ನಿರುದ್ಯೋಗ ಪ್ರಮಾಣ ಪತ್ರ ಪಡೆಯುವುದು ಹೇಗೆ ? ಸಂಪೂರ್ಣ ಮಾಹಿತಿ ನೋಡಿ ...

ನಿರುದ್ಯೋಗ ಪ್ರಮಾಣ ಪತ್ರ ಪಡೆಯುವುದು ಹೇಗೆ ? ಸಂಪೂರ್ಣ ಮಾಹಿತಿ ನೋಡಿ ...






               

                ಇಂದಿನ ಲೇಖನದಲ್ಲಿ ತಿಳಿಸುವುದೇನೆಂದರೆ ಕರ್ನಾಟಕ ಸರ್ಕಾರವು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳನ್ನು ಕಾರ್ಡ್ ಮುಖಾಂತರ ಯೋಜನೆಗಳನ್ನು ಕೊಡುತ್ತೇವೆ ಎಂದು ಹೇಳಿತ್ತು. ಅದರ ಪ್ರಕಾರ ಕರ್ನಾಟಕ ಸರ್ಕಾರವು ನಿರುದ್ಯೋಗ ಭತ್ಯೆಯನ್ನು ಪಡೆಯುವುದಕ್ಕೋಸ್ಕರ ಯುವನಿಧಿ ಯೋಜನೆಯನ್ನು ಹೊರಡಿಸಲಾಗಿದೆ. ಕಾರಣ ಈ ನಿರುದ್ಯೋಗ ಭತ್ಯೆಯನ್ನು ಪಡೆಯಬೇಕಾದರೆ ನಿರುದ್ಯೋಗ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಬಹುದು. ಆದ ಕಾರಣ ನಿರುದ್ಯೋಗ ಪ್ರಮಾಣಪತ್ರ ಪಡೆಯುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.

ನಿರುದ್ಯೋಗ ಪ್ರಮಾಣಪತ್ರವನ್ನು ಪಡೆಯಬೇಕಾದರೆ ಮೊದಲಿಗೆ ಆನ್ಲೈನ್ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದನ್ನು ಹೇಗೆ ಪಡೆಯಬೇಕು ಎಂಬುದನ್ನು ಈ ಲೇಖನದ ಮುಖಾಂತರ ತಿಳಿಸಿಕೊಡಲಾಗುವುದು.

ಮೊದಲಿಗೆ ನಿರುದ್ಯೋಗ ಪ್ರಮಾಣಪತ್ರ ಪಡೆಯಬೇಕಾದರೆ ಗೂಗಲ್ ನಲ್ಲಿ ವೆಬ್ ಸೈಟ್ ಲಿಂಕ್ https://nadakacheri.karnataka.gov.in/Online_service/loginpage.aspx ನ್ನು ಕ್ಲಿಕ್ ಮಾಡಿ ನಿರುದ್ಯೋಗ ಪ್ರಮಾಣಪತ್ರಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.




ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :

👉ಅಡ್ರೆಸ್ ಪ್ರೊಫ್ (ಆಧಾರ್ ಕಾರ್ಡ್)

👉ರೇಷನ್ ಕಾರ್ಡ್ 

👉ಓಟರ್ ಕಾರ್ಡ್ 

👉ಪ್ಯಾನ್ ಕಾರ್ಡ್ 



ಅರ್ಜಿ ಸಲ್ಲಿಸುವ ವಿಧಾನ :



ಒಂದನೇ ಹಂತ :



ಇಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮುಖಾಂತರ ಒಟಿಪಿ ಹಾಕಿ ಲಾಗ್ ಇನ್ ಮಾಡಿಕೊಳ್ಳಿ.




ಎರಡನೇ ಹಂತ :




ಲಾಗ್ ಇನ್ ಮಾಡಿಕೊಂಡ ನಂತರ ನಿಮ್ಮ ಮುಂದೆ ಮುಖಪುಟ ತೆರೆಯುತ್ತದೆ.



ಮೂರನೇ ಹಂತ:



ಈ ಹಂತದಲ್ಲಿ ನಿಮ್ಮ ಮುಂದೆ ಕಾಣುವ NEW REQUREST ಆಪ್ಷನ್ ನಲ್ಲಿ Unemployment Certificate ಮೇಲೆ ಕ್ಲಿಕ್ ಮಾಡಬೇಕು.






ನಾಲ್ಕನೇ ಹಂತ :


ನಾಲ್ಕನೇ ಹಂತದಲ್ಲಿ ನಿಮಗೆ ಅರ್ಜಿ ನಮುನೆ ತೆರೆಯುತ್ತದೆ. ಇಲ್ಲಿ ಕೇಳಲಾದ ನಿಮ್ಮ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಬೇಕಾಗುತ್ತದೆ. 



ಹಂತ ಐದು :


ಹಂತ ಐದರಲ್ಲಿ ನಿಮ್ಮೆಲ್ಲ ದಾಖಲಾತಿಗಳನ್ನು ಸ್ಕಾನ್ ಮಾಡುವುದರ ಮೂಲಕ ಅಪ್ಲೋಡ್ ಮಾಡಬೇಕಾಗುತ್ತದೆ. 




ಹಂತ ಆರು:




ರಾಜ್ಯದ ಎಲ್ಲಾ ಮಹಿಳೆಯರಿಗೆ ರೂಪಾಯಿ 2000 ಮಾಸಿಕ ಸಹಾಯಧನವನ್ನು ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರಾರಂಭಿಸಲಾಗುತ್ತಿದೆ.






ದಾಖಲಾತಿಗಳು ಉಪ್ಲೋಡ್ ಆದ ನಂತರ ಕೆಳಗೆ ಕಾಣುವ ಕೋಡ್ ಅನ್ನು ಹಾಕಿ ಉಳಿಸು ಎಂದು ಕ್ಲಿಕ ಮಾಡಿ ಆಗ ನಿಮಗೆ ಒಂದು ರೆಫರೆನ್ಸ್ ನಂಬರ್ ಸಿಗುತ್ತದೆ, ಅದನ್ನು ನೋಟ್ ಮಾಡಿಕೊಳ್ಳಿ.

ನಂತರ proceed to e sign ಎಂದು ಕ್ಲಿಕ್ ಮಾಡಿ ಒಟಿಪಿ ಹಾಕಿ ಪೇಮೆಂಟ್ ಮಾಡಿ ಸಬ್ ಮಿಟ್ ಮಾಡಿ ಇದು ಕೊನೆಯ ಹಂತವಾಗಿರುತ್ತದೆ. 

ನೀವು ಸಲ್ಲಿಸಿರುವ  ಅರ್ಜಿಯ ನಮೂನೆಯನ್ನು ಪ್ರಿಂಟೌಟ್ ತೆಗೆದಿಡಿ.







ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@










ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು