ಉಚಿತ ವಸತಿ ಸಹಿತ ಜೆಸಿಬಿ ಆಪರೇಟರ್ ತರಬೇತಿಗೆ ಅರ್ಜಿ ಅಹ್ವಾನ.

 ಉಚಿತ ವಸತಿ ಸಹಿತ ಜೆಸಿಬಿ ಆಪರೇಟರ್ ತರಬೇತಿಗೆ ಅರ್ಜಿ ಅಹ್ವಾನ.


ಇಂದಿನ ಸ್ಪರ್ಧಾತ್ಮಕ ಪರಿಸರದಲ್ಲಿ ಸುಸ್ಥಿರ ಜೀವನ ನಡೆಸಲು ಪ್ರತಿ ವೃತ್ತಿಯಲ್ಲಿಯು ವ್ಯಕ್ತಿಯು ದಿನೆ ದಿನೇ ತನ್ನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಬ್ಯಾಂಕ್ ಸಹಯೋಗದಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ಕಾಲ ಕಾಲಕ್ಕೆ ಒಂದೊಂದು ವಿಷಯ ಆಧಾರಿತ ಕೌಶಲ್ಯ ತರಬೇತಿಗಳು ನಡೆಯುತ್ತವೆ.

ನೀವು ಕಾರ್ಮಿಕರೇ ? ಹಾಗಿದ್ದಲ್ಲಿ ಕಾರ್ಮಿಕ ಕಾರ್ಡ್ ಪಡೆದುಕೊಳ್ಳಲು ಇಂದೇ ಆನ್ಲೈನ್ ಅರ್ಜಿ ಸಲ್ಲಿಸಿ...

ಇದಕ್ಕೆ ಸಂಬಂಧಿಸಿದಂತೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಅರ್ಸೆಟಿ ಕೇಂದ್ರದಲ್ಲಿ ಉಚಿತ ವಸತಿ ಮತ್ತು ಊಟ ಸಹಿತ ಜೆಸಿಬಿ ಆಪರೇಟರ್ ಮತ್ತು ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೆನರಾ ಬ್ಯಾಂಕ್ ದೇಶಪಾಂಡೆ ಅರ್ಸೆಟಿ ಹಳಿಯಾಳ ಮತ್ತು ಜೆ ಎಸ್ ಡಬ್ಲ್ಯೂ ಸ್ಟಿಲ್ ಲಿಮಿಟೆಡ್ ಇವರ ಸಂಯುಕ್ತಾಶ್ರಯದಲ್ಲಿ 30 ದಿನಗಳ ಉಚಿತ ಜೆಸಿಬಿ ಆಪರೇಟರ್ ಟ್ರೇನಿಂಗ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 

18 ರಿಂದ 45 ವರ್ಷ ವಯೋಮಿತಿಯ ಯುವಕರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ ಮತ್ತು ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು 25 ಏಪ್ರಿಲ್ 2023 ರೊಳಗಾಗಿ ದಾಂಡೇಲಿಯ ಹಸನಮಾಳದ ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿ ವಿಸ್ತರಣಾ ಕೇಂದ್ರ, ಇಲ್ಲಿಗೆ ಸಲ್ಲಿಸಬಹುದಾಗಿದೆ. ತರಬೇತಿಯಲ್ಲಿ ಊಟೋಪಚಾರ ಹಾಗೂ ವಸತಿ ಉಚಿತವಾಗಿರುತ್ತದೆ. 

 

ಉಚಿತ ಲಘು ವಾಹನ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನ 

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ದಾಂಡೇಲಿ ಹಾಗೂ ಟಾಟಾ ಮೋಟಾರ್ಸ್ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ 30 ದಿನಗಳ ಉಚಿತ ಲಘು ವಾಹನಾ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 20 ರಿಂದ 45 ವರ್ಷ ವಯೋಮಿತಿಯ ಯುವಕರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ, ಮೊಬೈಲ್ ನಂಬರ್, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ ಮತ್ತು ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು 10 ಏಪ್ರಿಲ್ 2023 ರೊಳಗಾಗಿ ದಾಂಡೇಲಿಯ ಹಸನಮಾಳದ ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟಿ ವಿಸ್ತರಣಾ ಕೇಂದ್ರ, ಇಲ್ಲಿಗೆ ಸಲ್ಲಿಸಬಹುದಾಗಿದೆ. ತರಬೇತಿಯಲ್ಲಿ ಊಟೋಪಚಾರ ಹಾಗೂ ವಸತಿ ಉಚಿತವಾಗಿರುತ್ತದೆ.

ಪ್ರತಿ ಜಿಲ್ಲೆಯಲ್ಲಿ ಈ ರೀತಿಯ ಉಚಿತ ತರಬೇತಿ ನೀಡುವ ಕೇಂದ್ರಗಳಿದ್ದು ವಿವಿಧ ಬಗೆಯ ಸ್ವಉದ್ಯೋಗ ಕೈಗೊಳ್ಳಲು ಇಲ್ಲಿ ತರಬೇತಿ ಪಡೆಯಬಹುದು.


 ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು