ಸಾರಿಗೆ ಇಲಾಖೆ ಮೋಟಾರ್ ವಾಹನ ನಿರೀಕ್ಷಕರ ಹುದ್ದೆಗೆ ಇಂದಿನಿಂದ ಅರ್ಜಿ ಸ್ವೀಕಾರ : ವಿಧಾನ, ಲಿಂಕ್ ಇಲ್ಲಿದೆ...

 ಸಾರಿಗೆ ಇಲಾಖೆ ಮೋಟಾರ್ ವಾಹನ ನಿರೀಕ್ಷಕರ ಹುದ್ದೆಗೆ ಇಂದಿನಿಂದ ಅರ್ಜಿ ಸ್ವೀಕಾರ : ವಿಧಾನ, ಲಿಂಕ್ ಇಲ್ಲಿದೆ...



   

ಉಳಿಕೆ ಮೂಲ ವೃಂದದ 76, ಹೈದ್ರಾಬಾದ್ ಕರ್ನಾಟಕ ವೃಂದದ 6 ಮೋಟಾರು ವಾಹನ ನಿರೀಕ್ಷಕರ ಹುದ್ದೆ ನೇಮಕಾತಿ ಸಂಬಂಧ, ಇಂದಿನಿಂದ ಈ ಉದ್ಯೋಗ ಆಕಾಂಕ್ಷಿಗಳಿಂದ ಆನ್ ಲೈನ್ ಅರ್ಜಿ ಸ್ವೀಕಾರ ಆರಂಭವಾಗಿದೆ.ಆಸಕ್ತರು ಅರ್ಜಿ ವಿಧಾನ, ಲಿಂಕ್ ಇಲ್ಲಿ ಪಡೆಯಬಹುದು.ಮೇ 21 ರವರೆಗೆ ಅರ್ಜಿಗೆ ಅವಕಾಶ ನೀಡಲಾಗಿದೆ.

ಕಳೆದ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಬರೋಬರಿ 16 ಸರ್ಕಾರಿ ಇಲಾಖೆಗಳ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿತ್ತು.ಆ ಇಲಾಖೆಗಳ ಪೈಕಿ ಸಾರಿಗೆ ಇಲಾಖೆಯ ಹುದ್ದೆಗಳು ಇದ್ದು, ಆ ಹುದ್ದೆಗಳಿಗೆ ಇಂದಿನಿಂದ ಆನ್ ಲೈನ್ ಅರ್ಜಿ ಸ್ವೀಕಾರ ಆರಂಭವಾಗಿದೆ.

whatss


ಕೆಪಿಎಸ್ ಸಿ ಮಾರ್ಚ್ ತಿಂಗಳಲ್ಲಿ ಅದಿಸೂಚಿಸಿದ್ದ ಸಾರಿಗೆ ಇಲಾಖೆಯ ಮೋಟಾರ್ ವಾಹನ ನಿರೀಕ್ಷಕರು ( ಗ್ರೂಪ್ ಸಿ ) - 76 ಹುದ್ದೆಗಳಿಗೆ ಇಂದಿನ ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಏಪ್ರಿಲ್ 22, 2024 ರಿಂದ ಮೇ 21, 2024 ರವರೆಗೆ ಅರ್ಜಿಯನ್ನು ಆಯೋಗ ಸ್ವೀಕಾರ ಮಾಡಲಿದೆ. ಆಸಕ್ತರು ಕೊನೆ ಕ್ಷಣದವರೆಗೆ ಕಾಯದೆ ಬೇಗ ಬೇಗ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ವಿಧಾನ, ಲಿಂಕ್ ಇಲ್ಲಿ ನೀಡಲಾಗಿದ್ದು, ಒಮ್ಮೆ ಓದಿಕೊಳ್ಳಿ. 

ನೇಮಕಾತಿ ಪ್ರಾಧಿಕಾರ : ಕರ್ನಾಟಕ ಲೋಕಸೇವಾ ಆಯೋಗ

ಉದ್ಯೋಗ ಸಂಸ್ಥೆ :  ಸಾರಿಗೆ ಇಲಾಖೆ

ಹುದ್ದೆ ಹೆಸರು : ಮೋಟಾರು ವಾಹನ ನಿರೀಕ್ಷಕರು 

ಹುದ್ದೆಗಳ ಸಂಖ್ಯೆ : 76 ( 70RPC+ 6HK) 

ನೇಮಕಾತಿ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ ಮೂಲಕ.

