9-12 ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ। 11 ಮತ್ತು 12ನೇ ತರಗತಿಗೆ ಸೆಮಿಸ್ಟರ್ ಪದ್ಧತಿ ಪಿಯುಸಿ ಹಂತದಲ್ಲಿರಲ್ಲ ಸೈನ್ಸ್, ಕಾಮರ್ಸ್, ಆರ್ಟ್ಸ್ !!

9-12 ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆ। 11 ಮತ್ತು 12ನೇ ತರಗತಿಗೆ ಸೆಮಿಸ್ಟರ್ ಪದ್ಧತಿ 

ಪಿಯುಸಿ ಹಂತದಲ್ಲಿರಲ್ಲ ಸೈನ್ಸ್, ಕಾಮರ್ಸ್, ಆರ್ಟ್ಸ್ !!



SSLC ಅಥವಾ 10 ನೇ ತರಗತಿ ಬಳಿಕ ಯಾವ ವಿಭಾಗವನ್ನು ಆಯ್ದುಕೊಳ್ಳಬೇಕು? ಎಂಬ ಗೊಂದಲ ಇನ್ನು ಮುಂದೆ ವಿದ್ಯಾರ್ಥಿಗಳನ್ನು ಕಾಡುವುದಿಲ್ಲ. ಕಾರಣ ಕಲೆ, ವಾಣಿಜ್ಯ, ವಿಜ್ಞಾನ ಎಂಬ ವರ್ಗಿಕರಣವೇ ಇಲ್ಲವಾಗಲಿದೆ....!

RTE ಮೂಲಕ ಪ್ರವೇಶಾತಿಗೆ ಅರ್ಜಿ ಆರಂಭ


    ರಾಷ್ಟೀಯ ಶಿಕ್ಷಣ ನೀತಿಯನ್ವಯ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದೇ ಹೇಳಲಾಗಿರುವ ರಾಷ್ಟೀಯ ಪಠ್ಯಕ್ರಮ ಚೌಕಟ್ಟಿನ (ನ್ಯಾಷನಲ್ ಕರಿಕುಲಂ ಫ್ರೇಮ್ ವರ್ಕ್-ಎನ್.ಸಿ.ಎಫ್) ಕರಡನ್ನು ಸಿದ್ಧಪಡಿಸಲಾಗಿದೆ. ಇದರನ್ವಯ 11, 12ನೇ ತರಗತಿ ವಿದ್ಯಾರ್ಥಿಗಳು ಮಾನವೀಯ, ಗಣಿತ, ಕಂಪ್ಯೂಟಿಂಗ್ ವೃತ್ತಿ ಶಿಕ್ಷಣ, ದೈಹಿಕ ಶಿಕ್ಷಣ ಲಲಿತ ಕಲೆ, ಸಮಾಜ ವಿಜ್ಞಾನ, ವಿಜ್ಞಾನದ ಎಂಟು ಪಠ್ಯಕ್ರಮ ವಲಯಗಳಲ್ಲಿ ಅಂತರಶಿಸ್ತೀಯ ಅಧ್ಯಯನ ನಡೆಸಬಹುದು. ಉದಾಹರಣೆಗೆ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಭೌತವಿಜ್ಞಾನ ಆಯ್ದುಕೊಂಡರೆ, ಉಳಿದ ಮೂರು ವಿಷಯಗಳನ್ನು ಮಾನವೀಯ ಮತ್ತು ಗಣಿತ ವಿಭಾಗದಿಂದ ತೆಗೆದುಕೊಂಡು ಕಡೆಯ ಐಚ್ಛಿಕವನ್ನು ಯಾವುದೇ ಪಠ್ಯಕ್ರಮದಿಂದ ಆಯ್ಕೆ ಮಾಡಿಕೊಳ್ಳಬಹುದು. ಸಮಾಜ ವಿಜ್ಞಾನದ ಪಠ್ಯಕ್ರಮದಲ್ಲಿ ಇತಿಹಾಸ, ಮಾನವೀಯ ವಿಭಾಗದಿಂದ ತತ್ವಜ್ಞಾನ, ಗಣಿತದ ಪಠ್ಯಕ್ರಮದಿಂದ ಕಂಪ್ಯೂಟರ್ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡರೆ ಕಡೆಯ ಐಚ್ಛಿಕವನ್ನು ಯಾವುದೇ ಪಠ್ಯಕ್ರಮದಿಂದ ಆಯ್ದುಕೊಳ್ಳುವ ಸ್ವಾತಂತ್ರ್ಯ ಇರಲಿದೆ.

