https://karresults.nic.in/slpusuppsecond.asp
ಈ ವೆಬಸೈಟ್ ಮೂಲಕ ಇಂದು ಪಿ ಯು ಸಿ ರಿಸಲ್ಟ್ ನೋಡಬಹುದು :
2023 ಮತ್ತು 24 ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇದೇ ಮಾರ್ಚ್ 30 ಅಂದ್ರೆ ಇಂದು ಶನಿವಾರದಂದು ಕರ್ನಾಟಕ ಶಾಲಾ ಪರಿಕ್ಷಾ ಮೌಲ್ಯ೦ಕಣ ಮಂಡಳಿ (KSEAB ) ಅಧಿಕೃತವಾಗಿ ಪ್ರಕಟಿಸಲಿದೆ. ಪ್ರಥಮ ಪಿಯುಸಿ ಫಲಿತಾಂಶ ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ ಬೆಳ್ಳಿಗೆ 9 ರಿಂದ 11 ಗಂಟೆ ಒಳಗೆ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳ ರೂಲ್ ನಂಬರ್ ಆಧರಿಸಿ ಫಲಿತಾಂಶಗಳನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಈ ಕೆಳಗೆ ಕೊಡಲಾಗಿದೆ.
ರಾಜ್ಯದಲ್ಲಿ ಫೆಬ್ರುವರಿ ತಿಂಗಳು 12 ರಿಂದ 27 ನೇ ತರಿಖಿನವರೆಗೆ ಪ್ರಥಮ ಪಿಯುಸಿ ವಿಭಾಗದ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು, ಈಗಾಗಲೇ ಎಲ್ಲ ಪರೀಕ್ಷೆಗಳ ಮೌಲ್ಯಮಾಪನ ಮುಗಿದಿದ್ದು ಫಲಿತಾಂಶವನ್ನು ಇಂದು ಮಾರ್ಚ್ 30 ರಂದು ಮಂಡಳಿ ಪ್ರಕಟಿಸಲು ಮುಂದಾಗಿದೆ, ಮಂಡಳಿಯ ಅಧಿಕೃತ ವೆಬಸೈಟ್ನಲ್ಲಿ karresults.nic.in/ ಫಲಿತಾಂಶಗಳು ಲಭ್ಯವಾಗಲಿದ್ದು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕನೇ ರಿಸಲ್ಟ್ ಗಳನ್ನೂ ನೋಡಿಕೊಳ್ಳಬಹುದು, ಮತ್ತು ಇಂದು ಎಲ್ಲ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ ಕಾಲೇಜಿಗೆ ಭೇಟಿ ನೀಡಿ ಫಲಿತಾಂಶಗಳನ್ನು ತಿಳಿದುಕೊಳ್ಳಬಹುದು.