ಆನ್ಲೈನ್ ವಿದ್ಯುತ್ ಬಿಲ್ ಪಾವತಿ ಸ್ಥಗಿತ ಹೆಸ್ಕಾಂ - ಬ್ಯಾಂಕ್ ಜೊತೆಗಿನ ಒಪ್ಪಂದ ಅಂತ್ಯ : ಗ್ರಾಹಕರ ಪರದಾಟ ...........

ಆನ್ಲೈನ್ ವಿದ್ಯುತ್ ಬಿಲ್ ಪಾವತಿ ಸ್ಥಗಿತ ಹೆಸ್ಕಾಂ - ಬ್ಯಾಂಕ್ ಜೊತೆಗಿನ ಒಪ್ಪಂದ ಅಂತ್ಯ : ಗ್ರಾಹಕರ ಪರದಾಟ ...........!







ಹೆಸ್ಕಾಂ ವಿದ್ಯುತ್ ಬಿಲ್ ಅನ್ನು ಆನ್ಲೈನ್ ಪೇಮೆಂಟ್ ಆಪ್ ಗಳಿಂದ ಪಾವತಿಸುವ ವ್ಯವಸ್ಥೆ ಕೆಲ ದಿನಗಳಿಂದ ಸ್ಥಗಿತಗೊಂಡಿದೆ. ಸುಲಭವಾಗಿ ಬಿಲ್ ಪಾವತಿ ಮಾಡುವ ವರ್ಗವು ಬಂದ್ ಆಗಿರುವುದರಿಂದ ಗ್ರಾಹಕರು ಪರದಾಡುವಂತಾಗಿದೆ.




ಪೇಮೆಂಟ್, ಫೋನ್ ಪೆ, ಗೂಗಲ್ ಪೇ, ಸೇರಿದಂತೆ ವಿವಿಧ ಆನ್ಲೈನ್ ಪೇಮೆಂಟ್ ಆಪ್ ಗಳಿಂದ ಗ್ರಾಹಕರು ತಾವಿದ್ದ ಸ್ಥಳದಿಂದ ಕ್ಷಣಾರ್ಧದಲ್ಲಿ ವಿದ್ಯುತ್ ಬಿಲ್ ಪಾವತಿಸುತ್ತಿದ್ದರು. ಮೇ ತಿಂಗಳ ಆರಂಭದಿಂದ ಈ ಆಪ್ ಗಳಲ್ಲಿ ಬಿಲ್ ಪಾವತಿ ವ್ಯವಸ್ಥೆ ಸಾಧ್ಯವಾಗುತ್ತಿಲ್ಲ.

ವಿದ್ಯುತ್ ಬಿಲ್ ಪಾವತಿಸುವುದಕ್ಕಾಗಿ ಹುಬ್ಬಳ್ಳಿ-ಧಾರವಾಡ ಒನ್ ಸೆಂಟರ್ ಅಥವಾ ಹೆಸ್ಕಾಂ ಕಚೇರಿಗೆ ಹೋಗಿ ಸರದಿಯಲ್ಲಿ ನಿಂತು ಪಾವತಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಆನ್ಲೈನ್ ಪೇಮೆಂಟ್ ವ್ಯವಸ್ಥೆಯಿಂದ ಸಮಯ ವ್ಯರ್ಥ ತಪ್ಪಲಿದೆ. ಹೆಸ್ಕಾಂ ನವರು ಕೂಡಲೇ ಆನ್ಲೈನ್ ಪೇಮೆಂಟ್ ಶುರು ಮಾಡಬೇಕು. ಎಂದು ವಿದ್ಯುತ್ ಗ್ರಾಹಕ ಕೊಟ್ರೇಶ ಉಪ್ಪಾರ ಒತ್ತಾಯಿಸಿದರು.

ಒಪ್ಪಂದ ಅಂತ್ಯ "

ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಬ್ಯಾಂಕ್ ಆಫ್ ಬರೋಡಾ ಜೊತೆಗೆ ಹೆಸ್ಕಾಂ ನಿಗದಿತ ಅವಧಿಗೆ ಒಪ್ಪಂದ ಮಾಡಿಕೊಂಡು ಆನ್ಲೈನ್ ಬಿಲ್ ಪಾವತಿಗೆ ಅವಕಾಶ ಕಲ್ಪಿಸಿತ್ತು. ಆದರೆ, ಒಪ್ಪಂದದ ಅವಧಿ ಅಂತ್ಯಗೊಂಡಿದೆ' ಎಂದು ಹೆಸ್ಕಾಂ ಮಾಹಿತಿ ತಂತ್ರಜ್ಞಾನ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ ಬೆಳಗಲಿ 'ಪ್ರಜಾವಾಣಿಗೆ ತಿಳಿಸಿದರು.

ಬ್ಯಾಂಕ್ ತನ್ನ ಒಪ್ಪಂದವನ್ನು ವಿಸ್ತರಿಸಲು ಆಸಕ್ತಿ ತೋರಲಿಲ್ಲ.  ಹಾಗಾಗಿ,ಪೇಮೆಂಟ್ ಸೇವೆ ಒದಗಿಸಲು ಬೇರೆ ಬ್ಯಾಂಕ್ ಗಳಿಂದ ಟೆಂಡರ್ ಕರೆಯಲಾಗಿದೆ. RBI ನ ಎನ್ ಪಿ ಸಿ ಐ ನಲ್ಲಿ ನೋಂದಣಿ ಮಾಡಿಕೊಂಡಿರುವ ಬ್ಯಾಂಕು ಗಳು ಮಾತ್ರ ಟೆಂಡರ್ ನಲ್ಲಿ ಭಾಗವಹಿಸಬಹುದಾಗಿದೆ. ಸದ್ಯ ಒಂದು ಬ್ಯಾಂಕ್ ಆಸಕ್ತಿ ತೋರಿದೆ' ಎಂದು ತಿಳಿಸಿದರು.



ಶೇ 20 ರಷ್ಟು ಮಾತ್ರ :

ಬ್ಯಾಂಕ್ ಗ್ಯಾರಂಟಿ, ಸಾಫ್ಟ್ವೇರ್ ಇಂಟಿಗ್ರೇಶನ್ ಸೇರಿದಂತೆ ಒಪ್ಪಂದದ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲ ದಿನಗಳು ಬೇಕಾಗುತ್ತದೆ. ಅಲ್ಲಿಯವೆರೆಗೆ ಗ್ರಾಹಕರು ಹೆಸ್ಕಾಂ ವೆಬ್ ಸೈಟ ನಲ್ಲಿ ತಮ್ಮ ಬಿಲ್ ಪಾವತಿ ಮಾಡಬಹುದಾಗಿದೆ' ಎಂದು ಮಾಹಿತಿ ನೀಡಿದರು.

ಆನ್ಲೈನ್ ಪೇಮೆಂಟ್ ಆಪ್ ಗಳಿಂದ ಶೇ 20 ರಷ್ಟು ಗ್ರಾಹಕರು ಮಾತ್ರ ಬಿಲ್ ಪಾವತಿ ಮಾಡುತ್ತಿದ್ದಾರೆ. ಉಳಿದಂತೆ, ನೇರವಾಗಿ ಪಾವತಿಸುವವರೇ ಹೆಚ್ಚು, 
 ಆದರೂ ಸುಲಭ ಬಿಲ್ ಪಾವತಿ ವ್ಯವಸ್ಥೆಯನ್ನು ಮತ್ತೆ ಆರಂಭಿಸುವ ನಿಟ್ಟಿನಲ್ಲಿ ಹೆಸ್ಕಾಂ ಕಾರ್ಯಪ್ರವೃತ್ತವಾಗಿದೆ. ಎಂದು ಹೇಳಿದರು.

ಮೇ ತಿಂಗಳಿಂದ ಆನ್ಲೈನ್ ಪಾವತಿ ಸ್ಥಗಿತ  ಒಪ್ಪಂದ ವಿಸ್ತರಣೆಗೆ ಆಸಕ್ತಿ ತೋರದ ಬ್ಯಾಂಕ್ ಬೇಗನೆ ಸೇವೆ ಆರಂಭಿಸಲು ಗ್ರಾಹಕರ ಒತ್ತಾಯ 

ಆನ್ಲೈನ್ ಪೇಮೆಂಟ್ ಆಪ್ ಗಳಿಂದ ಹೆಸ್ಕಾಂ ವಿದ್ಯುತ್ ಬಿಲ್ ಪಾವತಿ ವ್ಯವಸ್ಥೆ ಪುನಾರಂಭಿಸುವ ಕುರಿತು ಬ್ಯಾಂಕ್ ವೊಂದರ ಜೊತೆ ಒಪ್ಪಂದದ ಪ್ರಕ್ರಿಯೆ ನಡೆಯುತ್ತಿದೆ-ಜಗದೀಶ ಬೆಳಗಲಿ ಕಾರ್ಯನಿರ್ವಾಹಕ ಎಂಜಿನಿಯರ್ ಮಾಹಿತಿ ತಂತ್ರಜ್ಞಾನ ವಿಭಾಗ ಹೆಸ್ಕಾಂ 

ಪರ್ಯಾಯ ವ್ಯವಸ್ಥೆಯು ಇದೆ ವಿದ್ಯುತ್ ಬಿಲ್ ಪಾವತಿಗೆ ಆನ್ಲೈನ್ ಪೇಮೆಂಟ್ ಆಪ್ ಗಳಿಂದ ಮಾತ್ರವಲ್ಲದೆ ಇತರ ಪರ್ಯಾಯ ವ್ಯವಸ್ಥೆಯು ಇದೆ. ಹೆಸ್ಕಾಂ ವಿಬ್ ಸೈಟ್ ಕ್ಲಿಕ್ ಮಾಡಿದರೆ ಅಲ್ಲಿ ನಗರ ಮತ್ತು ಗ್ರಾಮಾಂತರ ಭಾಗದ ಗ್ರಾಹಕರು ತಮ್ಮ ಬಿಲ್ ಪಾವತಿಸಲು ಪ್ರತ್ಯೇಕ ಲಿಂಕ್ ಗಳನ್ನು ನೀಡಲಾಗಿದೆ. ಹುಬ್ಬಳ್ಳಿ-ಧಾರವಾಡ ಒನ್ ಸೆಂಟರ್ ಗಳು ಹಾಗೂ ಹೆಸ್ಕಾಂ ಕಚೇರಿಗಳಲ್ಲಿ ತೆರೆದಿರುವ ಬಿಲ್ ಪಾವತಿ ಕೌಂಟರ್ ನಲ್ಲಿ ಖುದ್ದಾಗಿ ಪಾವತಿ ಮಾಡಬಹುದಾಗಿದೆ. ಹೆಸ್ಕಾಂ ನ ಎಟಿಪಿಗಳಲ್ಲೂ ದಿನದ 24 ತಾಸು ಬಿಲ್ ಪಾವತಿಸಬಹುದಾಗಿದೆ. ಹೆಸ್ಕಾಂ ನ ಶೇ 80 ರಷ್ಟು ಬಿಲ್ ಗಳು ಹುಬ್ಬಳ್ಳಿ-ಧಾರವಾಡ ಒನ್ ಸೆಂಟರ್ ಮತ್ತು ಹೆಸ್ಕಾಂ ಕಚೇರಿಗಳಿಂದಲೇ ಪಾವತಿಯಾಗುತ್ತವೆ. ಶೇ 20 ರಷ್ಟು ಮಾತ್ರ ಆನ್ಲೈನ್ ಪೇಮೆಂಟ್ ಆಪ್ ಗಳಿಂದ ಆಗುತ್ತಿದೆ' ಎಂದು ಜಗದೀಶ ಬೆಳಗಲಿ ತಿಳಿಸಿದರು.




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು