ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೊರಡಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಯತ್ನಸುತ್ತಿದೆ. ಮೊದಲನೆಯದಾಗಿ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣ ಹಾಗೂ ಪ್ರತಿಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಸಂಕಲ್ಪವನ್ನು ಜಾರಿಗೊಳಿಸಲು ಮುಂದಾಗಿದೆ.
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವನ್ನು ನೆಲಕ್ಕುರುಳಿಸಲು ಕಾಂಗ್ರೆಸ್ ಪಕ್ಷದ ಐದು ಭರವಸೆಗಳು ಸಹಾಯಕವಾಗಿವೆ ಎಂದು ಹೇಳಬಹುದು. ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಬಹುತೇಕ ಖಚಿತಪಡಿಸಿದೆ. ಸರ್ಕಾರ 200 ಯೂನಿಟ್ ವಿದ್ಯುತ್ ಉಚಿತ ಎಂದು ಗ್ಯಾರಂಟಿ ಘೋಷಣೆ ಮಾಡಿದರೂ ಕೂಡ ಯಾರಿಗೆಲ್ಲ ಈ ಸೌಲಭ್ಯ ಲಭ್ಯವಿದೆ ಎನ್ನುವ ಚರ್ಚೆ ನಡೆದಿದೆ ಇದಕ್ಕೆ ಇರುವ ಅರ್ಹತೆಗಳು ಹಾಗೂ ನಿಯಮಗಳ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬೀಳದೆ ಇದ್ದರೂ ಕೂಡ ಈ ನಿಯಮಗಳು ಅಪ್ಲೈ ಆಗಲಿವೆ ಎಂದು ಮಾಹಿತಿ ಲಭ್ಯವಾಗಿದೆ.
ಉಚಿತ ವಿದ್ಯುತ್ ಪಡೆಯಲು ಈ ಅರ್ಹತೆಗಳು ಬೇಕು :
200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಮುಖ್ಯವಾಗಿ ನೀವು ಕರ್ನಾಟಕದವರೇ ಆಗಿರಬೇಕು.
ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬಿಪಿಎಲ್ ರೇಷನ್ ಕಾರ್ಡ್, ಮೊದಲಾದ ದಾಖಲೆಗಳು ಹೊಂದಿರುವುದು ಕಡ್ಡಾಯ.
ತೆರಿಗೆ ಪಾವತಿಸುವವರ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದಿಲ್ಲ. ತೆರಿಗೆ ಪಾವತಿಸುವವರು ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಬೇಕು.
ಇನ್ನೂ ಅನಗತ್ಯ ವಿದ್ಯುತ್ ಖರ್ಚು ಮಾಡಬಾರದು ಎನ್ನುವ ಕಾರಣಕ್ಕೆ ಯಾವ ಮನೆಯಲ್ಲಿ ಯೂನಿಟ್ 200 ಗಿಂತ ಕಡಿಮೆ ವಿದ್ಯುತ್ ಅನ್ನು ಸರ್ಕಾರ ನೀಡಲಿದೆ. ಅಂದರೆ 200 ಯೂನಿಟ್ ಗು ಮೀರಿ ವಿದ್ಯುತ್ ಬಿಲ್ ಭರಿಸಬೇಕು.
ಈ ಎಲ್ಲಾ ಅರ್ಹತೆಗಳ ಆಧಾರದ ಮೇಲೆ ರಾಜ್ಯದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಅನ್ನು ಪಡೆಯಬಹುದು ಸರ್ಕಾರ ಈ ಬಗ್ಗೆ ಸದ್ಯದಲ್ಲಿಯೇ ಅಧಿಕೃತ ನೋಟಿಸ್ ಹೊರಡಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Govt.scheme