ದುಬೈನ ಅತೀ ಎತ್ತರದ ಹೋಟೆಲ್ ನ ತುತ್ತತುದಿಯಲ್ಲಿ ವಿಮಾನ ಲ್ಯಾನ್ಡಿಂಗ್ -ಹೇಗಿತ್ತು ಗೊತ್ತಾ ಆ ಕ್ಷಣ?

 ದುಬೈನ ಅತೀ ಎತ್ತರದ ಹೋಟೆಲ್ ನ ತುತ್ತತುದಿಯಲ್ಲಿ ವಿಮಾನ ಲ್ಯಾನ್ಡಿಂಗ್ -ಹೇಗಿತ್ತು ಗೊತ್ತಾ ಆ ಕ್ಷಣ? 


ಉದ್ಯಮಿ ಸಹಾಯಕ್ಕಾಗಿ ನಿಂತ ಅಶ್ವಿನಿ ಪುನೀತ್ ರಾಜಕುಮಾರ್..

ದುಬೈನ ಅತ್ಯಂತ ಎತ್ತರ ಹೋಟೆಲ್ ಗಳಲ್ಲಿ ಒಂದಾದ ಬುರ್ಜ್ ಅಲ್ ಅರಬ್ ಹೋಟೆಲ್ ನ ತುತ್ತ ತುದಿಯಲ್ಲಿರುವ ಹೆಲಿಪ್ಯಾಡ್ ಮೇಲೆ ಪೊಲ್ಯಾನ್ಡ್ ನ ಪೈಲೆಟ್ ಒಬ್ಬರು ಯಶಸ್ವಿಯಾಗಿ ವಿಮಾನವನ್ನು ಲ್ಯಾನ್ಡ್ ಮಾಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಈ ರೀತಿ ಹೆಲಿಪ್ಯಾಡ್ ಮೇಲೆ ವಿಮಾನವೊಂದನ್ನು ಲ್ಯಾನ್ಡ್ ಮಾಡಿಸಿದ್ದು ವಿಶ್ವದಲ್ಲೇ ಇದು ಮೊದಲು ಎಂದು ಹೇಳಲಾಗಿದೆ. ಅಂದಹಾಗೆ ಪೊಲ್ಯಾನ್ಡ್ ನ ಈ ಸಾಹಸಿ ಪೈಲೆಟ್ ಹೆಸರು ಲ್ಯುಕ್ ಜೆಪಿಯೆಲಾ. ಅವರಿಗೆ 39 ವರ್ಷ, 27 ಮೀಟರ್ ಅಗಲ ಇರುವ ವಿಶೇಷವಾಗಿ ಮಾರ್ಪಾಡು ಮಾಡಲಾದ ವಿಮಾನವನ್ನು ಪೈಲೆಟ್ ಲ್ಯುಕ್ ಅವರು ಅತೀ ಎತ್ತರದ ಹೋಟೆಲ್ ನ ಹೆಲಿಪ್ಯಾಡ್ ಮೇಲೆ ಲ್ಯಾನ್ಡ್ ಮಾಡಿಸಿ, ಮತ್ತೆ ಅಲ್ಲಿಂದ ಟೇಕ್ ಆಫ್ ಆಗುವ ವಿಡಿಯೋ ವೈರಲ್ ಆಗಿದ್ದು, ದೃಶ್ಯ ಮೈ ಜುಂ ಎನ್ನುವಂತಿದೆ.

                                  ವಿಡಿಯೋ ನೋಡಿ

ಹೆಲಿಪ್ಯಾಡ್ ಮೇಲೆ ಹೆಲಿಕಾಪ್ಟರ್ ಲ್ಯಾನ್ಡ್ ಮಾಡಿಸಬಹುದೇ ಹೊರತು, ವಿಮಾನಗಳನ್ನು ಲ್ಯಾನ್ಡ್ ಮಾಡಿಸಲು ಆಗದು. ವಿಮಾನಗಳು ಲ್ಯಾನ್ಡ್ ಆಗಲು  ರನ್ ವೇ ಬೇಕು. ಹೀಗಾಗಿ ಪೊಲ್ಯಾನ್ಡ್ ಪೈಲೆಟ್ ಲ್ಯೂಕ್ ಜೆಪಿಯೆಲಾ ಅವರು ಒಂದು ಚಿಕ್ಕದಾದ ವಿಮಾನವನ್ನು ಅಷ್ಟೆತ್ತರದ ಹೋಟೆಲ್ ಮೇಲಿನ ಹೆಲಿಪ್ಯಾಡ್ ಮೇಲೆ ಲ್ಯಾನ್ಡ್ ಮಾಡಿಸಿದ್ದು, ಸಾಹಸವೇ ಹೌದು. ಅಂದಹಾಗೆ, ಇವರು ಇದೊಂದು ಸಾಹಸಕ್ಕಾಗಿ ಕಳೆದ ಎರಡು ವರ್ಷಗಳಿಂದ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

ಕರ್ನಾಟಕ ರಾಜ್ಯ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ:

ಒಂದು ಕೃತಕ ದ್ವಿಪಾದ ಮೇಲೆ ನಿಂತಿರುವ ಬುರ್ಜ್ ಅಲ್ ಅರಬ್ ಹೋಟೆಲ್ 212 ಮೀಟರ್ ಎತ್ತರವಿದೆ. ಒಟ್ಟು 56  ಫ್ಲೋರ್ ಗಳು ಇವೆ. ಈ ಐತಿಹಾಸಿಕ ಕಟ್ಟಡದ ತುತ್ತ ತುದಿಯಲ್ಲಿ ಪೈಲೆಟ್ ವಿಮಾನವನ್ನು ಲ್ಯಾನ್ಡ್ ಮಾಡಿಸಿದ ವಿಡಿಯೋವನ್ನು ರೆಡ್ ಬುಲ್ ಮೋಟಾರ್ ಸ್ಪೋರ್ಟ್ಸ್ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದೆ. 


 

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು