ಯೂಟ್ಯೂಬ್ ಮೂಲಕವೇ ಕೋಟ್ಯಧಿಶೆಯಾದ ಪ್ರಾಜಕ್ತಾ ಕೋಲಿ : ಈಕೆ ತಿಂಗಳ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!

 ಯೂಟ್ಯೂಬ್ ಮೂಲಕವೇ ಕೋಟ್ಯಧಿಶೆಯಾದ ಪ್ರಾಜಕ್ತಾ ಕೋಲಿ : ಈಕೆ ತಿಂಗಳ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!


ಇತ್ತೀಚಿನ ದಿನಗಳಲ್ಲಿ ಬಹುತೇಕರು ಯೂಟ್ಯೂಬ್ ಚಾನೆಲ್ ಮೂಲಕ ಆದಾಯ ಗಳಿಕೆಗೆ ಮುಂದಾಗುತ್ತಿದ್ದಾರೆ. ಯೂಟ್ಯೂಬ್ ಮೂಲಕ ಎಷ್ಟು ಗಳಿಕೆ ಮಾಡಬಹುದು ಎಂಬ ಅಂದಾಜು ಕೆಲವರಿಗಿಲ್ಲ. ಆದರೆ, ಪ್ರಾಜಕ್ತಾ ಕೋಲಿ ಎಂಬ ದೇಶದ ಜನಪ್ರಿಯ ಯೂಟ್ಯೂಬರ್. ಆದಾಯ ಕೇಳಿದ್ರೆ ಮಾತ್ರ ನಿಜಕ್ಕೂ ಅಚ್ಚರಿಯಾಗುತ್ತದೆ. ಈಕೆ 68 ಲಕ್ಷ ಫಾಲೋವರ್ಸ್ ಹೊಂದಿದ್ದು ತಿಂಗಳಿಗೆ 40 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಇಂಟರ್ನೆಟ್ ಬಳಕೆ ಹೆಚ್ಚಿದ ಬಳಿಕ ವಿವಿಧ ವಿನೂತನ ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಿವೆ. ಅದರಲ್ಲೂ ಯೂಟ್ಯೂಬ್ ಅನೇಕ ಮಂದಿಗೆ ಆದಾಯದ ಜೊತೆಗೆ ಜನಪ್ರಿಯತೆಯನ್ನು ಕೂಡ ತಂದುಕೊಟ್ಟಿದೆ. ಅನೇಕರು ತಮ್ಮದೇ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಕೈತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಅಡುಗೆ, ಆರೋಗ್ಯ ಸಲಹೆಗಳು, ಬ್ಯುಟಿ ಟಿಪ್ಸ್ ಸೇರಿದಂತೆ ಯೂಟ್ಯೂಬ್ ನಲ್ಲಿ ಇಂದು ಸಿಗದ ಮಾಹಿತಿಯಿಲ್ಲ. ಈ ರೀತಿ ಯೂಟ್ಯೂಬ್ ಮೂಲಕ ಜನಪ್ರಿಯತೆ ಗಳಿಸಿರೋರಲ್ಲಿ ಪ್ರಾಜಕ್ತಾ ಕೋಲಿ ಕೂಡ ಒಬ್ಬರು. ತಮ್ಮದೇ ಶೈಲಿಯಲ್ಲಿ ಹಾಸ್ಯಭರಿತ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಜನರನ್ನು ತಮ್ಮತ್ತ ಸೆಳೆಯುವಲ್ಲಿ ಸಫಲರಾಗಿದ್ದಾರೆ. ' 'ಮೋಸ್ಟಲೀಸನ್ ' ಎಂಬ ಯೂಟ್ಯೂಬ್ ಚಾನೆಲ್ ನ್ನು ೨೦೧೫ ರಲ್ಲಿ ಪ್ರಾರಂಭಿಸಿದ ಕೋಲಿ, ಅದರಲ್ಲಿ ಭಾರೀ ಯಶಸ್ಸು ಗಳಿಸಿದ್ದಾರೆ. ಇಂದು ಆಕೆ ದೇಶದ ಅತ್ಯಂತ ಜನಪ್ರಿಯ ಯೂಟ್ಯೂಬರ್ ಗಳಲ್ಲಿ ಒಬ್ಬರಾಗಿದ್ದರು. ೬೮ ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಅಷ್ಟೇ ಅಲ್ಲ ಯೂಟ್ಯೂಬ್ ಚಾನೆಲ್ ನಿಂದ ಅವರಿಗೆ ತಿಂಗಳಿಗೆ ಸುಮಾರು ೪೦ ಲಕ್ಷ ರೂ. ಆದಾಯ ಬರುತ್ತಿದೆ ಎಂದು ಹೇಳಲಾಗಿದೆ. ಇನ್ನು ಪ್ರಾಜಕ್ತಾ ಕೋಲಿ ಅವರ ವಾರ್ಷಿಕ ಆದಾಯ ಅಂದಾಜು ೪ ಕೋಟಿ ರೂ.

ಆ ಮಹಿಳಾ ಉದ್ಯಮಿ ಸಮೋಸಾ ಮಾರಿ ದಿನಕ್ಕೆ ಗಳಿಸಿದ್ದು ಎಷ್ಟು ಗೊತ್ತಾ???

ರೇಡಿಯೋ ಜಾಕಿಯಾಗಿದ್ದ ಕೋಲಿ 

ಶಾಲಾ ದಿನಗಳಿಂದಲೂ ರೇಡಿಯೋ ಜಾಕಿಯಾಗಬೇಕೆಂದು ಪ್ರಾಜಕ್ತಾ ಕೋಲಿ ಕನಸಾಗಿತ್ತು. ಈ ಕನಸನ್ನು ನನಸು ಮಾಡಿಕೊಳ್ಳಲು ಆಕೆ ಮುಂಬೈ ವಿಶ್ವವಿದ್ಯಾಲಯದ ಮುಲುಂಡ್ ವಿಜಿ ವೇಝ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಹಾಗೂ ಕಾಮರ್ಸ್ ನಲ್ಲೂ ಸಮೂಹ ಮಾಧ್ಯಮದಲ್ಲಿ ಪದವಿ ಪೂರ್ಣಗೊಳಿಸಿದರು. ಪದವಿ ಪೂರ್ಣಗೊಂಡ ತಕ್ಷಣ ಫಿವರ್ 104 ಎಫ್ ಎಂ ಮುಂಬೈ ಕೇಂದ್ರದಲ್ಲಿ ಇಂಟರ್ನಿಯಾಗಿ ಸೇರಿದರು. ಒಂದು ವರ್ಷಗಳ ಬಳಿಕ ' ಕಾಲ್ ಸೆಂಟರ್ ' ಎಂಬ ಶೋ ನಡೆಸುವ ಅವಕಾಶ ಸಿಕ್ಕಿತು. ಆದರೆ, ಈ ಶೋ ಅಷ್ಟು ಚೆನ್ನಾಗಿ ನಡೆಯಲಿಲ್ಲ. ಹೀಗಾಗಿ ಕೋಲಿ ಈ ಕೆಲಸವನ್ನು ತ್ಯಜಿಸಿ ತನ್ನ ಸ್ವಂತ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದರು.

ಯಶಸ್ವಿಯಾದ ಯೂಟ್ಯೂಬ್ ಚಾನೆಲ್ 

    ಹಾಸ್ಯಭರಿತ ವಿಡಿಯೋಗಳನ್ನು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಕೋಲಿ ಪೋಸ್ಟ್ ಮಾಡುತ್ತಾರೆ. ಪ್ರಸಕ್ತ ವಿದ್ಯಮಾನಗಳಿಗೆ ಸಂಬಂಧಿಸಿದ ಕೆಲವು ವಿಡಿಯೋಗಳು ಕೂಡ ಇವರ ಯೂಟ್ಯೂಬ್ ಚಾನೆಲ್ ನಲ್ಲಿ ಕಾಣಸಿಗುತ್ತವೆ. ಬಾಲಿವುಡ್ ನ ಅನೇಕ ದೊಡ್ಡ ಸೆಲೆಬ್ರೆಟಿಗಳೊಂದಿಗೆ ಕೂಡ ರಿಲ್ಸ್ ಮಾಡಿ ಅಪ್ಲೋಡ್  ಮಾಡಿದ್ದಾರೆ.ಜನಪ್ರಿಯ ನಟರ ಸಂದರ್ಶನದ ವಿಡಿಯೋಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ. 2019 ರಲ್ಲಿ ಪೋರ್ಬ್ಸ್ '30 ಅಂಡರ್ 30' ಪಟ್ಟಿಯಲ್ಲಿ ಪ್ರಾಜಕ್ತಾ ಕೋಲಿ ಸ್ಥಾ ಪಡೆದಿದ್ದರು. ಪ್ರಸಕ್ತ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಕೋಲಿ ಅವರಿಗೆ 75 ಲಕ್ಷ ಫಾಲೋವರ್ಸ್ ಇದ್ದಾರೆ.

ಸಿನಿಮಾಗಳಲ್ಲೂ ನಟನೆ 

    ಪ್ರಜಕ್ತಾ ಕೋಲಿ ಜನಪ್ರಿಯತೆ ಅವರನ್ನು ಬಾಲಿವುಡ್ ಅಂಗಳಕ್ಕೂ ಕರೆದುಕೊಂಡು ಹೋಗಿದೆ. ರಾಜ್ ಮೆಹ್ತಾ ನಿರ್ದೇಶನದ 'ಜುಗ್ ಜುಗ್ ಜಿಯೋ' ಎಂಬ ಸಿನಿಮಾದಲ್ಲಿ ಅವರು ವರುಣ್ ಧವನ್, ಅನಿಲ್ ಕಪೂರ್, ಕಿಯಾರ್ ಅಡ್ವಾಣಿ ಹಾಗೂ ನೀತು ಕಪೂರ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ನೆಟ್ ಫಿಕ್ಸ್ ವೆಬ್ ಸಿರೀಸ್ 'ಮಿಸ್ ಮ್ಯಾಚ್ ' ನಲ್ಲಿ ಕೂಡ ಕೋಲಿ ನಟಿಸಿದ್ದಾರೆ.



ಕೋಲಿ ಆದಾಯವೆಷ್ಟು?

2023 ನೇ ಸಾಲಿಗೆ ಅನ್ವಯಿಸುವಂತೆ ಪ್ರಾಜಕ್ತಾ ಕೋಲಿ ಅವರ ನಿವ್ವಳ ಸಂಪತ್ತು 16 ಕೋಟಿ ರೂ. ಯೂಟ್ಯೂಬ್ ನಿಂದ ಆಕೆ ಪ್ರತಿ ತಿಂಗಳು 40 ಲಕ್ಷ ರೂ. ಗಳಿಸುತ್ತಿದ್ದಾರೆ. ಅವರ ವಾರ್ಷಿಕ ಆದಾಯ 4 ಕೋಟಿ ರೂ. ಗಿಂತಲೂ ಹೆಚ್ಚಿದೆ.

 ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







1 ಕಾಮೆಂಟ್‌ಗಳು

ನವೀನ ಹಳೆಯದು