 ಮೋಟಾರ್ ವಾಹನ ನಿರೀಕ್ಷಕರು ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ 

ಕೆಪಿಎಸ್ ಸಿ ಯ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಪ್ರಮುಖವಾಗಿ 3 ಹಂತಗಳಿರುತ್ತವೆ.

ಮೊದಲನೇ ಹಂತ : ಪ್ರೊಫೈಲ್ ಕ್ರಿಯೇಟ್ / ಅಪಡೇಟ್ 
ಎರಡನೇ ಹಂತ : ಅಪ್ಲಿಕೇಶನ್ ಸಬ್ ಮಿಷನ್ 
ಮೂರನೆಯ ಹಂತ : ಅಪ್ಲಿಕೇಶನ್ ಶುಲ್ಕ ಪಾವತಿ ಮಾಡುವುದು.

 ಮೋಟಾರ್ ವಾಹನ ನಿರೀಕ್ಷಕರು ಹುದ್ದೆಗೆ ಅರ್ಜಿ ಸಲ್ಲಿಕೆ ಹೇಗೆ ?

 * ಆಯೋಗದ ವೆಬ್ ಸೈಟ್ 
' http://www.kpsc.kar.nic.in/' ಗೆ ಭೇಟಿ ನೀಡಿ.

* ತೆರೆದ ಆಯೋಗದ ಮುಖಪುಟದಲ್ಲಿ' Apply Online for Various Notifications' ಎಂದಿರುವಲ್ಲಿ ಕ್ಲಿಕ್ ಮಾಡಿ.

* ನಂತರ ಮತ್ತೊಂದು ವೆಬ್ ಪೇಜ್ ತೆರೆಯುತ್ತದೆ.

* ಇಲ್ಲಿ ' MVI RPC, HK Posts' ಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ.

* ಆಯೋಗದ ಹೊಸ ಜಾಬ್ ಅಪ್ಲಿಕೇಶನ್  ವೆಬ್ ಪೇಜ್ ತೆರೆಯುತ್ತದೆ. ಡೈರೆಕ್ಟ ಲಿಂಕ್ ಗಾಗಿ ಕ್ಲಿಕ್ ಮಾಡಿ.

* ಈಗಾಗಲೇ ಕೆಪಿಎಸ್ ಸಿ ವೆಬ್ ನಲ್ಲಿ ರಿಜಿಸ್ಟ್ರೇಷನ್ ಮಾಡಿದ್ದಲ್ಲಿ,ಯೂಸರ್ ನೇಮ್, ಪಾಸ್ ವರ್ಡ್ ನೀಡಿ ಲಾಗಿನ್ ಆಗಲು ' Login ' ಎಂದಿರುವಲ್ಲಿ ಕ್ಲಿಕ್ ಮಾಡಿ. ನಂತರ ಅರ್ಜಿ ಸಲ್ಲಿಸಿ.

* ಇದೇ ಮೊದಲ ಬಾರಿ  ಕೆಪಿಎಸ್ ಸಿ ಹುದ್ದೆಗಳಿಗೆ ಅರ್ಜಿ  ಸಲ್ಲಿಸುತ್ತಿರುವ ಅಭ್ಯರ್ಥಿಗಳಾಗಿದ್ದಲ್ಲಿ, New Registration ' ಎಂದಿರುವಲ್ಲಿ ಕ್ಲಿಕ್ ಮಾಡಿ.

* ಬೇಸಿಕ್ ವಿವರಗಳನ್ನು ನೀಡಿ, ರಿಜಿಸ್ಟ್ರೇಷನ್ ಮಾಡಿಕೊಳ್ಳಿ. ನಂತರ ಪ್ರೊಫೈಲ್ ಕ್ರಿಯೇಟ್ ಮಾಡಿ.

* ಅಗತ್ಯ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಿ. 

* ಶುಲ್ಕ ಪಾವತಿ ನಂತರ,ಮುಂದಿನ ರೆಫರೆನ್ಸ್ ಗಾಗಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ. 
        
  





327 ಗ್ರೂಪ್ ಬಿ ಹುದ್ದೆಗೆ ಕೆಪಿಎಸ್ ಸಿ ಅಧಿಸೂಚನೆ   


327 ಗ್ರೂಪ್ ಬಿ ಹುದ್ದೆಗೆ ಕೆಪಿಎಸ್ ಸಿ ಅಧಿಸೂಚನೆ          

1 ಕಾಮೆಂಟ್‌ಗಳು

ನವೀನ ಹಳೆಯದು