ಜುಲೈನಲ್ಲಿ ಇಸ್ರೋದಿಂದ ಚಂದ್ರಯಾನ - 3 ಉಡಾವಣೆ ?
ದೇಶದ ಮಹತ್ವಾಕಾಂಕ್ಷೆಯ ' ಚಂದ್ರಯಾನ - 3' ಯೋಜನೆ ಅಂತಿಮ ಹಂತದಲ್ಲಿದ್ದು, ಉಡಾವಣೆಗೆ ಭರದಿಂದ ತಯಾರಿ ನಡೆದಿದೆ. ಚಂದ್ರನ ಅಂಗಳದಲ್ಲಿ ಚಂದ್ರಯಾನ - 3 ನೌಕೆಯನ್ನು ಇಳಿಸಿ ಅದರ ಮೇಲ್ಮೈ ಹವಾಗುಣವನ್ನು ವಿವರವಾಗಿ ಅಧ್ಯಯನ ನಡೆಸುವ ಯೋಜನೆ ಇದಾಗಿದೆ. ಯು.ಆರ್.ರಾವ್. ಉಪಗ್ರಹ ಕೇಂದ್ರದಲ್ಲಿ ಅಂತಿಮ ತಯಾರಿ ಸಿದ್ಧತೆಗಲ್ಲು ನಡೆದಿದೆ.
ನಿರುದ್ಯೋಗ ಪ್ರಮಾಣ ಪತ್ರ ಪಡೆಯುವುದು ಹೇಗೆ ? ಸಂಪೂರ್ಣ ಮಾಹಿತಿ ನೋಡಿ ...
ಎಲ್ಲವು ಅಂದುಕೊಂಡಂತೆ ನಡೆದರೆ ಜುಲೈ ಮೊದಲನೇ ವಾರ ಇಲ್ಲವೇ ಎರಡನೇ ವಾರದಲ್ಲಿ ಉಡಾವಣೆ ನಡೆಯಲಿದೆ ಎಂದು ಇಸ್ರೋದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಅಧಿಕೃತ ದಿನಾಂಕವನ್ನು ಇಸ್ರೋ ಇನ್ನೂ ಬಿಡುಗಡೆ ಮಾಡಿಲ್ಲ. ಚಂದ್ರಯಾನ -3 ನೌಕೆಯು ಲ್ಯಾನ್ಡಿಂಗ್ ಸೈಟ್ ನ ಸುತ್ತಮುತ್ತಲಿನ ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಲು ಅಗತ್ಯವಿರುವ ವೈಜ್ಞಾನಿಕ ಉಪಕರಣಗಳನ್ನು ತೆಗೆದುಕೊಂಡು ಹೋಗಲಿದೆ.
ಮಂಗಳಯಾನದ ಒಂದು ವಿಡಿಯೋ
👇👇👇👇👇
ಈ ವರ್ಷದ ಮಾರ್ಚ್ ನಲ್ಲಿ ಇಸ್ರೋ, ಚಂದ್ರಯಾನ -3 ಉಡಾವಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಉಡಾವಣಾ ವಾಹನ ಜಿ ಎಸ್ ಎಲ್ ವಿ ಮಾರ್ಕ್ - 3 ನ ಎಂಜಿನ್ ಕ್ಷಮತೆಯ ಕುರಿತ ಹಲವು ಪರೀಕ್ಷೆಗಳೂ ಈಗಾಗಲೇ ಯಶಸ್ವಿಯಾಗಿ ನಡೆದಿವೆ ಎಂದು ಇಸ್ರೋ ಹೇಳಿದೆ.
ಇದು ಚಂದ್ರಯಾನ - 1 ಮತ್ತು ಚಂದ್ರಯಾನ - 2 ಮುಂದುವರಿದ ಭಾಗವಾಗಿದೆ. ಚಂದ್ರಯಾನ-3 ಯೋಜನೆಯು ಆರ್ಬಿಟರ್, ಲ್ಯಾನ್ದರ್ ಮತ್ತು ರೋವರ್ ಅನ್ನು ಹೊಂದಿರಲಿದೆ. ಭಾರತದ ಅತ್ಯಂತ ಶಕ್ತಿಶಾಲಿ ಉಡಾವಣಾ ವಾಹನ ಜಿಎಸ್ ಎಲ್ ವಿ ಮಾರ್ಕ್-3 ರಾಕೆಟ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗಲ್ಲೂಲಿದೆ.