PUC ಪಾಸಾದವರಿಗೆ ಸರ್ವೇಯರ್ ಹುದ್ದೆಗೆ ಅರ್ಜಿ ಆಹ್ವಾನ ||

PUC ಪಾಸಾದವರಿಗೆ ಸರ್ವೇಯರ್ ಹುದ್ದೆಗೆ ಅರ್ಜಿ ಆಹ್ವಾನ ||


ಭೂಮಾಪಕ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿನ ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ-100 "ಭೂಮಾಪಕರು"-ಸಮೂಹ 'ಸಿ' ಹುದ್ದೆಗಳ ನೇಮಕಾತಿ ಅಧಿಸೂಚನೆ:



  

 
                      ಆಯೋಗ ಕರ್ನಾಟಕ ಸಾಮಾನ್ಯ ಸೇವೆಗಳು (ಭೂಮಾಪನ,ಕಂದಾಯ ವ್ಯವಸ್ಥೆ, ಶಾಖೆ) (ನೇಮಕಾತಿ) ನಿಯಮಗಳು 1990 ಹಾಗೂ ತಿದ್ದುಪಡಿ ನಿಯಮ 2009 ಮತ್ತು 2013 ಹಾಗೂ ಕರ್ನಾಟಕ ನಾಗರೀಕ ಸೇವೆಗಳು (ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಹಾಗೂ ತಿದ್ದುಪಡಿ ನಿಯಮ 2022 ರನ್ವಯ ಮತ್ತು ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸಿ ಹೊರಡಿಸುವ ಮೀಸಲಾತಿ ನಿಯಮಗಳನ್ವಯ ಈ ಕೆಳಕಂಡ ಹೈದರಾಬಾದ್ - ಕರ್ನಾಟಕ ಸ್ಥಳೀಯ ವೃಂದದ ಗ್ರೂಪ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಶೈಕ್ಷಣಿಕ ವಿದ್ಯಾರ್ಹತೆ :

1. ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ ಇ/ ಬಿ ಟೆಕ್ ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು. 

2. ಪದವಿ ಪೂರ್ವ ಶಿಕ್ಷಣ ಅಥವಾ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಜರುಗಿಸುವ ೧೨ನೇ ತರಗತಿ (CBSE, ICSE) ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ ಶೇಕಡಾ ೬೦ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.

3. ಕರ್ನಾಟಕ ರಾಜ್ಯ ಸರ್ಕಾರ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್ ಅಂಡ್ ಸಿಟಿ ಸರ್ವೆಯ ಪದವಿ ಪೂರ್ವ ಡಿಪ್ಲೋಮ ದಲ್ಲಿ ಉತ್ತೀರ್ಣರಾಗಿರಬೇಕು.

whatss

ಅರ್ಹತಾ ಷರತ್ತುಗಳು :

💨  ಭಾರತೀಯ ನಾಗರೀಕರಣಗೀತಕ್ಕದ್ದು 

💨  ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಹೆಂಡತಿಯಿರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯ ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆಯದೇ ನೇಮಕಾತಿಗೆ ಅರ್ಹರಾಗುವುದಿಲ್ಲ.

💨  ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.

💨  ದೈಹಿಕವಾಗಿ ಅನರ್ಹರಾಗಿದ್ದರೆಂಬುದಾಗಿ ವೈದ್ಯಕೀಯ ಮಂಡಳಿಯ ವರದಿಯ ಮೇಲೆ ಅನರ್ಹರೆಂಬುದಾಗಿ ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ರಾಜ್ಯ  ಸರ್ಕಾರವು ಕಾಯ್ದಿರಿಸಿಕೊಂಡಿದೆ.

💨  ಕೇಂದ್ರ ಅಥವಾ  ಕರ್ನಾಟಕ ಅಥವಾ ಇತರೆ ರಾಜ್ಯದ ಲೋಕಸೇವಾ ಆಯೋಗದಿಂದ ನಡೆಸಲಾಗುವ ಪರೀಕ್ಷೆಗಳಿಂದ ಅಥವಾ ನೇಮಕಾತಿಗಳಿಂದ ಖಾಯಂ ಆಗಿ ಡಿಬಾರ್ ಆದ ವ್ಯಕ್ತಿಗಳು ನೇಮಕಾತಿಗೆ ಅರ್ಹರಾಗುವುದಿಲ್ಲ.

💨  ಯಾವುದೇ ನೈತಿಕ ಪರಿಭಾಷೆಗೆ ಶಿಕ್ಷೆಗೆ ಒಳಪಟ್ಟ ವ್ಯಕ್ತಿ ಅಥವಾ ಕೇಂದ್ರ ಅಥವಾ ಕರ್ನಾಟಕ ಅಥವಾ ಇತರೆ ರಾಜ್ಯದ ಲೋಕಸೇವಾ ಆಯೋಗದಿಂದ ನಡೆಸಲಾಗುವ ಪರೀಕ್ಷೆಗಳಿಂದ ಅಥವಾ ನೇಮಕಾತಿಗಳಿಂದ ತಾತ್ಕಾಲಿಕವಾಗಿ ಡಿಬಾರ್ ಆದ ಅಥವಾ ಅನರ್ಹಗೊಂಡ ವ್ಯಕ್ತಿಯು, ಸರ್ಕಾರವು ಎಲ್ಲಾ ಸಂದರ್ಭಗಳನ್ನು  ಮರುಪರಿಶೀಲಿಸಿ ಅವರು ನೇಮಕಾತಿಗೆ ಅರ್ಹರೆಂದು ಪಡಿಗನಿವವರೆಗೂ ನೇಮಕಾತಿಗೆ ಅರ್ಹರಾಗುವುದಿಲ್ಲ. 

ಅರ್ಜಿ ಸ್ವೀಕೃತಿ ಕಾಲಮಿತಿ :

☆   ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ 
11/03/2024

☆  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  
11/04/2024

☆  ತಾತ್ಪೂರ್ವಿಕ ಪರೀಕ್ಷಾ ದಿನಾಂಕ 
ಕನ್ನಡ ಭಾಷಾ ಪರೀಕ್ಷೆ 06/07/2024
ಸ್ಪರ್ಧಾತ್ಮಕ ಪರೀಕ್ಷಾ 07/07/2024

ಶುಲ್ಕ :

✔  ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ   600/-

✔  ಪ್ರವರ್ಗ 2(ಎ),  2(ಬಿ),  3(ಎ),   3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ  300/-

✔  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ  50/-
  

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು