ಕೆಲವೊಂದು ಸಂದರ್ಭದಲ್ಲಿ ಸೈಟ್ ಖರೀದಿಸುವಾಗ ಮೋಸ ಹೋಗುವ ಸಂಭವ ಜಾಸ್ತಿ ಇರುತ್ತದೆ. ಏಕೆಂದರೇ ಸೈಟು ಮಾರುವವರು ಒಂದೇ ಸೈಟನ್ನು ಮೂರೂ-ನಾಲ್ಕು ಜನರಿಗೆ ಯಾಮಾರಿಸಿ ಮಾರುವಂತಹ ಸಂದರ್ಭಗಳನ್ನು ನಾವು ನೋಡಿರ್ತೇವೆ. ಈ ಮೂಲಕ ನಾವು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯವೆಂದ್ರೆ, ಮೊದಲು ಸೈಟಿನ ಮಾಲೀಕ ಯಾರು ? ನಿಜವಾಗಿಯೂ ಆ ಸೈಟ್ ಅವನ ಹೆಸರಿನಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ತಮ್ಮದೇ ಆದ ಜಾಗವೊಂದನ್ನು ಕೊಂಡು, ಮನೆ ಕಟ್ಟಿಕೊಳ್ಳಬೇಕೆಂಬ ಕನಸು ಯಾರಿಗೆ ತಾನೇ ಇರುವುದಿಲ್ಲ ಹೇಳಿ? ಅದರಲ್ಲಿಯೂ ಮಧ್ಯಮ ವರ್ಗದ ಮಂದಿಯ ಜೀವನದ ಏಕೈಕ ಗುರಿ ಎಂದರೆ ತಮ್ಮದೇ ಸೂರು ಕಟ್ಟಿಕೊಂಡು, ನೆಲೆ ಕಂಡುಕೊಳ್ಳುವುದು. ಆದರೆ, ಸೈಟ್ ಕೊಳ್ಳುವಾಗ ಯಾವ ಅಂಶಗಳೆಡೆಗೆ ಗಮನ ಹರಿಸಬೇಕು ಗೊತ್ತಾ??
ಹೇಗಂದ್ರೆ, ಸೈಟು ಮಾರುವವನು ನೀಡಿದ ದಾಖಲೆಯ ಪತ್ರವನ್ನು ಸಬ್ ರಿಜಿಸ್ಟರ ಆಫೀಸ್ ಗೆ ತೆಗೆದುಕೊಂಡು ಹೋಗಿ ವಿಚಾರಿಸಬೇಕಾಗುತ್ತದೆ. ಆಗ ಸತ್ಯಂಶ ತಿಳಿಯಲಿದೆ. ನಂತರ ನೀವು ಸೈಟ ರಿಜಿಸ್ಟರೇಷನ್ ಮಾಡಿಸಿಕೊಳ್ಳಲು ನಿರ್ಧಾರ ಮಾಡಬೋದು. ಈ ವೇಳೆ, ಮಾಲೀಕನ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋದು ಮುಖ್ಯವಾಗಿರುತ್ತದೆ. ನಾವು ಕೊಂಡುಕೊಳ್ಳುವ ಸೈಟ್ ಮಾಡಲು ಯೋಗ್ಯವಾಗಿದೆಯೇ ಅದಕ್ಕೆ ಕನ್ವರ್ಷನ್ ಸರ್ಟಿಫಿಕೇಟ್ ಇದಿಯಾ? ಆ ಜಾಗವು ನಮ್ಮ ಬಳಕೆಗೆ ಅನುಮತಿ ಪಡೆದಿದೆಯೇ?
ಅದಕ್ಕೆ ನೇಸಸರಿ ಅಪ್ರೋವಲ್ ಇದಿಯಾ? ಹೀಗೆ ಹಲವಾರು ವಿಷಯಗಳು ಸೈಟ್ ಕೊಳ್ಳಲು ಬಹಳ ಮುಖ್ಯವಾದ ವಿಷಯಗಳಾಗಿವೆ. ನಿವೇಶನ ಖರೀದಿ ಎಲ್ಲರಿಗೂ ಇಷ್ಟವೇ. ಆದರೆ, ಖರೀದಿಸುವಾಗ ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಅದು ಇಂತಹ ನಂಬಿಗಸ್ಥ ವ್ಯಕ್ತಿ ಅಥವಾ ಕಂಪನಿಯೇ ಆಗಿರಲಿ. ಅವರಿಂದ ಖರೀದಿ ಮಾಡುವ ಮುನ್ನ ಸೂಕ್ತ ಎಚ್ಚರಿಕೆ ವಹಿಸುವುದು ಸೂಕ್ತ. ಹಾಗಾದರೆ, ಸೈಟ್ ಖರೀದಿ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು? ನೀವೇನು ಮಾಡಬೇಕು ಎಂಬುವಂತಹ ಮಾಹಿತಿಗಳು ಇಲ್ಲಿದೆ.
ಸೈಟ್ ಖರೀದಿಗೂ ಮುನ್ನ ಈ ವಿಷಯಗಳು ಗಮನದಲ್ಲಿರಲಿ:
✔ ಅಕ್ಕ ಪಕ್ಕದಲ್ಲಿ ನಮಗೆ ಆಪ್ತರೆನಿಸುವವರು ಇದ್ದಾರೆಯೇ, ಅಲ್ಲಿನ ವಾತಾವರಣ ಹೇಗಿದೆ ತಿಳಿಯಬೇಕು. ಉದಾ: ಗದ್ದಲ, ಅತಿಯಾದ ಕಾರ್ಯಕ್ರಮ ಆಗುವ ಹಾಲ್ ಇತ್ಯಾದಿ,,,
✔ ನೀರಿನ ತ್ಯಾಜ್ಯ ವಸ್ತುಗಳಿಗೆ ಚರಂಡಿ ವ್ಯವಸ್ಥೆ.
✔ ಆ ಜಾಗದಲ್ಲಿ ಕುಡಿಯಲು ಶುದ್ಧ ನೀರು ಹಾಗೂ ಇತರೆ ಬಳಕೆಗೆ ಬೇಕಾದ ನೀರಿನ ಸೌಲಭ್ಯ, ವಿದ್ಯುತ್ ವ್ಯವಸ್ಥೆ.
✔ ಮೊದಲು ಆ ಜಾಗದಲ್ಲಿ ಏನಿತ್ತು ತಿಳಿದುಕೊಳ್ಳಿ.
ಉದಾ: ಕೃಷಿ, ಕಟ್ಟಡ ಇದ್ದಿರಬಹುದು, ದೇಣಿಗೆ ನೀಡಿದ್ದಿರಬಹುದು.
✔ ಆ ಜಾಗದಲ್ಲಿ ಇದ್ದ ಜನರೊಂದಿಗೆ ಇತರರ ಸಂಬಂಧ (ಮುಂದೆ ನಮಗೆ ತೊಂದರೆ ಕೊಡಬಾರದು ಅಲ್ಲವೇ)
✔ ಜಾಗ ಆ ಜಾಗದಲ್ಲಿ ಮಾಡಲು ಸಾಧ್ಯವಿದೆಯೇ?
ಎಲ್ಲಾ ದಾಖಲೆಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
⚛ ಹಳೆಯ ಜನರಿಂದ ದಾಖಲೆಗಳು ಮುಕ್ತವಾಗಿದೆಯೇ? ಅಥವಾ ಈ ಜಾಗದಲ್ಲಿ ಇನ್ನಾರಿಗಾದರೂ ಹಣ ಪಾವತಿಸಲು ಬಾಕಿ ಉಳಿದಿದೆಯೇ ತಿಳಿಯಿರಿ.
⚛ ಎಷ್ಟು ಮಹಡಿಯ ಕಟ್ಟಡ ಕಟ್ಟಲು ಅವಕಾಶ ಇದೆ ಎಂಬ ದಾಖಲೆಯನ್ನು ನೆನಪಿನಲ್ಲಿ ಪರಿಶೀಲಿಸಿ.
ವಾಹನ ನಿಲುಗಡೆಗೆ ಜಾಗ :
ㅡ ಸಮಾರಂಭ ಮಾಡುವಾಗ ಜಾಗ ಸಾಕಾಗಬಹುದೇ?
ㅡ ಕಚೇರಿಗೆ ಎಷ್ಟು ದೂರ ಇದೆ?
ㅡ ನಮ್ಮ ಜಾಗದಿಂದ ಇತರೆ ಕಡೆಗೆ ಹೋಗಲು ವಾಹನ ಸೌಲಭ್ಯ ಸುಲಭವಾಗಿ ದೊರಕುವುದೇ?
ㅡ ನಮ್ಮ ಸ್ವಂತ ವಾಹನವಾದರೆ ಇಂಧನಕ್ಕೆ ನಮ್ಮ ಕೆಲಸಕಾರ್ಯಗಳಿಗೆ ಹೋಗಲು ಅಲ್ಲಿಂದ ಎಷ್ಟು ಖರ್ಚಾಗಬಹುದು?
ㅡ ನಮಗೆ ಅಗತ್ಯದ ಸಾಮಾನುಗಳು ಬೇಕಾದಲ್ಲಿ ಕೂಡಲೇ ಸಿಗಬಹುದೇ?
ㅡ ಅರೋಗ್ಯ ಸಂಬಂಧವಾಗಿ ತುರ್ತು ಚಿಕಿತ್ಸೆ ಕಡಿಮೆ ಸಮಯದಲ್ಲಿ ದೊರೆಯಬಹುದೇ?
ಇತರೆ ಸಂಗತಿಗಳು:
1. ಇತರೆ ಜಾಗಗಳಿಂದ ಕಡಿಮೆ ಹಣದಲ್ಲಿ ಸರಿಯಾದ ದಾಖಲೆಯೊಂದಿಗೆ ಈ ಜಾಗ ಸಿಗುತ್ತದೆಯೇ ಪರಿಶೀಲಿಸಿ.
2. ಮುಂದೆ ಈ ಜಾಗದಲ್ಲಿ ಏನಾದರೂ ಕೆಲಸ, ಕಟ್ಟಡ ನಡೆಯುವ ಜಾಗವಾಗಿದ್ದು, ನಾವು ಅದನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬರಬಹುದೇ? ರೋಡಿನಿಂದ ಎಷ್ಟು ದೂರದಲ್ಲಿ ನಾವು ಖರೀದಿಸುವ ಸ್ಥಳ ಇದೆ. ಎಂಬ ಇತ್ಯಾದಿ ವಿಷಯಗಳು ಗಮನದಲ್ಲಿರಲಿ.
3. ಮುಂದೆ ಈ ಜಾಗವನ್ನು ನಾವು ವಿಕ್ರಯಿಸುವಾಗ ಈಗ ನೀಡಿದ ಹಣಕ್ಕಿಂತ ಹೆಚ್ಚಿನ ಮೊತ್ತ ದೊರಕುವಂತಿದೆಯೇ ಆಲೋಚಿಸಿ.
4. ಕಡಿಮೆ ಹಣದಲ್ಲಿ 20 ಸೈಟ್ ನಷ್ಟು ಜಾಗ ದೊರೆಯುವುದು, 10 ಸೈಟ ನಷ್ಟು ಬೇಡವಾಗಿದ್ದಲ್ಲಿ ವಿಕ್ರಯಿಸುವಂತಿದೆಯೇ? ಅಂದರೆ ಉಳಿದ 10 ಸೈಟ್ ಗೆ ದಾರಿ, ಕಟ್ಟಡ ಕಟ್ಟುವಂತಹ ಜಾಗವೇ ಎಂದು ಪರಿಶೀಲಿಸಿ.
5. ದಾಖಲೆ ಇರುವ ಜಗದೊಂದಿಗೆ ದಾಖಲೆಯಿಲ್ಲದ ಜಾಗವಿರಬಹುದು. ಅದನ್ನು ಗಮನಿಸಿ. ಕಾನೂನುಬದ್ಧವಾಗಿರಲಿ ಜಾಗದ ಸಂಪೂರ್ಣ ಹಕ್ಕು ವಿಕ್ರಯ ಮಾಡಬಹುದೇ?
ಜಾಗ ಅಥವಾ ಸೊತ್ತು ವಿಕ್ರಯ ಮಾಡುವವರ ಸ್ವಾಧೀನದಲ್ಲೇ ಇದೆಯೇ?
6. ಆ ಜಾಗಕ್ಕೆ ಸಂಬಂಧಪಟ್ಟಂತೆ ಮೈನರ್ ಹಕ್ಕಿರುವಂತಹ ಮಕ್ಕಳು ಇದ್ದಾರೆಯೇ ತಿಳಿಯಿರಿ.
ಜಾಗಕ್ಕೆ ಸಂಬಂಧಪಟ್ಟ ಸಾಲ ಇದೆಯೇ?
ಅಂದರೆ, ಜಾಗವನ್ನು ಅಡವಿಟ್ಟು ಸಾಲ ಪಡೆದಿದ್ದಾರೆಯೇ, ಎಂಬುದನ್ನು ಪರಿಶೀಲಿಸಿ. ಇವೆಲ್ಲವೂ ನೀವು ಸೈಟ್ ಕೊಳ್ಳುವಾಗ ನಿಮ್ಮ ಗಮನದಲ್ಲಿರಬೇಕಾದ ಪ್ರಮುಖ ಮಾಹಿತಿಗಳಾಗಿವೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Social