ಸೀತಾರಾಮ್ ಜಿಂದಾಲ್ ಸ್ಕಾಲರ್ ಶಿಪ್ : ಪಿಯು ಇಂದ ಪಿಜಿ ವರೆಗೆ ಪ್ರತಿ ತಿಂಗಳು 500 ರಿಂದ 3200 ವಿದ್ಯಾರ್ಥಿವೇತನ
Sitaram Jindal Scholarship 2024 : ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಉಪಕ್ರಮವಾಗಿ ಸೀತಾರಾಮ್ ಜಿಂದಾಲ್ ಪೌಂಡೇಶನ್ ಪಿಯುಸಿ, ಐಟಿಐ, ಡಿಪ್ಲೋಮ, ಪದವಿ, ಬಿಇ, ಸ್ನಾತಕೋತ್ತರ ಪದವಿ ಎಲ್ಲ ವಿದ್ಯಾರ್ಥಿಗಳಿಗೂ ಪ್ರತಿ ತಿಂಗಳು ರೂ. 500 ರಿಂದ 3200 ವರೆಗೆ ವಿದ್ಯಾರ್ಥಿವೇತನ ನೀಡುತ್ತಿದೆ. ಓದಿಗಾಗಿ ಸಹಾಯಧನ ಬೇಕಾದವರು ಅರ್ಜಿ ಸಲ್ಲಿಸಿ.
ಸೀತಾರಾಮ್ ಜಿಂದಾಲ್ ಪೌಂಡೇಶನ್ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಸ್ಕಾಲರ್ ಶಿಪ್ ನೀಡುತ್ತಿದೆ. ಈ ಸ್ಕಾಲರ್ ಶಿಪ್ ಹೆಸರು ಎಸ್ ಆರ್ ಜಿಂದಾಲ್ ಸ್ಕಾಲರ್ ಶಿಪ್ ಸ್ಕೀಮ್. ಬಡ ವಿದ್ಯಾರ್ಥಿಗಳಿಗೆ ನೀಡುವ ಈ ಸ್ಕಾಲರ್ ಶಿಪ್ ಸ್ಕೀಮ್ ಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ. 2024 ರ ಡಿಸೆಂಬರ್ 31 ರವರೆಗೂ - ಅಂದರೆ ಈ ವರ್ಷ ಪೂರ್ತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.ಕೇವಲ ಸರ್ಕಾರಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೆ, ಖಾಸಗಿ ಶಾಲಾ - ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
ಎಸ್ ಆರ್ ಜಿಂದಾಲ್ ಸ್ಕಾಲರ್ ಶಿಪ್ ಸ್ಕೀಮ್ ಕುರಿತು ವಿಶೇಷತೆ ಮತ್ತು ಗುಡ್ ನ್ಯೂಸ್ ಎಂದರೆ ಈ ವಿದ್ಯಾರ್ಥಿವೇತನ ಸ್ಕೀಮ್ ಗೆ ಪಿಯುಸಿ ವಿದ್ಯಾರ್ಥಿಗಳು, ಐಟಿಐ ವಿದ್ಯಾರ್ಥಿಗಳು, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಡಿಪ್ಲೋಮ ಕೋರ್ಸ್ ವಿದ್ಯಾರ್ಥಿಗಳು, ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಈ ಯಾವುದೇ ಕೋರ್ಸ್ ಓದುತ್ತ ಹಾಸ್ಟೆಲ್ ನಲ್ಲಿ ಸಹ ಉಳಿದುಕೊಂಡಿರುವ ವಿದ್ಯಾರ್ಥಿಗಳೆಲ್ಲರು ಸಹ ಅರ್ಜಿ ಸಲ್ಲಿಸಬಹುದು.
ಎಸ್ ಆರ್ ಜಿಂದಾಲ್ ಸ್ಕಾಲರ್ ಶಿಪ್ ಸ್ಕೀಮ್ ಗೆ ಅರ್ಜಿ ಸಲ್ಲಿಸಲು ಅರ್ಹತೆಗಳು ಏನು, ಅರ್ಜಿ ಸಲ್ಲಿಸುವುದು ಹೇಗೆ, ಇತರೆ ಯಾವೆಲ್ಲ ಅರ್ಹತೆಗಳು ಇರಬೇಕು, ಯಾವ ಕೋರ್ಸ್ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ ಎಂಬೆಲ್ಲ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಕೆಟಗರಿ ಎ - ಪಿಯುಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್
ಕೆಟಗರಿ ಎ ಅಡಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ.
ಪ್ರತಿ ತಿಂಗಳು ಹುಡುಗರಿಗೆ ರೂ. 500 .
ಪ್ರತಿ ತಿಂಗಳು ಹುಡುಗಿಯರಿಗೆ ರೂ. 700 .
ಅರ್ಜಿ ಸಲ್ಲಿಸಲು ಹಿಂದಿನ ವರ್ಷದ ಶಿಕ್ಷಣದಲ್ಲಿ ಹುಡುಗರು ಶೇಕಡಾ. 70 ಅಂಕಗಳೊಂದಿಗೆ, ಹುಡುಗಿಯರು ಶೇಕಡಾ. 65 ಅಂಕಗಳೊಂದಿಗೆ ಪಾಸ್ ಆಗಿರಬೇಕು.
ಕೆಟಗರಿ ಬಿ - ಐಟಿಐ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
ಸರ್ಕಾರಿ ಐಟಿಐ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 500.
ಖಾಸಗಿ ಐಟಿಐ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 700.
ಅರ್ಜಿ ಸಲ್ಲಿಸಲು ಹಿಂದಿನ ವರ್ಷದ ಶಿಕ್ಷಣದಲ್ಲಿ ಹುಡುಗರು ಶೇಕಡಾ. 45 ಅಂಕಗಳೊಂದಿಗೆ, ಹುಡುಗಿಯರು ಶೇಕಡಾ. 35 ಅಂಕಗಳೊಂದಿಗೆ ಪಾಸ್ ಆಗಿರಬೇಕು.
ಕೆಟಗರಿ ಸಿ - ಪದವಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್
ಬಿಎ, ಬಿಕಾಂ, ಬಿಎಸ್ಸಿ,ಬಿಎಫ್ ಎ, ಬಿಸಿಎ, ಬಿಬಿಎ,ಬಿಬಿಎಂ, ೫ ವರ್ಷದ ಇಂಟಿಗ್ರೇಟೆಡ್ ಕೋರ್ಸ್ ಓದುತ್ತಿರುವವರಿಗೂ, ಪರಿಸರ ವಿಜ್ಞಾನಿಗಳು, ಪರಿಸರ ಅಭಿಯಂತರರು, ಪರಿಸರ ಪತ್ರಕರ್ತರಿಗೂ ಸಹ ಈ ಸ್ಕಾಲರ್ ಶಿಪ್ ಲಭ್ಯ.
ಹುಡುಗರಿಗೆ ಪ್ರತಿ ತಿಂಗಳು ರೂ. 1100.
ಹುಡುಗಿಯರಿಗೆ ಪ್ರತಿ ತಿಂಗಳು ರೂ. 1400.
ಅರ್ಜಿ ಸಲ್ಲಿಸಲು ಹಿಂದಿನ ವರ್ಷದ ಶಿಕ್ಷಣದಲ್ಲಿ ಹುಡುಗರು ಶೇಕಡಾ. 55 ಅಂಕಗಳೊಂದಿಗೆ, ಹುಡುಗಿಯರು ಶೇಕಡಾ. 50 ಅಂಕಗಳೊಂದಿಗೆ ಪಾಸ್ ಆಗಿರಬೇಕು.
ಅಂಗವಿಕಲ ವಿದ್ಯಾರ್ಥಿಗಳಿಗೆ ರೂ. 1400.
ವಿಧವೆಯರು, ಮಾಜಿ ಸೈನಿಕರಿಗೆ ರೂ. 1500.
ಸ್ನಾತಕೋತ್ತರ ಕೋರ್ಸ್ ಓದುವವರಿಗೆ ವಿದ್ಯಾರ್ಥಿವೇತನ
ಎಂಎ, ಎಂ.ಫಿಲ್, ಎಂ.ಕಾಂ, ಎಂ. ಲಿಬ್, ಎಂಬಿಎ, ಮಾಸ್ಟರ್ ಆಫ್ ಬ್ಯುಸಿನೇಸ್ ಎಕನಾಮಿಕ್ಸ್ /ಫೈನಾನ್ಸ್ / ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ / ಇಂಟರ್ ನ್ಯಾಷನಲ್ ಬ್ಯುಸಿನೇಸ್ /ಎಂಎಸ್ಸಿ /ಎಂವಿಎಸ್ಸಿ ಎಂ.ಎಸ್ಸಿ / ಎಂಸಿಎ, ಇತರೆ ಪಿಜಿ ಕೋರ್ಸ್, ೫ ವರ್ಷದ ಇಂಟಿಗ್ರೇಟೆಡ್ ಕೋರ್ಸ್, ಪರಿಸರ ವಿಜ್ಞಾನಿ / ಇಂಜಿನಿಯರ್ / ಜರ್ನಲಿಸ್ಟಗಳು, ಹಾಸ್ಪಿಟಲಿಟಿ ಕ್ಷೇತ್ರದಲ್ಲಿ ಇರುವವರು, ಸಾಮಾಜಿಕ ಕಾರ್ಯಕರ್ತರು ಅರ್ಜಿ ಸಲ್ಲಿಸಬಹುದು.
ಹುಡುಗರಿಗೆ ಮಾಸಿಕ ರೂ. 1500.
ಹುಡುಗಿಯರಿಗೆ ಮಾಸಿಕ ರೂ. 1800.
ಅರ್ಜಿ ಸಲ್ಲಿಸಲು ಹಿಂದಿನ ವರ್ಷದ ಶಿಕ್ಷಣದಲ್ಲಿ ಹುಡುಗರು ಶೇಕಡಾ. 60 ಅಂಕಗಳೊಂದಿಗೆ, ಹುಡುಗಿಯರು ಶೇಕಡಾ.55 ಅಂಕಗಳೊಂದಿಗೆ ಪಾಸ್ ಆಗಿರಬೇಕು.
ಅಂಗವಿಕಲ ವಿದ್ಯಾರ್ಥಿಗಳಿಗೆ ರೂ.1800.
ವಿಧವೆಯರು, ಮಾಜಿ ಸೈನಿಕರಿಗೆ ರೂ.1800.
ಕೆಟಗರಿ ಡಿ - ಡಿಪ್ಲೊಮ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್
ಡಿಪ್ಲೋಮ ಶಿಕ್ಷಣವನ್ನು ಯಾವುದೇ ವಿಷಯದಲ್ಲಿ ಓದುತ್ತಿರುವವರು, ಡಿಪ್ಲೋಮವನ್ನು ಮೆಡಿಕಲ್ ಕ್ಷೇತ್ರದಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು.
ಹುಡುಗರಿಗೆ ಮಾಸಿಕ ರೂ.1200.
ಹುಡುಗಿಯರಿಗೆ ಮಾಸಿಕ ರೂ.1000.
ಅರ್ಜಿ ಸಲ್ಲಿಸಲು ಹಿಂದಿನ ವರ್ಷದ ಶಿಕ್ಷಣದಲ್ಲಿ ಹುಡುಗರು ಶೇಕಡಾ. 55 ಅಂಕಗಳೊಂದಿಗೆ, ಹುಡುಗಿಯರು ಶೇಕಡಾ.50 ಅಂಕಗಳೊಂದಿಗೆ ಪಾಸ್ ಆಗಿರಬೇಕು.
ಕೆಟಗರಿ ಇ -ಇಂಜಿನಿಯರಿಂಗ್ ಮತ್ತು ಮೆಡಿಷನ್ ಕೋರ್ಸ್ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್
ಇಂಜಿನಿಯರಿಂಗ್ ಪದವಿ ( ಯಾವುದೇ ಸ್ಟ್ರೀಮ್ )
ಹುಡುಗರಿಗೆ ಮಾಸಿಕ ರೂ.2000.
ಹುಡುಗಿಯರಿಗೆ ಮಾಸಿಕ ರೂ.2300.
ಗ್ರಾಜುಯೇಟ್ ಇನ್ ಮೆಡಿಷನ್ ಕೋರ್ಸ್
ಹುಡುಗರಿಗೆ ಮಾಸಿಕ ರೂ.2500.
ಹುಡುಗಿಯರಿಗೆ ಮಾಸಿಕ ರೂ.3000.
ಇಂಜಿನಿಯರಿಂಗ್ ಪಿಜಿ ಕೋರ್ಸ್ ಗಳು, ಮೆಡಿಷನ್ ಪಿಜಿ ಕೋರ್ಸ್ ಗಳು
ಹುಡುಗರಿಗೆ ಮಾಸಿಕ ರೂ.2800.
ಹುಡುಗಿಯರಿಗೆ ಮಾಸಿಕ ರೂ.3200.
ಅರ್ಜಿ ಸಲ್ಲಿಸಲು ಹಿಂದಿನ ವರ್ಷದ ಶಿಕ್ಷಣದಲ್ಲಿ ಹುಡುಗರು ಶೇಕಡಾ. 65 ಅಂಕಗಳೊಂದಿಗೆ, ಹುಡುಗಿಯರು ಶೇಕಡಾ.60 ಅಂಕಗಳೊಂದಿಗೆ ಪಾಸ್ ಆಗಿರಬೇಕು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್
ಸೀತಾರಾಮ್ ಜಿಂದಾಲ್ ಪೌಂಡೇಶನ್ ಹಾಸ್ಟೆಲ್ ವಿದ್ಯಾರ್ಥಿಗಳಿಗೆ , ವಿದ್ಯಾರ್ಥಿವೇತನದ ಜತೆಗೆ ಈ ಕೆಳಗಿನಂತೆ ವಿವಿಧ ಕೋರ್ಸ್ ಅಧ್ಯಯನ ಮಾಡುತ್ತಿರುವವರಿಗೆ ಹೆಚ್ಚುವರಿ ಹಣ ನೀಡುತ್ತದೆ. ಐಟಿಐ / ಡಿಪ್ಲೋಮ / ಪದವಿ / ಪಿಜಿ ಕೋರ್ಸ್ ವಿದ್ಯಾರ್ಥಿಗಳಿಗೆ ರೂ. 1200.
ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ರೂ. 1800.
ಅರ್ಜಿ ಸಲ್ಲಿಸುವ ವಿಧಾನ, ವಿಳಾಸ
* ಮೇಲಿನ ಅರ್ಜಿ ಲಿಂಕ್ ಕ್ಲಿಕ್ ಮಾಡಿ. ಪಿಡಿಎಫ್ ಫೈಲ್ ಓಪನ್ ಆಗುತ್ತದೆ.
* ಡೌನ್ ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬೇಕು.
* ನಂತರ ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಭರ್ತಿ ಮಾಡಿ.
* ಭರ್ತಿ ಮಾಡಿದ ಅರ್ಜಿಯೊಂದಿಗೆ ಕೆಳಗೆ ತಿಳಿಸಲಾದ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಬೇಕಾದ ವಿಳಾಸ : The Trustte, Sitaram Jindal Foundation, Jindal Nagar, Tumkur Road, Bengaluru - 560073.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 2024 ರ ಡಿಸೆಂಬರ್ 31 ರವರೆಗೂ.
ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು
ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಯಾವುದೇ ಕೊನೆ ಪರೀಕ್ಷೆಯ ಅಂಕಪಟ್ಟಿ ಲಗತ್ತಿಸಬೇಕು.
ಎಸ್ ಎಸ್ ಎಲ್ ಸಿ ಅಂಕಪಟ್ಟಿ .
ಆದಾಯ ಪ್ರಮಾಣ ಪತ್ರ.
ಶೈಕ್ಷಣಿಕ ಕೋರ್ಸ್ ನ ವಾರ್ಷಿಕ ಅಡ್ಮಿಷನ್ ಶುಲ್ಕದ ರಶೀದಿ.
ಸರ್ಕಾರಿ ಕೋಟಾದಡಿ ಪ್ರವೇಶ ಪಡೆದಿರುವುದು ಎಂಬುದಕ್ಕೆ ಮೆರಿಟ್ ಮತ್ತು ಪ್ರಮಾಣ ಪತ್ರ. ವಿದ್ಯಾರ್ಥಿನಿಲಯದಲ್ಲಿರುವವರು ಹಾಸ್ಟೆಲ್ ವಾರ್ಡನ್ ನಿಂದ ಪ್ರಮಾಣ ಪತ್ರ ಲಗತ್ತಿಸುವುದು.
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ
ಪೋಷಕರು ಒಂದು ಕಂಪನಿ, ಸಂಸ್ಥೆಯ ಸಿಬ್ಬಂದಿ ಆಗಿದ್ದಲ್ಲಿ, ಉದ್ಯೋಗದಾತರಿಂದ ವೇತನ ಪ್ರಮಾಣ ಪತ್ರ ಪಡೆದು ನೀಡಬೇಕು. ಪೋಷಕರ ಆದಾಯ ಮಿತಿ ರೂ. 4.00 ಲಕ್ಷ ಮೀರಿರಬಾರದು.
ಇತರ ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷ ಮೀರಿರಬಾರದು.
ದೇಶದ ಯಾವುದೇ ರಾಜ್ಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಸ್ಕಾಲರ್ ಶಿಪ್ ಕುರಿತು ವಿಶೇಷ ಸೂಚನೆ
ವಿಶೇಷ ಚೇತನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜಸ್ಟ್ ಪಾಸ್ ಅಂಕಗಳು ಇದ್ದರೆ ಸಾಕು.
ಪ್ರತಿ ವರ್ಷ ಈ ಸ್ಕಾಲರ್ ಶಿಪ್ ಮುಂದುವರೆಸಲು,ಒಮ್ಮೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಶೇಕಡಾ. ೫ ಕಡಿಮೆ ಅಂಕಗಳನ್ನಷ್ಟೇ ವಿನಾಯಿತಿ ನೀಡಲಾಗುತ್ತದೆ.ವಯಸ್ಸಿನ ಅರ್ಹತೆ : ಗರಿಷ್ಟ 30 ವರ್ಷ ಮೀರಿದ ಅಭ್ಯರ್ಥಿಗಳಿಗೆ ಸ್ಕಾಲರ್ ಶಿಪ್ ಸ್ಥಗಿತಗೊಳಿಸಲಾಗುವುದು.
ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಕೋರ್ಸ್ ಗೆ ಅರ್ಜಿ ಸಲ್ಲಿಸುವಂತಿಲ್ಲ.
ಅರ್ಜಿ ಸಲ್ಲಿಸುವ ವಿಧಾನ, ವಿಳಾಸ
ಅರ್ಜಿ ಸಲ್ಲಿಸುವ ವಿಧಾನ, ವಿಳಾಸ
*