ಒಟ್ಟಾರೆ ಸಾಧನೆಗೆ ಅಂಕ :

ಪ್ರೌಢಶಿಕ್ಷಣದಲ್ಲಿ (9ರಿಂದ 12ನೇ ತರಗತಿ) ವಿಷಯ ಆಯ್ಕೆ ನೀಡುವಂತಹ ರಾಷ್ಟೀಯ ಪಠ್ಯಕ್ರಮ ಚೌಕಟ್ಟಿನ ಕರಡನ್ನು ಕೇಂದ್ರ ಶಿಕ್ಷಣ ಸಚಿವಾಲಯ ಪ್ರಕಟಿಸಿದೆ. ಇದರಂತೆ 10 ಮತ್ತು 12ನೇ ತರಗತಿಗಳಲ್ಲಿ ವಿದ್ಯಾರ್ಥಿಗಳ ಒಟ್ಟಾರೆ ಸಾಧನೆ ಗಮನಿಸಿ ಅವರ ಅಂತಿಮ ಅಂಕ ನಿಗದಿಯಾಗುತ್ತದೆ. ಆದರೆ, ಈ ಪ್ರೌಢಶಿಕ್ಷಣವು 9 ಮತ್ತು 11ನೇ ತರಗತಿಯನ್ನು ಒಳಗೊಂಡ ನಾಲ್ಕು ವರ್ಷ ಅವಧಿಯ ಬಹುಶಿಸ್ತಿನ ಪಠ್ಯಕ್ರಮದ್ಧಾಗಿರುತ್ತದೆ.  ವಿದ್ಯಾರ್ಥಿಗಳಿಗೆ ವಿಷಯ ಆಯ್ಕೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು NCF ಕಲ್ಪಿಸುತ್ತದೆ. ಇದಕ್ಕೆ ಎಂಟು ಪಠ್ಯಕ್ರಮದ ವಲಯವನ್ನು ಗುರುತಿಸಲಾಗಿದೆ. ಎನ್ ಸಿ ಎಫ್ ಕರಡಿನ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ, ಆಕ್ಷೇಪ ಆಹ್ವಾನಿಸಲಾಗಿದೆ. 
         ಪ್ರಸ್ತಾವಿತ ಪಠ್ಯಕ್ರಮದಲ್ಲಿ ಪ್ರತಿ ಎರಡು ವರ್ಷಕ್ಕೆ ಮಂಡಳಿ ಮಟ್ಟದ ಪರೀಕ್ಷೆಗಳು ನಡೆಯಲಿದ್ದು, ಎರಡು ಪರೀಕ್ಷೆಗಳಲ್ಲಿ ವಿದ್ಯಾರ್ಥಿಯ ಸಾಧನೆಯನ್ನು ಗಮನಿಸಿ ಅಂತಿಮ ಶೈಕ್ಷಣಿಕ ಪ್ರಮಾಣಪತ್ರ ವಿತರಿಸಲಾಗುತ್ತದೆ.


CBSE ಪರೀಕ್ಷೆ ಸರಳ:

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಪರೀಕ್ಷೆಗಳು ಇನ್ನಷ್ಟು ಸರಳಗೊಳ್ಳಲಿದ್ದು, ಪ್ರಶ್ನೆಪತ್ರಿಕೆಯಲ್ಲಿ ವಿವರಣಾತ್ಮಕ ಅಥವಾ ಸಂಕ್ಷಿಪ್ತ ಉತ್ತರ ಅಪೇಕ್ಷಿಸುವ ಪ್ರಶ್ನೆಗಳಿಗಿಂತ ಬಹುಆಯ್ಕೆ ಮಾದರಿಯ ಪ್ರಶ್ನೆಗಳ ಸಂಖ್ಯೆ ಹೆಚ್ಚಿರಲಿವೆ. 2023-24 ರಿಂದ 9 ಮತ್ತು 10ನೇ ತರಗತಿ ಪರೀಕ್ಷೆಯಲ್ಲಿ ಬಹುಆಯ್ಕೆ ಮಾದರಿಯ ಪ್ರಶ್ನೆಗಳು ಶೇ. 50 ರಷ್ಟು ಮತ್ತು 11, 12 ನೇ ತರಗತಿಗೆ ಶೇ.40 ರಷ್ಟು ಇರಲಿವೆ. 9 ರಿಂದ 12 ನೇ ತರಗತಿಗಳ ಉತ್ತರಪತ್ರಿಕೆ ಮೌಲ್ಯಮಾಪನವನ್ನು NEP ಗೆ ಅನುಗುಣವಾಗಿ ನಡೆಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

NEF ನಾಲ್ಕು ಬಾರಿ ಪರಿಷ್ಕರಣೆ : ಇದುವರೆಗೆ NCF ನಾಲ್ಕು ಬಾರಿ ಪರಿಷ್ಕರಣೆ ಆಗಿದೆ. ಮೊದಲ ಬಾರಿಗೆ 1975 ರಲ್ಲಿ ರಚಿತವಾಗಿದ್ದರೆ, ನಂತರ 1988, 2000, 2005 ರಲ್ಲಿ ಪರಿಷ್ಕರಣೆ ಆಗಿತ್ತು. ಇದೀಗ NEP ಅನ್ವಯ ಮರು ವಿನ್ಯಾಸಗೊಳಿಸಲಾಗಿದೆ.


9-10 ನೇ ತರಗತಿಗೆ 2 ಅತ್ಯಗತ್ಯ ಕೋರ್ಸ್ 9 & 10ನೇ ತರಗತಿಗಳ ವಿದ್ಯಾರ್ಥಿಗಳು ಎರಡು ವರ್ಷದಲ್ಲಿ 16 ವಿಷಯಗಳನ್ನು ಕಲಿಯಬೇಕಾಗುತ್ತದೆ. ಈ ವಿಷಯಗಳನ್ನು 2 ಅತ್ಯವಶ್ಯಕ ಕೋರ್ಸ್ ಗಳಲ್ಲಿ  ಹಂಚಲಾಗಿದೆ.ಈ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಯನ್ನು NCF ನೀಡಿಲ್ಲ.
 

ಕಸ್ತೂರಿರಂಗನ್ ಸಮಿತಿ ಶಿಫಾರಸು 

ಇಸ್ರೋದ ನಿವೃತ್ತ ಮುಖ್ಯಸ್ಥ ಕೆ. ಕಸ್ತೂರಿರಂಗನ್ ಅಧ್ಯಕ್ಷತೆಯ ಚಾಲನಾ ಸಮಿತಿ ಎನ್ ಸಿ ಎಫ್ ಕರಡನ್ನು ರಚಿಸಿದೆ. ಇದಕ್ಕೆ ತಕ್ಕಂತೆ ಪಠ್ಯ ಮತ್ತು ಪಾಠಗಳನ್ನು ಹೊಂದಿಸಲಾಗುತ್ತದೆ. ಸದ್ಯ ಚಾಲ್ತಿಯಲ್ಲಿರುವ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಳಲ್ಲಿ ಒಂದೊಂದು ವಿಷಯಗಳಲ್ಲಿ ಒಂದೊಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಇನ್ನೊಂದು ವಿಷಯವನ್ನು ಆಯ್ಕೆಪಟ್ಟಿಯಲ್ಲಿರುವ ಯಾವುದೇ ವಿಷಯದಿಂದ ಆರಿಸಿಕೊಳ್ಳುವ ಮುಕ್ತ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ನಾಲ್ಕು ವರ್ಷಗಳ ಪ್ರೌಢಶಿಕ್ಷಣದಲ್ಲಿ ಅತ್ಯವಶ್ಯಕ ಕೋರ್ಸ್ ಅನ್ನು ಕಡ್ಡಾಯವಾಗಿ ಪೂರೈಸಬೇಕು. ಎರಡನೇ ಹಂತದಲ್ಲಿ (11-12ನೇ ತರಗತಿ) ಹತ್ತು ಹಲವು ಆಯ್ಕೆಗಳಿವೆ. ಇದರಲ್ಲಿ ಲಲಿತ ಕಲೆ, ಕ್ರೀಡಾ ವಿಭಾಗವನ್ನೂ ಪಠ್ಯಕ್ರಮದ ಭಾಗವನ್ನಾಗಿ ಮಾಡಲಾಗಿದೆ. NEP ಆಶಯದಂತೆ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ವಿಷಯ ಆಯ್ಕೆಗೆ ಅವಕಾಶ ಮತ್ತು ವ್ಯಾಸಂಗವನ್ನು ಸರಳಗೊಳಿಸಲಾಗಿದೆ. ಇದರಿಂದ ಪಠ್ಯಕ್ರಮ, ಪಠ್ಯಏತರ ಸಹಪಠ್ಯ, ವೃತ್ತಿಪರ ಅಥವಾ ಶೈಕ್ಷಣಿಕ ಶಿಸ್ತುಗಳು ಎಂಬ ಹೆಚ್ಚಿನ ಪ್ರತ್ಯೇಕತೆ ಇಲ್ಲ ಎಂದು ಸಮಿತಿ ತಿಳಿಸಿದೆ.

2ನೇ ತರಗತಿಯವರೆಗೆ ಲಿಖಿತ ಪರೀಕ್ಷೆ ಬೇಡ :

2ನೇ ವರೆಗೆ ಲಿಖಿತ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡ ಉಂಟಾಗುತ್ತದೆ. ಆದ್ದರಿಂದ ಈ ತರಗತಿಗಳ ವಿದ್ಯಾರ್ಥಿಗಳ ಕಲಿಕೆಯ ಅನುಭವ ಸಹಜವಾಗಿ ವಿಸ್ತರಿಸುವಂತೆ ಇರಬೇಕು. ಇದಕ್ಕೆ ಬೇಕಾದ ಪರಿಕರ  ಮತ್ತು ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಲಬೇಕು ಎಂದು NCF ಕರಡಿನಲ್ಲಿ ಸಲಹೆ ನೀಡಲಾಗಿದೆ. 

     ಲಿಖಿತ ಪರೀಕ್ಷೆಯನ್ನು 3 ನೇ ತರಗತಿಯಿಂದ ನಡೆಸುವುದು ಉತ್ತಮ. 3 ರಿಂದ 5ನೇ ತರಗತಿಯ ಪರೀಕ್ಷೆಗಳು ಪೂರ್ವಸಿದ್ಧತಾ ಹಂತದಂತೆ ಇರಬೇಕು. 6 ರಿಂದ 8 ನೇ ತರಗತಿಯ ಕಲಿಕೆಯು ಪರಿಕಲ್ಪನಾ ತಿಳಿವಳಿಕೆ ಮತ್ತು ಉನ್ನತಶ್ರೇಣಿಯ ಸಾಮರ್ಥ್ಯವನ್ನು ಮನದಷ್ಟು ಮಾಡಿಸುವಂತಿರಬೇಕು ಎಂದು ತಿಳಿಸಿದೆ. ಕಲಿಕೆಯಲ್ಲಿ ಪ್ರಾಜೆಕ್ಟ್, ಚರ್ಚೆ, ವಿಷಯ ಮಂಡನೆ, ಪ್ರಯೋಗ, ಅಭಿನಯ ನಿಯತಕಾಲಿಕೆಗಳ ಬರವಣಿಗೆ, ಪೋರ್ಟ್ ಫೋಲಿಯೋಗಳ ಮಾದರಿಗೆ ಹೆಚ್ಚು ಒಟ್ಟು ನೀಡಬೇಕು. ವಿದ್ಯಾರ್ಥಿಗಳೇ ಆತ್ಮಾವಲೋಕನ ಮಾಡಿಕೊಳ್ಳುವುದರಿಂದ ಕಲಿಕೆಯಲ್ಲಿ ಪ್ರಗತಿ ಸಧ್ಯ ಎಂಬ ಶಿಫಾರಸ್ಸು ಮಾಡಲಾಗಿದೆ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@














ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು