ಮಹಿಳೆಯರಿಗೆ ಗುಡ್ ನ್ಯೂಸ್,,, ಯಾವುದೇ ವ್ಯಾಪಾರ ಮಾಡಲು ಸರ್ಕಾರದ ವತಿಯಿಂದ ಬಡ್ಡಿ ಇಲ್ಲದೆ 3 ಲಕ್ಷ ರೂ ಸೌಲಭ್ಯ :

ಮಹಿಳೆಯರಿಗೆ ಗುಡ್ ನ್ಯೂಸ್,,, ಯಾವುದೇ ವ್ಯಾಪಾರ ಮಾಡಲು ಸರ್ಕಾರದ ವತಿಯಿಂದ ಬಡ್ಡಿ ಇಲ್ಲದೆ 3 ಲಕ್ಷ ರೂ ಸೌಲಭ್ಯ :



          ಉದ್ಯೋಗಿನಿ ಯೋಜನೆಯ ಮೂಲಕ ಸಮಾಜದ ಎಲ್ಲಾ ವರ್ಗದ ಮಹಿಳೆಯರಿಗೂ ಬಡ್ಡಿ ರಹಿತ ಸಲ ಸಿಗಲಿದೆ. ಇದರಲ್ಲಿ ಅಂಗವಿಕಲ ಮಹಿಳೆಯರಿಗೆ, ವಿಧವೆಯರಿಗೆ ಮತ್ತು ನಿರ್ಗತಿಕರಿಗೆ ವಿಶೇಷವಾದ ಪ್ರಾತಿನಿಧ್ಯ ಇದೆ. ಈ ಹಣ ಬಳಸಿಕೊಂಡು ಇವರು ಹೊಲಿಗೆ, ಮತ್ಸ್ಯಯೋದ್ಯಮ, ದಿನಸಿ ಮಾರಾಟ, ಗ್ರಂಥಾಲಯ, ಬೇಕರಿ, ಅಗರಬತ್ತಿ ತಯಾರಿಕೆ, ಡೈರಿ ಮುಂತಾದ ಸುಮಾರು 88 ಬಗೆಯ ವಿವಿಧ ಸಣ್ಣ ವ್ಯಾಪಾರವನ್ನು ಆರಂಭಿಸಬಹುದಾಗಿದೆ. 


ನಮ್ಮ ದೇಶದ ಮಹಿಳೆಯರು ಸ್ವಾವಲಂಬಿಗಳು ಆಗಲಿ ಎನ್ನುವ ಉದ್ದೇಶದಿಂದ ಸರ್ಕಾರ ನಾನಾ ಯೋಜನೆಗಳ ಮುಖಾಂತರ ಅವರಿಗೆ ಸಹಾಯ ಮಾಡುತ್ತಿದೆ. ಈಗಲೂ ಸಹ ಅಂತಹದೊಂದು ಯೋಜನೆ ಜೊತೆ ಬಂದಿದೆ. ಉದ್ಯೋಗಿನಿ ಎನ್ನುವ ಈ ಹೊಸ ಯೋಜನೆಯಿಂದ ಮಹಿಳೆಯರು ಯಾವುದೇ ಸಣ್ಣ ವ್ಯಾಪಾರ ಶುರು ಮಾಡಿದರು 3 ಲಕ್ಷದವರೆಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಸಾಲ ಸೌಲಭ್ಯ ನೀಡಿ ಮಹಿಳೆಯರಿಗೆ ವ್ಯಾಪಾರ ಮಾಡಲು ಉತ್ತೇಜನ ನೀಡುತ್ತಿದೆ. 
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ನೀತಿ ನಿಯಮಗಳು ಇದ್ದು, ಎಲ್ಲ ಯೋಜನೆಯಾಳಂತೆ ಇದಕ್ಕೂ ಅರ್ಹರಷ್ಟೇ ಅರ್ಜಿ ಸಲ್ಲಿಸಬಹುದು. 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು, ದಾಖಲೆಗಳು ಮತ್ತು ಯಾವ ರೀತಿ ಅರ್ಜಿ ಸಲ್ಲಿಸಬೇಕು ?


ಅರ್ಹತೆಗಳು :

ಕೇವಲ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು. ಅದರಲ್ಲೂ 

ಅಂಗವಿಕಲ ಮಹಿಳೆಯರಿಗೆ, ವಿಧವೆಯರಿಗೆ, ಮತ್ತು ನಿರ್ಗತಿಕರಿಗೆ ವಿಶೇಷ ಪ್ರಾತಿನಿಧ್ಯ.

ಅಭ್ಯರ್ಥಿ 18 ವರ್ಷದಿಂದ 55 ವರ್ಷದ ಒಳಗಿನ ಮಹಿಳೆಯರು ಅರ್ಹರಾಗಿರುತ್ತಾರೆ. 

ವಾರ್ಷಿಕವಾಗಿ ಒಂದೂವರೆ ಲಕ್ಷಕ್ಕಿಂತ ಕಡಿಮೆ ಆದಾಯ ಇರಬೇಕು. 

ವಿಧವೆಯರು, ಅಂಗವಿಕಲರು, ನಿರ್ಗತಿಕರಾದರೆ ಹೆಚ್ಚಿಗೆ ಆದಾಯವಿದ್ದರೂ ಅವರು ಅರ್ಹರಾಗಿರುತ್ತಾರೆ.


ಅಗತ್ಯವಿರುವ ದಾಖಲೆಗಳು :

ಮಹಿಳೆಯ ಆಧಾರ್ ಕಾರ್ಡ್ 

ಮಹಿಳೆಯ ಜಾತಿ ಮತ್ತು ಆದಾಯ ಪ್ರಮಾಣ ಪಾತ್ರ 

ಸ್ಥಳೀಯ ಶಾಸಕ ಅಥವಾ ಸಂಸದನಿಂದ ಅವರು ಲೆಟರ್ ಹೆಡ್ ಅನ್ನುವ ಪತ್ರವನ್ನು ತರಬೇಕಾಗುತ್ತದೆ. 

ರೇಷನ್ ಕಾರ್ಡ್ 

ಜನನ ಪ್ರಮಾಣಪತ್ರ 


ಎಲ್ಲಿ ಅರ್ಜಿ ಸಲ್ಲಿಸಬೇಕು?

ನಮ್ಮ ದೇಶದ ಎಲ್ಲಾ ಖಾಸಗಿ ಮತ್ತು ಸರ್ಕಾರೀ ಸ್ವಾಮ್ಯದ ಬ್ಯಾಂಕುಗಳು ಕೂಡ ಮಹಿಳೆಯರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕಾಗಿ ಈ ಉದ್ಯೋಗಿನಿ ಯೋಜನೆ ಅಡಿ ಸಾಲ  ನೀಡುತ್ತಿವೆ.ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ ಇವುಗಳಲ್ಲಿಯೂ ಕೂಡ ಸಾಲ ಪಡೆಯಬಹುದಾಗಿದೆ. ಅಲಲ್ದೆ ದೇಶದ ಎಲ್ಲ ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಿಗೆ ಭೇಟಿ ಕೊಟ್ಟು ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ಪಡೆಯುವ ಅರ್ಜಿ ಬೇಕು ಎಂದು ಕೇಳಿದರೆ ಕೊಡುತ್ತಾರೆ. ಅದಕ್ಕೆ ಕೇಳಿರುವ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಭರ್ತಿ ಮಾಡಿಕೊಟ್ಟರೆ ನೀವು ಕೊಟ್ಟ ನಿಮ್ಮ ಉಳಿತಾಯ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು