ಕೇಂದ್ರದಿಂದ ಆಧಾರ್ ಕಾರ್ಡ್ ರೂಲ್ಸ್ ಚೇಂಜ್ :
ಭಾರತೀಯ ಪ್ರಜೆ ಆದವರಿಗೆ ಆಧಾರ್ ಎಲ್ಲ ಅಗತ್ಯ ಕೆಲಸಕ್ಕೆ ಬೇಕಾಗಿದೆ ಎನ್ನುವುದರ ಅರಿವಿದೆ. ಬ್ಯಾಂಕ್ ಖಾತೆಯನ್ನು ತೆರೆಯುವುದರಿಂದ ಹಿಡಿದು ಶಿಕ್ಷಣ ಸೇರಿದಂತೆ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಆಧಾರ್ ಕಾರ್ಡ್ ಮುಖ್ಯವಾಗಿದೆ.
ಆಧಾರ್ ಮಾಹಿತಿ ನೀಡದೆ ನೀವು ಯಾವುದೇ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಲು ಸಾಧ್ಯವಿಲ್ಲ. ಸದ್ಯ UIDAI ಆಧಾರ್ ಕುರಿತಂತೆ ದೊಡ್ಡ ನವೀಕರಣವನ್ನು ನೀಡಿದೆ.
ಕೇಂದ್ರದಿಂದ ಆಧಾರ್ ಕಾರ್ಡ್ ಕುರಿತಂತೆ ಇನ್ನೊಂದು ಬಿಗ್ ಅಪ್ಡೇಟ್ >
ಸರ್ಕಾರದ ನಿಯಮಗಳ ಪ್ರಕಾರ, 10 ವರ್ಷ ಹಳೆಯ ಆಧಾರ್ ಕಾರ್ಡ್ ನ ಮಾಹಿತಿಯನ್ನು ನವೀಕರಿಸುವುದು ಅವಶ್ಯಕ. ಮಾರ್ಚ್ 14 ರೊಳಗೆ ನಿಮ್ಮ 10 ವರ್ಷದ ಆಧಾರ್ ಕಾರ್ಡ್ ನಲ್ಲಿ ಹೆಸರು ಅಥವಾ ವಿಳಾಸವನ್ನು ನೀವು ನವೀಕರಿಸಿದರೆ, ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಸಾಮಾನ್ಯವಾಗಿ ಆಧಾರ್ ನಲ್ಲಿ ಪ್ರತಿ ವಿವರವನ್ನು (ಜನ್ಮ ದಿನಾಂಕ ಮತ್ತು ಬಯೋಮೆಟ್ರಿಕ್ ಡೇಟಾ) ನವೀಕರಿಸಲು ರೂ. 50 ಶುಲ್ಕವಿದೆ. ನೀವು Off Line ನಲ್ಲಿ ಇದನ್ನು ನವೀಕರಿಸಿದರೂ ಸಹ, ನೀವು UIDAI ನಿಗದಿಪಡಿಸಿದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಈ ದಿನಾಂಕದ ನಂತರ ಈ ಸೇವೆ ಲಭ್ಯವಿಲ್ಲ.
UIDAI ಈ ಹಿಂದೆ ಡಿಸೆಂಬರ್ 14, 2023 ರವರೆಗೆ ಆಧಾರ್ ಅನ್ನು ಉಚಿತವಾಗಿ Update ಮಾಡುವ ಸೌಲಭ್ಯವನ್ನು ನೀಡಿತ್ತು. ನಂತರ ಅದನ್ನು ಮಾರ್ಚ್ 14, 2024 ರವರೆಗೆ ವಿಸ್ತರಿಸಲಾಗಿದೆ. 10 ವರ್ಷಗಳ ಹಿಂದೆ Aadhar Card ಮಾಡಿದವರಿಗೆ ಅಥವಾ ಅದನ್ನು ನವೀಕರಿಸದವರಿಗೆ ಇದೀಗ UIDAI ಒಂದೊಳ್ಳೆ ಅವಕಾಶವನ್ನು ನೀಡಿದೆ. ಇನ್ನು ಹತ್ತು ದಿನಗಳ ಕಾಲ Online ನಲ್ಲಿ ಯಾವುದೇ ಶುಲ್ಕವಿಲ್ಲದೆ Aadhar Card ಅನ್ನು ನವೀಕರಿಸಿಕೊಳ್ಳಬಹುದು. ಮಾರ್ಚ್ 14 ರ ನಂತರ ಈ ಸೇವೆಗೆ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎನ್ನುವುದು ನಿಮಗೆ ಅರಿವಿರಲಿ.
ಆನ್ಲೈನ್ ಅಪ್ಡೇಟ್ ಮಾಡುವುದು ಹೇಗೆ?
*ಮೊದಲು UIDAI Website ಗೆ ಭೇಟಿ ನೀಡಬೇಕು.
*UIDAI Website ನಲ್ಲಿ ಲಾಗಿನ್ ಆಗಿ Password ರಚಿಸಬೇಕು.
*ನಂತರ ನನ್ನ ಆಧಾರ್ ಮೇಲೆ ಟ್ಯಾಬ್ ಮಾಡಿ ಆಧಾರ್ ವಿವರಗಳನ್ನು ನವೀಕರಿಸಿ ನಮೂದಿಸಬೇಕು.
*ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಲಾಗಿನ್ ಆಗಬೇಕು.
*ನಂತರ ನೀವು ಬದಲಾವಣೆ ಮಾಡಬೇಕಾದ ವಿವರವನ್ನು ಭರ್ತಿ ಮಾಡಬೇಕು.
Tags
Govt.scheme