ಎಗ್ ರೈಸ್ ಬಂಡೆಯಲಿ ಪತ್ತೆ !!!! ಅಕ್ರಮ ಮದ್ಯ ಮಾರಾಟ ದಾಳಿ

ಎಗ್ ರೈಸ್ ಬಂಡೆಯಲಿ ಪತ್ತೆ !!!!
ಅಕ್ರಮ ಮದ್ಯ ಮಾರಾಟ ದಾಳಿ 

 

ಕನಕಗಿರಿಯಲ್ಲಿ ಅನಧಿಕೃತ ಎಗ್ ರೈಸ್ ಬಂಡೆಯಲ್ಲಿ ಮಾರಾಟ  ಮಾಡಲಾಗುತ್ತಿದ್ದ ಮದ್ಯ ವಶಪಡಿಸಿಕೊಂಡಿರುವುದು.



ಅಬಕಾರಿ ಇಲಾಖೆಯಿಂದ ಯಾವುದೇ ಅನುಮತಿ ಪಡೆದುಕೊಳ್ಳದೇ ಎಗ್ ರೈಸ್ ಬಂಡೆಯಲ್ಲಿ ಅನಧಿಕೃತವಾಗಿ ಮದ್ಯ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹುಲಿಹೈದರ ಗ್ರಾಮದಲ್ಲಿ ದಾಳಿ ಮಾಡಿದ ಪೊಲೀಸರು, ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ. ಸಮೀಪದ ಹುಲಿಹೈದರ ಗ್ರಾಮದಲ್ಲಿ ಬಸವರಾಜ ಹೊಲಿಯಪ್ಪ ಹುಜೂರ್ ಎಂಬ ವ್ಯಕ್ತಿ, ತನ್ನ ಎಗ್ ರೈಸ್ ಬಂಡಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದೆ. 

    ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಬಂಡಿಯಲ್ಲಿ ಸಂಗ್ರಹಿಸಿಡಲಾಗಿದ್ದ ಒಟ್ಟು ೨,೨೫೦ ಮೌಲ್ಯದ ಮದ್ಯವನ್ನು ನಾಲ್ಕು ಲೀಟರ್ ಗೂ ಅಧಿಕ ಪ್ರಮಾಣದ ಲಿಕ್ಕರತ್ ಜಪ್ತಿ ಮಾಡಿಕೊಂಡಿದ್ದಾರೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು