ದಿನಕ್ಕೆ 400 ರೂ ಗಳಿಸುವ ಕಾರ್ಮಿಕನ ಖಾತೆಗೆ ಹರಿದು ಬಂದವು 2700 ಕೋಟಿ ರೂ ಕ್ಷಣಾರ್ಧದಲ್ಲಿ ಕೋಟ್ಯಧಿಪತಿ !!!!!!!
ಅದೃಷ್ಟದ ಮೇಲೆ ಯಾರ ನಿಯಂತ್ರಣವಿಲ್ಲ. ಇದು ಯಾವಾಗ, ಯಾರಿಗೆ, ಯಾವ ರೀತಿ ಒಲಿಯುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಇಂಥ ವಂದು ಭಾಗ್ಯ ಇಟ್ಟಿಗೆಯ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕನಿಗೆ ಒಲಿದು ಬಂದಿದೆ.
ಉತ್ತರ ಪ್ರದೇಶದ 45 ವರ್ಷದ ವ್ಯಕ್ತಿಯಾದ ಈತನ ಹೆಸರು ಬಿಹಾರಿ ಲಾಲ್. ಈತ ತನ್ನದೇ ಆದ ಜನಧನ ಖಾತೆಯಿಂದ ನೂರು ರೂಪಾಯಿಗಳನ್ನು ತೆಗೆದನು. ಅದನ್ನು ತೆಗೆದ ಕೆಲವೇ ಗಂಟೆಯಲ್ಲಿ ಈತನ ಅಕೌಂಟ್ ಗೆ 2700 ಕೋಟಿ ರೂಪಾಯಿಗಳು ಜಮೆಯಾದ SMS ಒಂದು ಬಂದಿತು ಅದು ಕೆಲವೇ ಗಂಟೆಗಳವರೆಗೆ ಮಾತ್ರ.
ಬಿಹಾರ್ ಲಾಲ್ ಈ ಮೆಸೇಜ್ ನೋಡಿ ಬೆಚ್ಚಿಬಿದ್ದಿದ್ದಾನೆ. ಆತ ನೇರ ಬ್ಯಾಂಕಿಗೆ ಹೋಗಿ ಅಲ್ಲಿಯ ಅಧಿಕಾರಿಗೆ ಭೇಟಿಯಾಗಿ ತನಗೆ ಬಂದ SMS ತೋರಿಸಿದ್ದಾನೆ. ಆಗ ಬ್ಯಾಂಕ್ ಅಧಿಕಾರಿ ಆತನ ಅಕೌಂಟ್ ತಪಾಸಣೆ ಮಾಡಿ 2700 ಕೋಟಿ ರೂಪಾಯಿಗಳು ಜಮೆಯಾದದ್ದು ಖಾತರಿಪಡಿಸಿಕೊಂಡಿದ್ದಾರೆ.
ಮೀಡಿಯಾ ಜೊತೆಗೆ ಮಾತನಾಡುವಾಗ ಬಿಹಾರ್ ಲಾಲ್ ತನಗೆ ಬಂದ್ SMS ಬಗ್ಗೆ ಮಾಹಿತಿ ನೀಡಿದ್ದಾನೆ. ಮತ್ತು ಬ್ಯಾಂಕಿನವರು ಚೆಕ್ ಮಾಡಿದಾಗ ಅದು ನಿಜವಾಗಿತ್ತು. ನಂತರ ಬ್ಯಾಂಕ್ ಅಧಿಕಾರಿಗಳು ಸ್ಟೇಟ್ಮೆಂಟ್ ಸಹ ತೆಗೆದು ಕೊಟ್ಟಿದ್ದಾರೆ.
ಆದರೆ ಈ ಆನಂದ ಕೇವಲ ಕೆಲವೇ ಗಂಟೆಗಳವರೆಗೆ ಮಾತ್ರ ಇತ್ತು. ತದನಂತರ ಮತ್ತೆ ಅಕೌಂಟ್ ತಪಾಸಣೆ ಮಾಡಿದಾಗ ಅಲ್ಲಿ ಕೇವಲ 126 ರೂಪಾಯಿಗಳಷ್ಟೇ ಇದ್ದವು. ಬ್ಯಾಂಕಿನ ಮುಖ್ಯ ಕಾರ್ಯದರ್ಶಿ ಅಭಿಷೇಕ್ ಸಿನ್ಹಾ ಅವರು ಮೀಡಿಯಾ ಜೊತೆ ಮಾತನಾಡುವಾಗ, ಇದೊಂದು ಬ್ಯಾಂಕಿಂಗ್ ದೋಷವಾಗಿದ್ದು ಬ್ಯಾಂಕಿನ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.
ಬಿಹಾರಿ ಲಾಲ್ ರಾಜಸ್ಥಾನದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಾನೆ. ಅಲ್ಲಿ ದಿನ ಪೂರ್ತಿ ಆತನಿಗೆ ಕೆಲಸದ ಪ್ರಕಾರ 400 ರಿಂದ 500 ರೂಪಾಯಿಗಳವರೆಗೆ ಸಂಬಳ ಸಿಗುತ್ತದೆ. ಮಳೆಗಾಲದಲ್ಲಿ ಹೆಚ್ಚು ಕಡಿಮೆ ಈ ಕೆಲಸ ಬಂದ್ ಆಗಿರುತ್ತದೆ.
Tags
Social