೂಚಿಸಿದ್ದಲ್ಲಿ, ಅಂತಹ ಉನ್ನತ Implants ಮತ್ತು lens ಗೆ ತಗಲುವ ವ್ಯತ್ಯಾಸದ ಹೆಚ್ಚುವರಿ ಮೊತ್ತವನ್ನು ಅಂತಹ ಫಲಾನುಭವಿಗಳೇ ಭರಿಸಿ ಚಿಕಿತ್ಸೆಯನ್ನು ಪಡೆಯತಕ್ಕದ್ದು.

✔  ಆಸ್ಪತ್ರೆಗೆ ದಾಖಲಾದ 4 ರಿಂದ 6 ಗಂಟೆಯೊಳಗೆ ಕ್ಷಿಪ್ರಗತಿಯಲ್ಲಿ ಚಿಕಿತ್ಸೆಗಳಿಗೆ ಪೂರ್ವಾನುಮತಿ ಕೊಡಲಾಗುವುದು.

✔  ಯಶಸ್ವಿನಿ ಸಹಕಾರಿ ಸದಸ್ಯರ ಅರೋಗ್ಯ ರಕ್ಷಣಾ ಯೋಜನೆ ಒಂದು ವಿಶಿಷ್ಟ ಚಿಕಿತ್ಸೆ ಯೋಜನೆಯಾಗಿದ್ದು, ಇದರಡಿಯಲ್ಲಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಟ ಮಿತಿ ರೂ 5 ಲಕ್ಷಕ್ಕೆ ನಿಗದಿಪಡಿಸಿದೆ.

✔  ಫಲಾನುಭವಿಗಳು ಯಶಸ್ವಿನಿ ಯೋಜನೆಯಡಿ ಗುರುತಿಸಲ್ಪಟ್ಟಿರುವ ರಾಜ್ಯದ ಯಾವುದೇ ನೆಟ್ ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ.

✔  ಯಾವುದೇ ನೌಕರರ ಸಹಕಾರ ಸಂಘಗಳು/ಬ್ಯಾಂಕು ಗಳ ಸದಸ್ಯರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

✔  ಕುಂದುಕೊರತೆಗಳನ್ನು ವಿಚಾರಿಸಲು 24*7 ಕಾಲ್ ಸೆಂಟರ್ ನಲ್ಲಿ ಸೇವೆ ಲಭ್ಯ 

✔  ಸದಸ್ಯರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ನ್ನು ಒದಗಿಸತಕ್ಕದ್ದು.

ಯಶಸ್ವಿನಿ ಯೋಜನೆ ವೈಶಿಷ್ಟಗಳು:

APL ಮತ್ತು BPL ಎಂಬ ಯಾವುದೇ ವ್ಯತ್ಯಾಸವಿಲ್ಲದೆ ಈ ಯೋಜನೆ ಎಲ್ಲರಿಗು ಅನ್ವಯಿಸುತ್ತದೆ. ಯೋಜನೆಗೆ ಯಾವುದೇ ವಯೋಮಿತಿ ನಿರ್ಬಂಧ ಇರುವುದಿಲ್ಲ. ನವಜಾತ ಶಿಶುವಿನಿಂದ ಹಿಡಿದು ವೃದ್ಧರವರೆಗೆ ಸದಸ್ಯತ್ವ ಪಡೆಯಲು ಅವಕಾಶ.

⭐ ಪ್ರಧಾನ ಅರ್ಜಿದಾರರು ಸಹಕಾರ ಸಂಘದ ಸದಸ್ಯರಾಗಿದ್ದಾರೆ, ಸಾಕು ಅವರ ಮೂಲಕ ಅವಲಂಬಿತ ಕುಟುಂಬ ಸದಸ್ಯರು ಯೋಜನೆಗೆ ಸೇರಿಕೊಳ್ಳಲು ಅರ್ಹರಿರುತ್ತಾರೆ. ಅವಲಂಬಿತರು ಸಹಕಾರ ಸಂಘದ ಸದಸ್ಯರಾಗುವ ಅಗತ್ಯ ಇರುವುದಿಲ್ಲ.

⭐ ಯಶಸ್ವಿನಿ ಯೋಜನೆ ಸದಸ್ಯರು ಸರ್ಕಾರೀ ಆಸ್ಪತ್ರೆಗಳು ಸೇರಿದಂತೆ ಯೋಜನೆಯಡಿ ಗುರುತಿಸಲ್ಪಟ್ಟ  ನೆಟ್ವರ್ಕ್ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ/ಶಸ್ತ್ರಚಿಕಿತ್ಸೆಗೆ ಸೌಲಭ್ಯ ಪಡೆಯಲು ಅವಕಾಶ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು