ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ
ರಾಷ್ಟೀಯ ಯುವ ದಳ
ರಾಷ್ಟೀಯ ಸೇವಾ ಕಾರ್ಯಕರ್ತರಾಗಿ ಅರ್ಜಿ ಆಹ್ವಾನ
ಭಾರತ ಸರ್ಕಾರದ ವಿವಿಧ ಯೋಜನೆಗಳಲ್ಲಿ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವ ಅಭಿವೃದ್ಧಿ ಜಾಲದ ಮೂಲಕ (Youth Network) ಯುವ ನಾಯಕರಾಗಿ ಹೊರಹೊಮ್ಮಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬಯಸುವ ಯುವಜನರಿಗೆ ಉತ್ತಮ ಅವಕಾಶ. ಯುವಜನರ ಸಾಮರ್ಥ್ಯ ಹಾಗೂ ಶಕ್ತಿಯನ್ನು ರಾಷ್ಟ್ರ ನಿರ್ಮಾಣ ಚಟುವಟಿಕೆಗಳಿಗೆ ನಿಯೋಜಿಸುವ ನಿಟ್ಟಿನಲ್ಲಿ ಅಂತಹ ಯುವ ಸಮೂಹವನ್ನು ಭಾರತ ಸರ್ಕಾರವು ಅನ್ವೇಷಿಸುತ್ತದೆ. ಆರೋಗ್ಯ, ಸಾಕ್ಷರತೆ, ನೈರ್ಮಲ್ಯ, ಸಾಮಾಜಿಕ ಅರಿವು ಮೂಡಿಸುವಂತಹ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಇತರೆ ಸಾಮಾಜಿಕ ಚಟುವಟಿಕೆಗಳಿಗೆ ಆಯ್ಕೆಯಾಗುವ ಯುವ ಸಮೂಹವನ್ನು ನಿಯೋಜಿಸಲಾಗುತ್ತದೆ.
ಅರ್ಹತೆ
✷ ಹತ್ತನೇ ತರಗತಿಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಿರುವ, 18 ರಿಂದ 29 ವರ್ಷದ ವಯೋಮಾನದೊಳಗಿನ
✷ (01-04-2023 ಅನ್ವಯವಾಗುವಂತೆ) ಆಯಾ ಜಿಲ್ಲೆಯ ಯುವಜನರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಯುವಜನರು ಅರ್ಜಿ ಸಲ್ಲಿಸುವಂತಿಲ್ಲ. ಮಾಹೆಯಾನ ಗೌರವ ಧನ ರೂ. 5000/- (ರೂಪಾಯಿ ಐದು ಸಾವಿರ ಮಾತ್ರ)
✷ ಯುವ ಸಂಘದ ಸದಸ್ಯರು, ಭಾರತ ಸ್ಕೊಟ್ಸ್ & ಗೈಡ್ಸ್, ಎನ್.ಎಸ್.ಎಸ್,ಎನ್.ಸಿ.ಸಿ. ಭಾರತ ಸೇವಾದಳ ಮುಂತಾದವುಗಳಲ್ಲಿ ಸೇವೆ ಸಲ್ಲಿಸುವವರಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸುವ ಬಗೆ
✷ ಭಾರತ ಸರ್ಕಾರದ ವೆಬ್ ಸೈಟ್ www.nyks.nic.in ಗೆ ಹೋಗಿ ಪ್ರಸಕ್ತ ಯೋಜನೆಯ ಬಗ್ಗೆ ಸವಿಸ್ತಾರ ಮಾಹಿತಿ ಪಡೆದು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09-03-2023 ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಅಧಿಕಾರಿಯನ್ನು ಸಂಪರ್ಕಿಸಿ.
ಜಿಲ್ಲಾ ಯುವ ಅಧಿಕಾರಿ,
ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು