ಸಮೋಸಾ ಮಾರಿ ದಿನಕ್ಕೆ 12 ಲಕ್ಷ ರೂ. ಗಳಿಸುತ್ತಿದ್ದಾರೆ ಈ ಮಹಿಳಾ ಉದ್ಯಮಿ !!!! ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
30 ಲಕ್ಷ ರೂ ವೇತನದ ಉದ್ಯೋಗ ತ್ಯಜಿಸಿದ ಮಹಿಳಾ ಉದ್ಯಮಿ!
ಪತಿ-ಪತ್ನಿ ಇಬ್ಬರಿಗೂ ಒಳ್ಳೆಯ ಉದ್ಯೋಗ, ತಿಂಗಳಿಗೆ ಲಕ್ಷಾಂತರ ರೂ. ವೇತನವಿದ್ರೆ ಬಯಸಿದ್ದನ್ನು ಖರೀದಿಸಿ ಬದುಕು ಹೀಗೆ ಸಾಗೀದ್ರೆ ಸಾಕು ಎಂಬ ಕಂಫರ್ಟ್ ಜೋನ್ ನೊಳಗೆ ಬಂಧಿಯಾಗುವವರೇ ಹೆಚ್ಚು, ಆದ್ರೆ ಇಂಥದ್ದೇ ಕಂಫರ್ಟ್ ಜೋನ್ ನೊಳಗಿದ್ದ ಸಂಪಾತಿ ಅದರಿಂದ ಹೊರಬಂದು ಸ್ವಂತ ಉದ್ಯಮ ಸ್ಥಾಪಿಸಿ ಇನ್ನು ಹಿಂದಿಗಿಂತಲೂ ಅಧಿಕ ಆದಾಯ ಗಳಿಸುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಅವರೇ 'ಸಮೋಸ ಸಿಂಗ್ ' ಸಂಸ್ಥಾಪಕರಾದ ನಿಧಿ ಸಿಂಗ್ ಹಾಗೂ ಶಿಖರ್ ವೀರ್ ಸಿಂಗ್. ಇಂದು ಸ್ಟಾರ್ಟ್ ಅಪ್ ಪ್ರಾರಂಭಿಸುತ್ತಿರೋರ ಸಂಖ್ಯೆ ಹೆಚ್ಚಿದೆ. ಇದಕ್ಕಾಗಿ ಕೆಲವರು ಲಕ್ಷಾಂತರ ರೂಪಾಯಿ ವೇತನದ ಉದ್ಯೋಗ ತ್ಯಜಿಸುತ್ತಿದ್ದಾರೆ. ನಿಧಿ ಸಿಂಗ್ ಹಾಗು ಅವರ ಪತಿ ಶಿಖರ್ ವೀರ್ ಸಿಂಗ್ ಕೂಡ ಇಂಥವರ ಸಲಿಗೆ ಸೇರುತ್ತಾರೆ. ಲಕ್ಷಾಂತರ ರೂಪಾಯಿ ವೇತನದ ಉದ್ಯೋಗ ತೊರೆದು ಬೆಂಗಳೂರಿನಲ್ಲಿ ಸಮೋಸ ತಯಾರಿಸಿ ಮಾರಾಟ ಮಾಡುತ್ತಿರುವ ಈ ದಂಪತಿ ಈಗ ಪ್ರತಿ ತಿಂಗಳು 30,000 ಸಮೋಸ ಮಾರಾಟ ಮಾಡುತ್ತಿದ್ದಾರೆ. ಈ ಉದ್ಯಮದ ಮುಳ್ಳಿಕ 45 ಕೋಟಿ ರೂ ವಹಿವಾಟು ನಡೆಸುತ್ತಿದ್ದಾರೆ.
ಈ ದಂಪತಿಗಳು ಉದ್ಯೋಗ ತ್ಯಜಿಸಿ ಸ್ವಂತ ಉದ್ಯಮ ಕೈಗೊಳ್ಳಲು ಕಾರಣವೇನು?
ನಿಧಿ ಸಿಂಗ್ ಹಾಗು ಅವರ ಪತಿ ಶಿಖರ್ ವೀರ್ ಸಿಂಗ್ ಇಬ್ಬರೂ ಹರಿಯಾಣದಲ್ಲಿ Btech ಓದುವ ಸಮಯದಲ್ಲಿ ಪರಿಚಿತರಾಗಿ ಆ ಬಳಿಕ ಪರಸ್ಪರ ಪ್ರೀತಿಸಿ ಮದುವೆಯಾದರು. ಶಿಖರ್ 2015 ರಲ್ಲಿ ಉದ್ಯೋಗ ತ್ಯಜಿಸುವ ಸಮಯದಲ್ಲಿ ಅವರು ಬಯೋಕಾನ್ ನಲ್ಲಿ ಪ್ರಧಾನ ಇಂಜಿನಿಯರ್ ಆಗಿದ್ದರು. ಇನ್ನು ನಿಧಿ ಕಾರ್ಪೋರೇಶನ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉದ್ಯೋಗ ತ್ಯಜಿಸುವ ಸಮಯದಲ್ಲಿ ಅವರ ಪ್ಯಾಕೇಜ್ 30 ಲಕ್ಷ ರೂ.
ಆದರೆ, ವೃತ್ತಿಜೀವನ ಹಾಗೂ ಆರ್ಥಿಕ ಸ್ಥಿತಿ ಎರಡೂ ಸ್ಥಿರವಾಗಿರುವ ಈ ಸಮಯದಲ್ಲೇ ಇವರಿಬ್ಬರೂ ಅನಿಶ್ಚಿತತೆಯಿಂದ ಕೂಡಿರುವ ಉದ್ಯಮ ಜಗತ್ತನ್ನು ಪ್ರವೇಶಿಸುವ ನಿರ್ಧಾರ ಕೈಗೊಂಡರು. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೇತನದ ಉದ್ಯೋಗ ತೊರೆದು ಸಮೋಸ ಮಾರುವ ಉದ್ಯಮ ಪ್ರಾರಂಭಿಸಿದರು. ಇವರ ಈ ನಿರ್ಧಾರ ಅನೇಕರಿಗೆ ಹುಚ್ಚಾಟ ಅನಿಸಿದ್ದರೆ ಅಚ್ಚರಿಯಿಲ್ಲ. ಆದರೆ, ಇವರಿಬ್ಬರಿಗೂ ಸವಾಲುಗಳನ್ನು ಎದುರಿಸುವ ಹುಮ್ಮಸ್ಸಿತ್ತು. ಇದೆ ಕಾರಣಕ್ಕೆ ಸ್ವಂತ ಉದ್ಯಮದ ಹದಿ ಕಠಿಣವಾಗಿದ್ದರೂ ಅದೆಲ್ಲವನ್ನೂ ಎದುರಿಸಿದರು. ಪರಿಣಾಮ ಇಂದು ನಿಧಿ ಹಾಗೂ ಶಿಖರ್ ವೀರ್ ಸಿಂಗ್ ಇಬ್ಬರೂ ತಮ್ಮ ಹಿಂದಿನ ಅಧಿಕ ಪ್ಯಾಕೇಜ್ ನ ಉದ್ಯೋಗಕ್ಕಿಂತ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.
ಉದ್ಯಮಕ್ಕೋಸ್ಕರ ಕನಸಿನ ಮನೆ ಮಾರಿದ್ದರು :
ಈ ದಂಪತಿಗಳು ಆರ್ಥಿಕವಾಗಿ ಸಧೃಡವಾಗಿರುವ ಕುಟುಂಬದ ಹಿನ್ನಲೆ ಹೊಂದಿದ್ದರು. ನಿಧಿ ಅವರ ತಂದೆ ವಕೀಲರಾಗಿದ್ದರೇ, ಶಿಖರ್ ಅವರ ತಂದೆ ಚಂಢೀಗಡ ಹಾಗೂ ಅಂಬಲಾದಲ್ಲಿ ಸ್ವಂತ ಜ್ಯುವೆಲ್ಲರಿ ಶಾಪ್ ಗಳನ್ನೂ ಹೊಂದಿದ್ದರು. ಆದರೆ ನಿಧಿ ಹಾಗೂ ಶಿಖರ್ ಕುಟುಂಬದಿಂದ ಸಹಾಯ ಪಡೆಯದೇ ತಮ್ಮ ಉಳಿತಾಯದ ಹಣದಲ್ಲೇ ಉದ್ಯಮ ಪ್ರಾರಂಭಿಸಿದರು. ಸಮೋಸಕ್ಕೆ ಬೇಡಿಕೆ ಹೆಚ್ಚಿದಂತೆ ಅದರ ತಯಾರಿಕೆಗೆ ದೊಡ್ಡ ಸ್ಥಳದ ಅಗತ್ಯ ಎದುರಾದಾಗ ತಮ್ಮ ಕನಸಿನ ಅಪಾರ್ಟ್ ಮೆಂಟ್ ಅನ್ನು 80 ಲಕ್ಷ ರೂ ಗೆ ಮಾರಾಟ ಮಾಡಿದರು. ಆ ಮನೆಯಲ್ಲೂ ಅವರಿಬ್ಬರೂ ಕೇವಲ ಒಂದು ದಿನ ವಾಸಿಸಿದ್ದರು. ಹೀಗೆ ಕನಸಿನ ಮನೆ ಮಾರಿದ ಹಣದಿಂದ ಫ್ಯಾಕ್ಟರಿಯೊಂದನ್ನು ಬಾಡಿಗೆಗೆ ಪಡೆದರು.
ತಿಂಗಳಿಗೆ 30 ಸಾವಿರ ಸಮೋಸ ಮಾರಾಟ:
ಈ ದಂಪತಿಗಳಿಗೆ ತಮ್ಮ ಉದ್ಯೋಗದ ಮೇಲೆ ತುಂಬಾ ಆತ್ಮವಿಶ್ವಾಸವಿತ್ತು. ಅದು ಸುಳ್ಳಾಗಲಿಲ್ಲ. ಅವರ ಉದ್ಯಮ ಏಳುಬೀಳುಗಳ ಕಂಡು ಬೆಳೆದು ನಿಂತಿತು. ಇಂದು ಅವರು ಪ್ರತಿ ತಿಂಗಳು 30,000 ಸಮೋಸ ಮಾರಾಟ ಮಾಡುತ್ತಾರೆ. 45 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ. ಇವರ ಬಟರ್ ಚಿಕನ್ ಹಾಗೂ ಕಡಾಯಿ ಪನ್ನೀರ ಸಮೋಸಗಳು ಸಾಕಷ್ಟು ಜನಪ್ರಿಯತೆ ಗಳಿಸಿವೆ. ನಿಧಿ ಸಿಂಗ್ ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ವಗ್ಗೆ ಸಧ್ಯ ಯೋಜನೆ ರೂಪಿಸುತ್ತಿದ್ದಾರೆ.
ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Social