SSLC ವಿದ್ಯಾರ್ಥಿಗಳಿಗೆ ಈ 3 ವಿಷಯದಲ್ಲಿ 26 ಅಂಕ ಉಚಿತ, ಗುಡ್ ನ್ಯೂಸ್ ಕೊಟ್ಟ ಶಿಕ್ಷಣ ಇಲಾಖೆ.
ಮುಂದಿನ 5 ದಿನಗಳಲ್ಲಿ 10 ಅಂಕಿಗಳ ಮೊಬೈಲ್ ಸಂಖ್ಯೆಗಳನ್ನು ಮುಚ್ಚಬಹುದು.
SSLC ವಿದ್ಯಾರ್ಥಿಗಳಿಗೆ 26 ಅಂಕಗಳನ್ನು ಉಚಿತವಾಗಿ ನೀಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.
2022-23 ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ (SSLC Annual Exam)ಮಾರ್ಚ್ 31 ರಿಂದ ಆರಂಭಗೊಂಡಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಇನ್ನು ಈಗಾಗಲೇ SSLC ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ಮುಗಿದಿದೆ. ಇದೀಗ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದೆ.
SSLC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಶಿಕ್ಷಣ ಇಲಾಖೆ.
ಈಗಾಗಲೇ SSLC ಪರೀಕ್ಷೆ ಆರಂಭಗೊಂಡಿದ್ದು, ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಪರೀಕ್ಷೆಯ ಕೊಠಡಿಗಳಲ್ಲಿ ಸಾಕಷ್ಟು ಭದ್ರತೆಗಳನ್ನು ಇರಿಸಲಾಗಿದೆ. ಹಾಗೆಯೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಕೂಡ ಶಿಕ್ಷಣ ಇಲಾಖೆ ನೀಡಿದೆ. ಇನ್ನು SSLC ವಿದ್ಯಾರ್ಥಿಗಳಿಗೆ ಇದೀಗ ಶಿಕ್ಷಣ ಇಲಾಖೆ ಮತ್ತೊಂದು ಗುಡ್ ನ್ಯೂಸ್ ನೀಡಲು ಮುಂದಾಗಿದೆ.
SSLC ವಿದ್ಯಾರ್ಥಿಗಳಿಗೆ ಈ ಬಾರಿಯೂ ಸಿಗಲಿದೆ 26 ಗ್ರೇಸ್ ಮಾರ್ಕ್ಸ್
2022-23 ನೇ ಸಾಲಿನ SSLC ವಿದ್ಯಾರ್ಥಿಗಳನ್ನು ಈ ಬಾರಿಯೂ ಕರೋನ ಬ್ಯಾಚ್ ಎಂದು ಪರಿಗಣಿಸಿ 26 ಅಂಕಗಳನ್ನು ನೀಡಲಿದೆ. ಈ ಕುರಿತು ಮಾಹಿತಿ ನೀಡಿರುವ SSLC ಬೋರ್ಡ್ ನಿರ್ದೇಶಕರು ಶೇ. ೧೦ ರಷ್ಟು ಗ್ರೇಸ್ ಅಂಕ ನೀಡಲಾಗುವುದು. ಮೂರು ವಿಷಯಗಳಿಗೆ ಮಾತ್ರ ಗ್ರೇಸ್ ಅಂಕ ನೀಡಲಾಗುತ್ತದೆ. ತೇರ್ಗಡೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.
SSLC ೬ ವಿಷಯಗಳಲ್ಲಿ 3 ವಿಷಯಗಳು ಉತ್ತೀರ್ಣರಾಗಿದ್ದರೆ, ಉಳಿದ 3 ವಿಷಯಗಳಿಗೆ ಶೇ. 10 ರಷ್ಟು ನೀಡಲಾಗುವುದು. ಆದರೆ ಒಟ್ಟು 26 ಅಂಕ ಮೀರದಂತೆ ಕೃಪಾಂಕ ದೊರೆಯಲಿದೆ. ಪ್ರಥಮ ಭಾಷೆಯಲ್ಲಿ ಗರಿಷ್ಠ 10 ಅಂಕ ಮತ್ತು ಉಳಿದ ವಿಷಯಗಳಲ್ಲಿ ಗರಿಷ್ಠ 8 ಅಂಕವನ್ನು ಕೃಪಾಂಕದ ರೂಪದಲ್ಲಿ ಪಡೆಯಬಹುದಾಗಿದೆ.
ಈ ಹಿಂದೆ ಕರೋನ ಇದ್ದ ಕಾರಣ SSLC ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ಪಡೆಯುವ ಮೂಲಕ ಅನುಕೂಲ ಪಡೆದುಕೊಂಡಿದ್ದರು. ಕರೋನ ಸಮಯದಲ್ಲಿ SSLC ಪರೀಕ್ಷೆ ಕೂಡ ಅಷ್ಟೊಂದು ಕಷ್ಟಕರವಾಗಿರಲಿಲ್ಲ. ಇದೀಗ ಶಿಕ್ಷಣ ಇಲಾಖೆ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲು ಮುಂದಾಗಿದೆ. ಎಷ್ಟು ಗ್ರೇಸ್ ಮಾರ್ಕ್ಸ್ SSLC ವಿದ್ಯಾರ್ಥಿಗಳಿಗೆ ಸಿಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
Tags
Education