ಯಾವುದೇ ಶೀರ್ಷಿಕೆಯಿಲ್ಲ

 ಕಾರ್ಮಿಕ ಇಲಾಖೆಯಲ್ಲಿ ಬೃಹತ್ ಉದ್ಯೋಗ ಅವಕಾಶ : ಅರ್ಜಿ ಸಲ್ಲಿಸಲು ಕೆಲವು ದಿನ ಮಾತ್ರ ಅವಕಾಶ!



ನಮಸ್ಕಾರ ಸ್ನೇಹಿತರೆ ಹೊಸ ನೇಮಕಾತಿ ಪ್ರಕಟಣೆ ಲೋಕಸೇವಾ ಆಯೋಗದಿಂದ ಆಗಿದ್ದು ಕಾರ್ಮಿಕ ಮತ್ತು ಔದ್ಯೋಗಿಕ ಇಲಾಖೆಯ ಅಡಿಯಲ್ಲಿ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಇಪಿಎಫ್ಓ ನಲ್ಲಿ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳ ಬರ್ತಿಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ ವಯೋಮಿತಿ ವೇತನ ಶ್ರೇಣಿ ಆಯ್ಕೆಯ ವಿಧಾನ ಅರ್ಜಿ ಶುಲ್ಕ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಂಡು ಅರ್ಜಿಯನ್ನು ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಲ್ಲಿಸಬಹುದು.

whatss

ಕಾರ್ಮಿಕ ಇಲಾಖೆಯಲ್ಲಿ ಖಾಲಿ ಹುದ್ದೆಗಳು :

ಲೋಕಸೇವಾ ಆಯೋಗದಿಂದ ಹೊಸ ನೇಮಕಾತಿ ಪ್ರಕಟಣೆಯಾಗಿದ್ದು ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗಿಕ ಇಲಾಖೆಯ ಅಡಿಯಲ್ಲಿ ಖಾಲಿ ಇರುವಂತಹ ಕೆಲವೊಂದು ಹುದ್ದೆಗಳಿಗೆ ಅರ್ಜಿಯನ್ನು ಅಹ್ವಾನ ಮಾಡಲಾಗಿದೆ. ಅದರಂತೆ ಯಾವ ಹುದ್ದೆಗಳು ಖಾಲಿ ಇವೆ ಎಂದು ನೋಡುವುದಾದರೆ.

 ಇಲಾಖೆಯ ಹೆಸರು                                    ಕೇಂದ್ರ ಕಾರ್ಮಿಕ ಮತ್ತು ಔದ್ಯೋಗಿಕ ಇಲಾಖೆ 

ಖಾಲಿ ಇರುವ ಹುದ್ದೆಗಳ ಹೆಸರು                ಪರ್ಸನಲ್ ಅಸಿಸ್ಟೆಂಟ್ 

ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ      323

ವೇತನ ಶ್ರೇಣಿ                                                44900 ರಿಂದ 142400


ಹೀಗೆ ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ್ದು ಮೂಲವೇತನದ ಜೊತೆಗೆ ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಡಿಎ ಎಚ್ ಆರ್ ಎ ಮತ್ತು ಇನ್ನಿತರ ಸೌಲಭ್ಯಗಳನ್ನು ನೀಡಲಾಗುತ್ತದೆ.ವರ್ಗಗಳ ಅನುಸಾರ ಹುದ್ದೆಗಳು :

ಕೇಂದ್ರ ಸರ್ಕಾರ ಕಾರ್ಮಿಕ ಇಲಾಖೆಯಲ್ಲಿ ಕಾಲಿ ಇರುವ ಹುದ್ದೆಗಳು :

ವರ್ಗಗಳ ಅನುಸಾರವಾಗಿ ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ನೋಡುವುದಾದರೆ,

1. ಸಾಮಾನ್ಯ ವರ್ಗದಲ್ಲಿ : 132 ಹುದ್ದೆಗಳು 
2. ಈ ಡಬ್ಲ್ಯೂ ಎಸ್ ನಲ್ಲಿ :32 ಹುದ್ದೆಗಳು 
3. ಓಬಿಸಿ ವರ್ಗದಲ್ಲಿ 87 ಹುದ್ದೆಗಳು 
4. ಎಸ್ಸಿ ವರ್ಗದಲ್ಲಿ48 ಹುದ್ದೆಗಳು 
5. ಎಸ್ ಟಿ ವರ್ಗದಲ್ಲಿ24 ಹುದ್ದೆಗಳು 
ಹೀಗೆ ವರ್ಗಗಳಿಗೆ ಅನುಸಾರವಾಗಿ ಹುದ್ದೆಗಳಲ್ಲಿ ಮೀಸಲಾತಿ ನೀಡಲಾಗಿದೆ.


ವಿದ್ಯಾರ್ಹತೆ :

ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವಂತಹ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದೇ ಪದವಿಯಲ್ಲಿ ಉತ್ತೀರ್ಣ ಹೊಂದಿರಬೇಕು.

ವಯಸ್ಸಿನ ಮಿತಿ :

ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯಲ್ಲಿ ಸಡಲಿಕ್ಕೆ ಮಾಡಲಾಗಿದ್ದು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ18 ವರ್ಷ ಹಾಗೂ ಗರಿಷ್ಠ30 ವರ್ಷ ಮೀರಿರಬಾರದು.

ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಮಾಡಲಾಗಿದೆ.

1. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ 
2. ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ 
3. ಅಂಗವಿಕಲ ಅಭ್ಯರ್ಥಿಗಳಿಗೆ10 ವರ್ಷ ವಯಸ್ಸಿನ ಮಿತಿಯಲ್ಲಿ ಸಡಿಲಿಕ್ಕೆ ಮಾಡಲಾಗಿದೆ.




ಅರ್ಜಿ ಶುಲ್ಕದ ವಿವರ :

ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕು.

1. ೨೫ ರೂಪಾಯಿ ಸಾಮಾನ್ಯ ವರ್ಗ ಓಬಿಸಿ ಮತ್ತು ಈ ಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ ನಿಗದಿಪಡಿಸಲಾಗಿದೆ.

2. ಯಾವುದೇ ಅಡ್ಜಸ್ಟ್ ಶುಲ್ಕವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಹಿಳೆಯರು ಅಂಗವಿಕಲರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಇರುವುದಿಲ್ಲ.
ಈ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಆನ್ಲೈನ್ ಮುಖಾಂತರವೇ ಪಾವತಿಸಬೇಕು.


ಆಯ್ಕೆಯ ವಿಧಾನ :

ಸರ್ಕಾರದಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆಯನ್ನು ನಡೆಸುವುದರ ಮೂಲಕ ಆಯ್ಕೆ ಮಾಡಲಾಗುತ್ತದೆ.


ಪ್ರಮುಖ ದಿನಾಂಕಗಳು :

ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಪ್ರಮುಖ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

1. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 07-03-2024
2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :27- 03-2024
3.ಅರ್ಜಿ ಸಲ್ಲಿಸುವ ಲಿಂಕ್ :
     https://labour.karnataka.gov.in/

ಕೂಡಲೇ ಮೇಲ್ಕಂಡ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ, ಲೇಖನ ಸಂಪೂರ್ಣವಾಗಿ ಓದಿದಕ್ಕೆ ಧನ್ಯವಾದಗಳು.




 


              
ಲೋಕಸೇವಾ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು