ಬೆಲ್ಜಿಯಂ ಬೆಡಗಿ ಜತೆ ಹಂಪಿ ಆಟೋ ಚಾಲಕನ ಮದುವೆ:

ಬೆಲ್ಜಿಯಂ ಬೆಡಗಿ ಜತೆ ಹಂಪಿ ಆಟೋಚಾಲಕನ ಮದುವೆ ; ೩ ವರ್ಷದ ಹಿಂದೆ ಗೈಡ್ ಗೆ ಫಿದಾ ಆಗಿದ್ದ ವಿದೇಶಿ ಯುವತಿ,

ಬೆಲ್ಜಿಯಂ ಬೆಡಗಿಯೊಬ್ಬಳು ಕರ್ನಾಟಕದ ಹಂಪಿಯ ಆಟೋ ಚಾಲಕನೊಬ್ಬನನ್ನು ಇಂದು ವರಿಸಲಿದ್ದು, ಈ ಮೂಲಕ ಇಬ್ಬರು ದಾಂಪತ್ಯ ಜೀವನಕ್ಕೆ ಪ್ರವೇಶಿಸಲಿದ್ದಾರೆ. ಹಂಪಿಯ ಗೈಡ್ ಹಾಗೂ ಆಟೋ ಚಾಲಕನು ಆಗಿರುವ ವಿ.ಅನಂತರಾಜು ಮತ್ತು ಬೆಲ್ಜಿಯಂ ದೇಶದ ಪ್ರಜೆ ಕೆಮಿಲ್ ವಧು -ವರರು. ಇವರು ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಲಿದ್ದಾರೆ.

ಟ್ಯಾಕ್ಸಿ ಚಾಲಕರ ಉನ್ನತ ವಿದ್ಯಾಭ್ಯಾಸಕ್ಕಾಗಿ ಇರುವ ವಿದ್ಯಾರ್ಥಿವೇತನ ಇಂದೇ ಅರ್ಜಿ ಸಲ್ಲಿಸಿ:

ಮೂರೂ ವರ್ಷದ ಹಿಂದೆಯೇ ಪ್ರೇಮದ ವಿವಾಹವಾಗಬೇಕಿದ್ದ ಜೋಡಿಗೆ ಕರೋನ ತಡೆಯೊಡ್ಡಿತ್ತು. ಕೆಮಿಲ್ ಕುಟುಂಬದವರಿಗೆ ಮಗಳ ವಿವಾಹವನ್ನು ಬೆಲ್ಜಿಯಂ ದೇಶದಲ್ಲಿ ಅದ್ದೂರಿ ವೈಭವದೊಂದಿಗೆ ಮಾಡಬೇಕೆಂಬ ಮನಸ್ಸಿದ್ದರೂ, ಹಿಂದೂ ಸಂಪ್ರದಾಯದಂತೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿ, 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಗುರುವಾರ ಸಂಜೆ ಕುಟುಂಬ ಪರಿವಾರದೊಂದಿಗೆ ನಿಶ್ಚಿತಾರ್ಥ ನೆರೆವೇರಿಸಿದರು.

ಅನಂತರಾಜು ಗೈಡ್ ಆಗಿ ಹಂಪಿಯ ಗತವೈಭವವನ್ನು ಪ್ರವಾಸಿಗರಿಗೆ ವಿವರಿಸುತ್ತಿದ್ದು, ಮೂರೂ ವರ್ಷಗಳ ಹಿಂದೆ ಬೆಲ್ಜಿಯಂ ದೇಶದಿಂದ ಬಂದಿದ್ದ ಮರಿಯನ್ನೇ ಜಿಮ್ ಫಿಲ್ಲಿಪ್ಪೆ ಅವರ ಪರಿವಾರಕ್ಕೂ ಮಾರ್ಗದರ್ಶನ ಮಾಡಿದ್ದರು. ಈ ಸಂದರ್ಭ ಜಿಮ್ ಅವರ ಮೂರನೇ ಪುತ್ರಿ ಕೆಮಿಲ್ ಜತೆ ಪ್ರೇಮಾಂಕುರವಾಗಿತ್ತು.

ದುಬೈನ ಅತೀ ಎತ್ತರದ ಹೋಟೆಲ್ ನ ತುತ್ತತುದಿಯಲ್ಲಿ ವಿಮಾನ ಲ್ಯಾನ್ಡಿಂಗ್ -ಹೇಗಿತ್ತು ಗೊತ್ತಾ ಆ ಕ್ಷಣ?

ಅನಂತರಾಜು ಪ್ರಾಮಾಣಿಕ ಆಟೋ ಚಾಲಕ ಎನ್ನುವುದರೊಂದಿಗೆ ಉತ್ತಮ ಮಾರ್ಗದರ್ಶಕ ಆಗಿಯೂ ಅವರ ಮನಗೆದ್ದಿದ್ದಾನೆ. ಮರಿಯನ್ನೇ ಶ್ರೀ ಜಿಮ್ ಫಿಲ್ಲಿಪ್ಪೆ ಅವರ ತೃತೀಯ ಸುಪುತ್ರಿ ಕೆಮಿಲ್ ಅವರ ಪರಿವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಾರ್ಗದರ್ಶಕ ಅನಂತರಾಜುವಿನ ಮೇಲೆ ಯುವತಿ ಕೆಮಿಲ್ ಪ್ರೇಮ ಅರಳಿತು.




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು