ಈ ವಿಷಯ ಕೇಳಿದ್ರೆ ನೀವು ಬೆರಗಾಗೋದು ಖಂಡಿತ :

ವಧುವಿಗೆ ಪಿಯುಸಿಯಲ್ಲಿ ಕಡಿಮೆ ಮಾರ್ಕ್ಸ್, ಮದುವೆ ಕ್ಯಾನ್ಸೆಲ್ ಮಾಡಿದ ವರ! 




            ಇವತ್ತಿನ ದಿನಗಳಲ್ಲಿ ಮದ್ವೆ ಸಂಬಂಧ ಮುರಿಯೋಕೆ ಕಾರಣಗಳೇ ಬೇಕಿಲ್ಲ. ಸಣ್ಣ ಪುಟ್ಟ ಕಾರಣಕ್ಕೂ ಮದುವೆ ಅರ್ಧದಲ್ಲಿ ನಿಂತು ಹೋಗಿಬಿಡುತ್ತದೆ. ಅಥವಾ ಡೈವೋರ್ಸ್ ಆಗುತ್ತದೆ. ಆದ್ರೆ ಇಲ್ಲೊಬ್ಬ ಹುಡುಗ ಮದ್ವೆ ಕ್ಯಾನ್ಸಲ್ ಮಾಡ್ಕೊಂಡಿರೋ ಕರಣ ತಿಳಿದ್ರೆ ನೀವು ಬೆರಗಾಗೋದು ಖಂಡಿತ.

ವಧುವಿಗೆ ಪಿಯುಸಿಯಲ್ಲಿ ಮಾರ್ಕ್ಸ್ ಚೆನ್ನಾಗಿಲ್ಲವೆಂದು ಮದ್ವೆ ಕ್ಯಾನ್ಸಲ್ !

ಮದ್ವೆ ಅನ್ನೋದು ಒಂದು ಸುಂದರವಾದ ಬಾಂಧವ್ಯ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿದೆ. ವಿಚ್ಚೇದನ, ಅನೈತಿಕ ಸಂಬಂಧದಿಂದ ದಾಂಪತ್ಯ ಅನ್ನೋದು ಅರ್ಥಹೀನವಾಗುತ್ತಿದೆ. ಲವ್ ಮಾಡಿ ಅರ್ಧದಲ್ಲೇ ಕೈ ಬಿಡುವುದು, ಎಂಗೇಜ್ ಮೆಂಟ್ ಮಾಡಿ ಕ್ಯಾನ್ಸಲ್ ಮಾಡಿಕೊಳ್ಳುವುದು. ಮದ್ವೆ ಮನೆಯಲ್ಲೆ ಈ ಹುಡುಗ ನನಗೆ ಬೇಡ ಅನ್ನೋದು ಇತ್ತೀಚ್ಚಿಗೆ ಸಾಮಾನ್ಯವಾಗಿದೆ. ಹೀಗಾಗಿ ಇವತ್ತಿನ ದಿನಗಳಲ್ಲಿ ಮದುವೆಯ ಮೊದಲು ಅದೆಷ್ಟು ತಯಾರಿ ನಡೆದರೂ, ಕಾರ್ಯಗಳು ನಡೆದರೂ ತಾಳಿ ಕಟ್ಟುವವರೆಗೆ ಮದುವೆಯಾಯ್ತು ಎಂದು ಹೇಳುವಂತಿಲ್ಲ. ಹಾಗೆಯೆ, ಇಲ್ಲೊಂದು ಮಾಡುವೆ ಮಂಟಪದಲ್ಲಿ ಅರ್ಧದಲ್ಲೇ ನಿಂತು ಹೋಗಿದೆ.

ಮದುವೆಯಾಗುವ ಜೋಡಿಯ ಮಧ್ಯೆ ಸೈದ್ಧಾಂತಿಕ ಅಥವಾ ನೈತಿಕ ಭಿನ್ನಾಭಿಪ್ರಾಯಗಳಿಂದ ಕೆಲವು ವಿವಾಹಗಳು ರದ್ದುಗೊಳ್ಳುತ್ತವೆ. ಆದರೆ, ಇಲ್ಲೊಂದೆಡೆ ವರ ( groom ), ವಧುವಿನ ಅಂಕಪಟ್ಟಿಯ ಬಗ್ಗೆ ತಿಳಿದು ಮದುವೆಯನ್ನು ನಿಲ್ಲಿಸಿದ್ದಾನೆ. ಉತ್ತರಪ್ರದೇಶದಲ್ಲೊಬ್ಬ ವಧುವಿನ ಅಂಕಪಟ್ಟಿಯ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾನೆ. ವಧುವಿನ ( bride ) 12 ನೇ ತರಗತಿಯ ಅಂಕಗಳು ಸಾಕಷ್ಟು ಚೆನ್ನಾಗಿಲ್ಲ ಎಂದು ಮದುವೆಯನ್ನು ರದ್ದುಗೊಳಿಸಿದ್ದಾನೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ತೀರ್ವಾ ಕೊತ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.


ವಧುವಿನ ತಂದೆಯಿಂದ ಪೊಲೀಸರಿಗೆ ದೂರು 

ವರ ಮದುವೆಯಿಂದ ಹಿಂದೆ  12 ನೇ ತರಗತಿಯಲ್ಲಿ ಕಳಪೆ ಅಂಕಗಳು ಬಂದಿರುವುದೇ ಕಾರಣ ಎಂದು ನನಗೆ ತಿಳಿಸಲಾಗಿದೆ ಎಂದು ವಧುವಿನ ತಂದೆ ಹೇಳಿದ್ದಾರೆ. ಆದರೆ, ಸಾಕಷ್ಟು ವರದಕ್ಷಿಣೆ ಸಿಗದ ಕಾರಣ ವರನ ನಿರ್ಧಾರ ಹೊರಬಿದ್ದಿದೆ ಎಂದು ವಧುವಿನ ತಂದೆ ಆರೋಪಿಸಿದ್ದಾರೆ. ವರನ ವರದಕ್ಷಿಣೆ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದ ಕಾರಣ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ವಧುವಿನ ಮನೆಯವರು ಆರೋಪಿಸಿದ್ದಾರೆ. ವರನ ಕಡೆಯ ಮಹಿಳೆಯರು ವಧುವನ್ನು ಸ್ವೀಕರಿಸುವ ಕಾರ್ಯಕ್ರಮವಾದ ಗೋದ್ ಭಾರೈ ಸಮಾರಂಭವನ್ನು ನಡೆಸಿದ ನಂತರ ಮದ್ವೆ ರದ್ದು ಮಾಡಲಾಯಿತು. ಹೀಗಾಗಿ ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ ' ನನ್ನ ಮಗಳು ಸೋನಿಯಾ ಮದುವೆಯನ್ನು ಬಾಗನ್ವಾ ಗ್ರಾಮದ ರಾಮಶಂಕರ್ ಎಂಬುವರ ಮಗ ಸೋನು ಜೊತೆ ನಿಶ್ಚಯಿಸಲಾಗಿತ್ತು. ಡಿಸೇಂಬರ್ 4,2022 ರಂದು ಗೋದ್ಹ್ ಬಾರೈ ಸಮಾರಂಭವನ್ನು ನಡೆಸಲಾಯಿತು. ಸಮಾರಂಭದಲ್ಲಿ ವಧುವಿನ ತಂದೆಯಾದ ನಾನು 60,000 ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ. ವರನಿಗೆ 15,000 ರೂಪಾಯಿ ಮೌಲ್ಯದ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದೇನೆ. ಒಂದೆರೆಡು ದಿನಗಳ ನಂತರ ವರನ ಮನೆಯವರು ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ಹೆಚ್ಚಿನ ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದು ವರನಿಗೆ ತಿಳಿಸಿದ್ದರಿಂದ ವರ, ಹುಡುಗಿಗೆ ಮಾರ್ಕ್ಸ್ ಕಡಿಮೆ ಇದೆ ಎಂದು ಹೇಳಿ ಸಂಬಂಧ ಕಳೆದುಕೊಂಡಿದ್ದಾನೆ.' ಎಂದು ತಿಳಿಸಿದರು.    

ಪೊಲೀಸರು ಎರಡು ಕುಟುಂಬಗಳಿಗೆ ಕೌನ್ಸಿಲಿಂಗ್ ಮಾಡುವ ಮೂಲಕ ಪ್ರಕರಣ ಬಗ್ಗೆ ಕಾರಣವನ್ನು ಪತ್ತೆ ಮಾಡಿದ್ದಾರೆ. ಎರಡೂ ಕುಟುಂಬಗಳ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿದರು. ಇದೀಗ ಎರಡು ಕುಟುಂಬ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದಾರೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತೀರ್ವ ಕೊತ್ವಾಲಿ ವಲಯದ ಪೊಲೀಸ್ ಠಾಣೆ ಪ್ರಭಾರಿ ಪಿ.ಎನ್. ಬಾಜಪೈ ತಿಳಿಸಿದ್ದಾರೆ.



 ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@











ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು