ಕೇಂದ್ರವು ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (PM Kisan Scheme) ಹೊರತಂದಿದೆ. ಇದೊಂದು ಕೇಂದ್ರ ವಲಯದ ಯೋಜನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ (PM Narendra Modi) ರೈತರಿಗಾಗಿ ಪರಿಚಯಿಸಿದ್ದಾರೆ. ಕೃಷಿಯೋಗ್ಯ ಭೂಮಿ ಹೊಂದಿರುವ ರೈತರಿಗೆ (Farmers) ಆರ್ಥಿಕ ಸಹಾಯ ಮತ್ತು ನೆರವು ನೀಡುವುದು ಯೋಜನೆಯ ಮುಖ್ಯ ಗುರಿಯಾಗಿದೆ.
ಈ ಯೋಜನೆಯಡಿ ಅನ್ನದಾತರು ಪ್ರತಿ ವರ್ಷ 3 ಕಂತುಗಳಲ್ಲಿ ಹಣ ಪಡೆಯುತ್ತಿದ್ದಾರೆ. ಪ್ರತಿ ರೈತರ ಬ್ಯಾಂಕ್ ಖಾತೆಗೆ 2 ಸಾವಿರ ಜಮಾ ಆಗುತ್ತದೆ. ಅಂದರೆ ವರ್ಷಕ್ಕೆ 6 ಸಾವಿರದಂತೆ ಬರುತ್ತದೆ. ಈವರೆಗೆ ಕೇಂದ್ರ ಸರ್ಕಾರ 15 ಕಂತು ಹಣ ನೀಡಿದ್ದು, 16ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ.
ಯೋಜನೆಗೆ ಯಾರು ಅರ್ಹರು?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಹರಾಗಿರುವ ಜನರು ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಸಾಗುವಳಿ ಭೂಮಿಯನ್ನು ಹೊಂದಿರುವ ರೈತರಾಗಿರಬೇಕು.
ಯೋಜನೆಯಿಂದ ಯಾರು ವಿನಾಯಿತಿ ಪಡೆದಿದ್ದಾರೆ?
ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರು, ಸಾಂಸ್ಥಿಕ ಭೂಮಿ ಹೊಂದಿರುವವರು, ಕೆಲಸ ಮಾಡುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ತಿಂಗಳಿಗೆ 10,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ಪಡೆಯುವ ಪಿಂಚಣಿದಾರರಿಗೆ PM-KISAN ಯೋಜನೆಯ ಪ್ರಯೋಜನಗಳು ಅನ್ವಯಿಸುವುದಿಲ್ಲ.
ಹಣ ಪಡೆಯುವ ಮುನ್ನ EKYC ಪೂರ್ಣಗೊಳಿಸಿ:
ಫಲಾನುಭವಿಗಳು ರೂ 2,000 ಕಂತು ಪಡೆಯಲು ತಮ್ಮ ಆನ್‌ಲೈನ್ eKYC ಅನ್ನು ಪೂರ್ಣಗೊಳಿಸಬೇಕಾಗಿದೆ. KYC ಮಾಡಲು ಕೊನೆಯ ದಿನಾಂಕ 31 ಜನವರಿ 2024 ಆಗಿದ್ದು, ಈ ದಿನಕ್ಕೂ ಮುನ್ನವೇ ಇದನ್ನು ಪೂರೈಸಬೇಕು.ಯಾವ ಫಲಾನುಭವಿಗಳು KYC ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಿಲ್ಲವೋ ಅವರು ರೈತರು 16ನೇ ಕಂತಿನ ಪಾವತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಯಾವಾಗ ಬರುತ್ತೆ 16ನೇ ಕಂತಿನ ಹಣ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) 16 ನೇ ಕಂತು ಫೆಬ್ರವರಿ ಅಥವಾ ಮಾರ್ಚ್ ತಿಂಗಳುಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ, ನಿಖರವಾದ ದಿನಾಂಕವನ್ನು ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ.ಪಿಎಂ ಕಿಸಾನ್ 15 ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು 15 ನವೆಂಬರ್ 2023 ರಂದು ‘ಜನಜಾತಿಯ ಗೌರವ್ ದಿವಸ್’ ನಲ್ಲಿ ಬಿಡುಗಡೆ ಮಾಡಿದ್ದರು.
ನೋಂದಣಿ ಮಾಡುವುದು ಹೇಗೆ?
-pmkisan.gov.in. ಈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ,
-ಮುಖಪುಟದಲ್ಲಿ, ರೈತರ ಕಾರ್ನರ್‌ಗೆ ಹೋಗಿ.
-ಈಗ ‘ನ್ಯೂ ಫಾರ್ಮರ್ ರಿಜಿಸ್ಟ್ರೇಷನ್ʼ ಆಯ್ಕೆಯನ್ನು ಕ್ಲಿಕ್ ಮಾಡಿ.
-ಇಲ್ಲಿ ಹೋದ ನಂತರ ಗ್ರಾಮೀಣ ರೈತರ ನೋಂದಣಿ ಅಥವಾ ನಗರ ರೈತರ ನೋಂದಣಿ ಎಂಬ ಎರಡು ಆಯ್ಕೆಗಳಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಿ.
-ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ರಾಜ್ಯದ ಹೆಸರು ಮತ್ತು ಹೆಚ್ಚಿನವುಗಳಂತಹ ಅಗತ್ಯವಿರುವ ಎಲ್ಲಾ ವಿವರಗಳನ್ನು ಅಲ್ಲಿ ಭರ್ತಿ ಮಾಡಿ.
-ನಂತರ ’ ಗೆಟ್ OTP’ ಮೇಲೆ ಕ್ಲಿಕ್ ಮಾಡಿ.

-ಹೀಗೆ ಮಾಡಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ನಂತರ ಆ ಒಟಿಪಿಯನ್ನು ಅಲ್ಲಿ ಸಲ್ಲಿಸಬೇಕಾಗುತ್ತದೆ.
-ನೀವು ಬ್ಯಾಂಕ್ ಖಾತೆ ವಿವರಗಳು, ವೈಯಕ್ತಿಕ ಮಾಹಿತಿ, ರಾಜ್ಯದ ಹೆಸರು, ಜಿಲ್ಲೆಯ ಹೆಸರು ಮತ್ತು ಹೆಚ್ಚಿನ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್ ಪ್ರಕಾರ ಈ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
-‘ಆಧಾರ್ ದೃಢೀಕರಣಕ್ಕಾಗಿ’ ಕ್ಲಿಕ್ ಮಾಡಿ ಮತ್ತು ಸಲ್ಲಿಸಿ.
-ಒಮ್ಮೆ ಆಧಾರ್ ದೃಢೀಕರಣವು ಪೂರ್ಣಗೊಂಡ ನಂತರ, ಭೂಮಿಯ ಮಾಹಿತಿಯಂತಹ ಹೆಚ್ಚಿನ ವಿವರಗಳನ್ನು ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
-ಈ ಎಲ್ಲಾ ಆದಮೇಲೆ ಸೇವ್ ಆಯ್ಕೆಯನ್ನು ಒತ್ತಿರಿ.

Tags
Govt.scheme