ವದು-ವರರ ಫೋಟೋ ತೆಗೆಯಲು ಹೋಗಿ ಚರಂಡಿಗೆ ಬಿದ್ದ ಮಹಿಳೆ

 ವದು-ವರರ ಫೋಟೋ ತೆಗೆಯಲು ಹೋಗಿ ಚರಂಡಿಗೆ ಬಿದ್ದ ಮಹಿಳೆ 



ಮಹಿಳೆ ವಧು-ವರರು ಹೊರಗಡೆ ಬರುವಾಗ ಅವರ ಮುಂದಿನಿಂದಲೇ ಮಹಿಳೆಯೊಬ್ಬಳು ವಿಡಿಯೋ ಮಾಡಿಕೊಂಡು ಹಿಂದೆ ಹಿಂದೆ ಬಂದು ನೇರವಾಗಿ ಚರಂಡಿಗೆ ಬಿದ್ದಿದ್ದಾಳೆ.

ಮಾಡುವೆ ಎಂದರೇನೇ ಹಾಗೆ ಸಂಭ್ರಮ ಸಡಗರ ಓಡಾಟಗಳು ಇದ್ದೆ ಇರುತ್ತದೆ. ಇತ್ತೀಚಿಗೆ ಅಂತೂ ಸೆಲ್ಫಿ ಫೋಟೋಗಳ ಟ್ರೆಂಡ್ ಹೆಚ್ಚಾಗಿ ಬಿಟ್ಟಿದೆ. ಸಂಭ್ರಮಕ್ಕಿಂತ ಹೆಚ್ಚಾಗಿ ಫೋಟೋ ತೆಗೆದು ಪೋಸ್ಟ್ ಮಾಡುವುದೇ ಹೆಚ್ಚಾಗಿದೆ. ಇತ್ತೀಚಿಗೆ ವಧು-ವರರ ಫೋಟೋ ತೆಗೆಯಲು ಹೋದ ಮಹಿಳೆ ಚರಂಡಿ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖ್ಖತ್ ಆಗಿ ವೈರಲ್ ಆಗಿದೆ. ಸಾಮಾನ್ಯವಾಗಿ ಮಾಡುವೆ ಸಮಾರಂಭಗಳಲ್ಲಿ ಫೋಟೋಗ್ರಾಫರ್ ಬೀಳುವುದು, ವರರ ಪಂಚೆ ಉದುರರಿರುವ ಇಂತಹ ಸಾಕಷ್ಟು ಮುಜುಗರಕ್ಕೀಡು ಮಾಡುವ ಪ್ರಸಂಗಗಳು ನಡೆಯುತ್ತಲೇ ಇರುತ್ತದೆ.

ವಿಡಿಯೋ ನೋಡಿ 



ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮಹಿಳೆ ವಧು-ವರರು ಹೊರಗಡೆ ಬರುವಾಗ ಅವರ ಮುಂದಿನಿಂದಲೇ ಮಹಿಳೆಯೊಬ್ಬಳು ವಿಡಿಯೋ ಮಾಡಿಕೊಂಡು ಬರುವುದನ್ನು ಕಾಣಬಹುದು. ಈಕೆ ವಿಡಿಯೋ ಮಾಡಿಕೊಂಡು ಹಿಂದೆ ಹಿಂದೆ ಬಂದು ನೇರವಾಗಿ ಚರಂಡಿಗೆ ಬಿದ್ದಿದ್ದಾಳೆ. ಅಲ್ಲಿದ್ದವರು ಆಕೆಯನ್ನು ತಕ್ಷಣ ಮೇಲಕ್ಕೆ ಎತ್ತಿದರು. 

ಈ ವಿಡಿಯೋ ೧೦.೫ ಮಿಲಿಯನ್ ಗಿಂತಲೂ ಹೆಚ್ಚಿನ ವೀಕ್ಷಣೆ ಪಡೆದಿದೆ. ಜೊತೆಗೆ ಸಾಕಷ್ಟು ಲೈಕ್, ಕಾಮೆಂಟ್ ಗಳು ಬಂದಿವೆ. ಫೋಟೋ ತೆಗೆಯಲು ಜನರು ಏಕೆ ಇಷ್ಟೊಂದು ಉತ್ಸುಕರಾಗುತ್ತಾರೆ ಎಂದು ಒಬ್ಬ ಬಳಕೆದಾರ ಕಾಮೆಂಟ್ ಮೂಲಕ ಪ್ರಕ್ರಿಯಿಸಿದ್ದಾನೆ. ಇನ್ನೊಬ್ಬ ಅವಳಿಗೆ ಏನು ಗಾಯವಾಗಿದೆಯೇ? ಎಂದು ಪ್ರಶ್ನಿಸಿದ್ದಾನೆ.
















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು