ಕರ್ನಾಟಕದ ಹೊಸ ಯುವಸ್ನೇಹಿ ಯೋಜನೆಯಡಿಯಲ್ಲಿ 2 ಸಾವಿರ ರೂಪಾಯಿಗಳ ಪಡೆಯಿರಿ :
ಪದವಿ ಶಿಕ್ಷಣದ ನಂತರ ಉದ್ಯೋಗ ದೊರೆಯುವ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಯುವಸ್ನೇಹಿ ಎಂಬ ಹೊಸ ಯೋಜನೆಯಡಿ ತಲಾ 2 ಸಾವಿರ ರೂ.ಗಳ ಒಂದು ಬಾರಿಯ ಆರ್ಥಿಕ ನೆರವನ್ನು ನೀಡಲಿದೆ, ಬದುಕುವ ದಾರಿ ಎಂಬ ಹೊಸ ಯೋಜನೆಯಡಿ ಶಾಲಾ ಶಿಕ್ಷಣದ ಬಳಿಕ ವಿವಿಧ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದಿರುವ ಯುವಜನರಿಗೆ ಐಟಿಐ ಗಳಲ್ಲಿ 3 ತಿಂಗಳ ವೃತ್ತಿಪರ ಸರ್ಟಿಫಿಕೇಟ್ ತರಬೇತಿ ಪಡೆಯಲು ಮಾಸಿಕ 1,500 ರೂ.ಗಳ ಶಿಷ್ಯವೇತನವನ್ನು ನೀಡುತ್ತಿದೆ. ಹಾಗೂ ತರಬೇತಿಯನ್ನು ಪೂರ್ಣಗೊಳಿಸಿರುವವರಿಗೆ ಅಪ್ರೆಂಟಿಸ್ ಶಿಪ್ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಮಾಸಿಕ 1,500 ರೂಗಳ ಶಿಶಿಕ್ಷು ಭತ್ಯೆಯನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಪದವಿ ಮುಗಿಸಿ ಮೂರೂ ವರ್ಷಗಳ ನಂತರವೂ ಯಾವುದೇ ಉದ್ಯೋಗ ದೊರೆಯದ ಯುವಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಯುವಸ್ನೇಹಿ ಎಂಬ ಹೊಸ ಯೋಜನೆಯಡಿ ತಲಾ 2 ಸಾವಿರ ರೂಗಳಂತೆ. ಒಂದು ಬಾರಿಯ ಆರ್ಥಿಕ ನೆರವನ್ನು ನೀಡಲು ಬಜೆಟ್ ನಲ್ಲಿ ತೀರ್ಮಾನಿಸಲಾಗಿದೆ.