ತೋಟಗಾರಿಕೆಯಲ್ಲಿ ಆಸಕ್ತಿಯಿದೆಯೇ? ಹಾಗಿದ್ರೆ ಪ್ರಾಯೋಗಿಕ ತರಬೇತಿ ಪಡೆಯುವ ಅವಕಾಶ:

ಬಾಗಲಕೋಟ  ಹಾಗೂ ಬೆಂಗಳೂರು ರೈತರ ಮಕ್ಕಳಿಗಾಗಿ 10 ತಿಂಗಳ ತೋಟಗಾರಿಕೆ ತರಬೇತಿ : ಯಾವಾಗ - ಎಲ್ಲಿ ? ಅರ್ಹತೆ, ಮಾನದಂಡ ಏನು? 



ಬಾಗಲಕೋಟನಲ್ಲಿ ತೋಟಗಾರಿಕೆ ತರಬೇತಿ :

          ರೈತ ಬಾಂಧವರೇ ಬಾಗಲಕೋಟೆ ತೋಟಗಾರಿಕೆ ಇಲಾಖೆಯಿಂದ ಜಿಲ್ಲೆಯ ರೈತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಬೆಳಗಾವಿ ಜಿಲ್ಲೆಯ ಹಿಡಕಲ್ ಡ್ಯಾಮ್ ತರಬೇತಿ ಕೇಂದ್ರದಲ್ಲಿ 2023-ಮೇ 2 ರಿಂದ ಫೆಬ್ರುವರಿ 29-2024 ರವರೆಗೆ 10 ತಿಂಗಳ ತೋಟಗಾರಿಕೆ ತರಬೇತಿ ಕಾರ್ಯಕ್ರಮ 
ಹಮ್ಮಿಕೊಳ್ಳಲಾಗಿದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಜಿಲ್ಲೆಯ ರೈತ ಪುರುಷ ಹಾಗೂ ಮಹಿಳಅಭ್ಯರ್ಥಿಗಳ ನ್ನು ಆಯ್ಕೆ ಮಾಡಲು ಕನಿಷ್ಠ SSLC ಪಾಸಾಗಿರುವ ಅಭ್ಯರ್ಥಿಗಳಿಂದ  ಅರ್ಜಿ ಆಹ್ವಾನಿಸಲಾಗಿದೆ.


ಬೆಂಗಳೂರಿನಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿ :

ರಾಜ್ಯ ರಾಜಧಾನಿ ಬೆಂಗಳೂರು ಲಾಲ್ ಬಾಗ್ ನ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಮೇ 2ರಿಂದ 2024 ರ ಫೆಬ್ರುವರಿ 29 ರ ತನಕ ನಡೆಯಲಿರುವ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ತೋಟಗಾರಿಕೆ ಕೇಂದ್ರ 
ಆಹ್ವಾನಿಸಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿನ ಅರ್ಹ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ, 1750 ರೂಪಾಯಿ ಶಿಷ್ಯವೇತನ (ಮಾಜಿ ಸೈನಿಕರನ್ನ ಹೂರತುಪಡಿಸಿ) ಸಿಗಲಿದೆ.

ಮುಖ್ಯ  ದಿನಾಂಕಗಳು :

ತೋಟಗಾರಿಕೆ ತರಬೇತಿ ಅವಧಿ 10 ತಿಂಗಳು 
02-05-2023 ರಿಂದ 29-02-2024

ಅರ್ಜಿ ಪಡೆಯಬಹುದಾದ ಅವಧಿ 
23-03-2023 ರಿಂದ 12-04-2023

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 
02-04-2023 ಸಂಜೆ 5 ಗಂಟೆ ಒಳಗೆ 

ನೇರ ಸಂದರ್ಶನ 
15-04-2023

ಅರ್ಹತೆ ಮತ್ತು ವಯೋಮಿತಿ :

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನ್ನಡ ವಿಷಯದೊಂದಿಗೆ SSLC ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಪ.ಜಾ/ ಪ.ಪಂ ದವರಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಟ 33 ವರ್ಷ, ಮಾಜಿ ಸೈನಿಕರಿಗೆ 33 ರಿಂದ ಗರಿಷ್ಟ 65 ವರ್ಷ ಇತರರಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಟ 30 ವರ್ಷ ವಯೋಮಿತಿ ಇರುತ್ತದೆ.

ಈ ತರಬೇತಿಯು ರೈತರ ಮಕ್ಕಳಿಗಾಗಿ ಇರುವುದರಿಂದ ಅಭ್ಯರ್ಥಿಯ ತಂದೆ ಅಥವಾ ಪಾಲಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು. ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿ ನೀಡುವುದು ಕಡ್ಡಾಯ. 

ಮಾಜಿ ಸೈನಿಕರು ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಮೇಲೆ ತಿಳಿಸಿದ ವಿವರಗಳೊಂದಿಗೆ ಇತರೆ ದಾಖಲೆಗಳಾದ ಡಿಸ್ಚಾರ್ಜ್ ಬುಕ್ ಕಾಫಿ, ಪರ್ಸನಲ್ ಪೆನ್ಶನ್ ಆರ್ಡರ್ ಕಾಪಿ, ಎಕ್ಸ್ ಸರ್ವಿಸ್ ಮ್ಯಾನ್ ಐಡಿ ಕಾರ್ಡ್ ಕಾಪಿಗಳನ್ನು ಸಲ್ಲಿಸಬೇಕು.

ಅಭ್ಯರ್ಥಿಗಳು ತೋಟದ ಕೆಲಸಗಳನ್ನು ಮಾಡುವಷ್ಟು ದೃಢಕಾಯರಾಗಿರಬೇಕು. ತರಬೇತಿಗೆ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು.



ಅರ್ಜಿ ಪಡೆಯುವುದು ಎಲ್ಲಿ - ಸಲ್ಲಿಸಬೇಕಾದ್ದು ಎಲ್ಲಿ?

ಅರ್ಜಿಗಳನ್ನು ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು / ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ರವರ ಕಚೇರಿಯಲ್ಲಿ ಅಥವಾ ಇಲಾಖೆಯ ವೆಬ್ ಸೈಟ್ https://horticulture dir.karnataka.gov.in ನಲ್ಲಿ ಮಾರ್ಚ್ 23 ರಿಂದ ಏಪ್ರಿಲ್ 12 ರ ವರೆಗೆ ಪಡೆಯಬಹುದು.

ಸಾಮಾನ್ಯ ಅಭ್ಯರ್ಥಿಗಳಿಗೆ 30 ರೂಪಾಯಿ ಮತ್ತು ಮಾಜಿ ಸೈನಿಕರು/ಪ.ಜಾ/ ಪ.ಪಂಗಡದ ಅಭ್ಯರ್ಥಿಗಳಿಗೆ 15 ರೂಪಾಯಿ ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್/ ಡಿಮ್ಯಾಂಡ್ ಡ್ರಾಫ್ಟ್ ಅನ್ನು ಆಯಾ  ಜಿಲ್ಲೆಗಳ ತೋಟಗಾರಿಕೆ ಉಪನಿರ್ದೇಶಕರು ಇವರ ಹೆಸರಿನಲ್ಲಿ ಪಡೆದು, ಅರ್ಜಿ ಜತೆಗೆ 
ಲಗತ್ತಿಸಬೇಕು.

ಭರ್ತಿ ಮಾರಿದ ಅರ್ಜಿಗಳನ್ನು ಸಂಬಂದಿಸಿದ ದಾಖಲಾತಿಗಳೊಂದಿಗೆ ಏಪ್ರಿಲ್ 12 ಸಂಜೆ 5:00 ಗಂಟೆಯೊಳಗೆ ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಚೇರಿಯಲ್ಲಿ ಸಲ್ಲಿಸಬೇಕು.









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು