ನಮಸ್ಕಾರ ಸ್ನೇಹಿತರೆ....
ಇಂದಿನ ಈ ಲೇಖನದಲ್ಲಿ ರಾಜ್ಯ ಹೊಸ ವೋಟರ್ ಐಡಿ ಮತ್ತು ವೋಟರ್ ಐಡಿ ತಿದ್ದುಪಡಿಗೆ ನಾಗರಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು.
ಎರಡು ವಿಧಾನ ಅನುಸರಿಸಿ ನಾಗರಿಕರು ಹೊಸ ಗುರುತಿನ ಚೀಟಿ ಪಡೆಯಲು ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ಗುರುತಿನ ಚೀಟಿಯಲ್ಲಿ ಹೆಸರು, ವಿಳಾಸ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಬರಲಿದ್ದು ನಮ್ಮ ರಾಜ್ಯದ ಅರ್ಹ ನಾಗರಿಕರು ಮತ ಹಾಕಲು ಅಗತ್ಯವಾಗಿ ಬೇಕಾಗುವ ಮತದಾರರ ಗುರುತಿನ ಚೀಟಿಯನ್ನು ಸಿದ್ಧಪಡಿಸಿಕೊಳ್ಳುವುದು ಅತ್ಯಗತ್ಯ. ಮತ್ತು ಅಂತಿಮ ಮತದಾರರ ಪಟ್ಟಿ-2024 ರಲ್ಲಿ ತಮ್ಮ ಹೆಸರು ಇರುವುದು ಸಹ ಅತ್ಯಗತ್ಯವಾಗಿದೆ.
New Voter ID - ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಹ ನಾಗರಿಕರು ಮೇಲೆ ತಿಳಿಸುವ ಹಾಗೆ....
1) ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಿಮ್ಮ ಹತ್ತಿರದ ಮತಗಟ್ಟೆಯ ಅಧಿಕಾರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.
2) ನಾಗರಿಕರೇ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ "Voter Helpline" ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
⇒ ಅರ್ಜಿದಾರರ ಆಧಾರ್ ಕಾರ್ಡ್/ ಪಾನ್ ಕಾರ್ಡ್/ ಡ್ರೈವಿಂಗ್ ಲೈಸನ್ಸ್ / 10th or 12th ಅಂಕಪಟ್ಟಿ ಪ್ರತಿ (ಜನ್ಮ ದಿನಾಂಕದ ಪುರಾವೆಗೆ)
⇒ ಆಧಾರ್ ಕಾರ್ಡ್/ ಮನೆಯ ವಿದ್ಯುತ್ ಬಿಲ್/ ಗ್ಯಾಸ್ ಬಿಲ್ (ವಾಸಸ್ಥಳ ಪುರಾವೆಗೆ)
ವೋಟರ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
⇒ ಅರ್ಜಿದಾರರ ಆಧಾರ್ ಕಾರ್ಡ್ / ಪಾನ್ ಕಾರ್ಡ್ / ಡ್ರೈವಿಂಗ್ ಲೈಸನ್ಸ್ / 10th or 12th ಅಂಕಪಟ್ಟಿ ಪ್ರತಿ (ಜನ್ಮ ದಿನಾಂಕದ ಪುರಾವೆಗೆ)
⇒ ಆಧಾರ್ ಕಾರ್ಡ್/ ಮನೆಯ ವಿದ್ಯುತ್ ಬಿಲ್/ ಗ್ಯಾಸ್ ಬಿಲ್ (ವಾಸಸ್ಥಳ ಪುರಾವೆಗೆ)
ಈಗಾಗಲೇ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ ನಾಗರೀಕರಾಗಲು "ಕರ್ನಾಟಕ ಮುಖ್ಯ ಚುನಾವಣಾಧಿಕಾರಿ" ಅಧಿಕೃತ ಪಟ್ಟಿ ವೆಬ್ ಸೈಟ್ ಭೇಟಿ ನೀಡಿ ಅಂತಿಮ ಮತದಾರ ಪಟ್ಟಿ 2024- ರಲ್ಲಿ ನಿಮ್ಮ ಹೆಸರು ಇದೆಯೇ ಎಂದು ತಿಳಿದುಕೊಳ್ಳಿ. ಇಲ್ಲವಾದಲ್ಲಿ ಕೂಡಲೇ ಅರ್ಜಿ ಸ್ಲಲಿಸಲು ಸಂಪೂರ್ಣ ಮಾಹಿತಿ ಓದಿ.
Tags
Govt.scheme