ಕೇವಲ ಸೂರ್ಯನ ಬೆಳಕಿನಿಂದ ಅಡುಗೆ ಮಾಡಲು ಸಹಾಯಕವಾದ ಸಾಧನ,,,, ಇಲ್ಲಿದೆ ಸಂಪೂರ್ಣ ಮಾಹಿತಿ..

ಅಡುಗೆ ವೆಚ್ಚ ಕಡಿಮೆ ಮಾಡುವ ಸಾಧನ, ಅದುವೇ ಕೇಂದ್ರ ಸರ್ಕಾರದ  ಸೋಲಾರ್ ಸ್ಟೋವ್  :



 Government Solar Stove :

             ಈಗ ಹೆಚ್ಚುತ್ತಿರುವ ಗ್ಯಾಸ್ ಬೆಳೆಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ಈಗ ನೀವು ವಿಶೇಷ ಒಲೆಯನ್ನು ಮನೆಗೆ ತರಬಹುದು. ಅದನ್ನು ಚಲಾಯಿಸಲು ನಿಮಗೆ LPG ಸಿಲಿಂಡರ್ ಅವಶ್ಯಕತೆ ಇಲ್ಲ. ಈ ಸ್ಟವ್ ಖರೀದಿಸಿದ ನಂತರ ನೀವು ಸೂರ್ಯನ ಬೆಳಕಿನಿಂದ ಅಡುಗೆ ಮಾಡಬಹುದು. ಸರ್ಕಾರಿ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಸೌರಶಕ್ತಿ ಅಂದರೆ ಸೂರ್ಯನ ಬೆಳಕಿನಲ್ಲಿ ಕಾರ್ಯನಿರ್ವಹಿಸುವ ವಿಶಿಷ್ಟ ಸೌರವಲೆ ಸಿದ್ಧಪಡಿಸಿದೆ. ಇದರ ವಿಶೇಷವೆಂದರೆ ಬಿಸಿಲಿನಲ್ಲಿ ಒಲೆ ಇಡುವ ಅವಶ್ಯಕತೆ ಇಲ್ಲ. ಈ ಓಲೆ ಪೋರ್ಟಲ್ ಸ್ಟವ್ ಆಗಿದೆ. ಇದು ಎರಡು ಘಟಕ ಒಳಗೊಂಡಿದೆ. ನೀವು ಅಡುಗೆ ಮನೆಯಲ್ಲಿ ಒಂದು ಘಟಕವನ್ನು ಹೊಂದಿಸಬಹುದು. ಮತ್ತು ಇನೊಂದು ಘಟಕವನ್ನು ನೀವು ಬಿಸಿಲಿನಲ್ಲಿ ಇರಿಸಬಹುದು. ಇದು ಮಾಡ್ಯುಲರ್ ಸಿಸ್ಟಮ್ ಆಗಿದ್ದು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಎಂದು ಇಂಡಿಯನ್ ಆಯಿಲ್ ಕಂಪನಿ ಹೇಳಿದೆ. 

ನೀವು ಇದನ್ನು ಎಲ್ಲಿ ಬೇಕಾದರೂ ಇಟ್ಟುಕೊಳ್ಳುವ ಮೂಲಕ ಬಳಸಬಹುದು. ಕಂಪನಿಯು ಈ ಸೋಲಾರ್ ಸ್ಟವ್ ಗೆ 'ಸೂರ್ಯ ನೂತನ ' ಎಂದು ಹೆಸರಿಟ್ಟಿದೆ. ಇದನ್ನು ಎಲ್ಲಿ ಖರೀದಿಸಬಹುದು? ಹಾಗೂ ಇದರ ಖರ್ಚು ಏನು ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಲೆ ತಯಾರಿಸುವ ಕಂಪನಿಯು ಅದರ ಹಲವು ಮಾದರಿಗಳನ್ನು ಮಾರುಕಟ್ಟೆಯಲ್ಲಿ ಹೊರತಂದಿದೆ, ಇದರಲ್ಲಿ ನೀವು ಪ್ರೀಮಿಯಂ ಮಾದರಿಯನ್ನು ತೆಗೆದುಕೊಂಡರೆ, ಒಮ್ಮೆ ಚಾರ್ಜ್ ಮಾಡುವ ಮೂಲಕ ನಾಲ್ಕು ಜನರಿಗೆ ಒಂದು ದಿನದ ಆಹಾರವನ್ನು ಸುಲಭವಾಗಿ ಬೇಯಿಸಬಹುದು.


 ಸೋಲಾರ್ ಸ್ಟವ್ ನ ಬೆಲೆ :

ಇನ್ನು ಬೆಲೆಯ ಬಗ್ಗೆ ಹೇಳುವುದಾದರೆ ಅದರ ಮೂಲ ಮಾದರಿಯು ರೂ 12,000 ಮತ್ತು ಟಾಪ್ ಮಾಡೆಲ್ ರೂ 23,000 ಗೆ ಲಭ್ಯವಿದೆ.




 ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು