ಗ್ಯಾರಂಟಿ' ಎಫೆಕ್ಟ್ : ಬಿಪಿಎಲ್ ಕಾರ್ಡ್ ಗೆ ಮುಗಿಬಿದ್ದ ಜನ: ಅರ್ಜಿ ಸ್ವೀಕಾರವನ್ನೇ ಸ್ಥಗಿತಗೊಳಿಸಿದ ಇಲಾಖೆ !!

ಗ್ಯಾರಂಟಿ' ಎಫೆಕ್ಟ್ : ಬಿಪಿಎಲ್ ಕಾರ್ಡ್ ಗೆ ಮುಗಿಬಿದ್ದ ಜನ: ಅರ್ಜಿ ಸ್ವೀಕಾರವನ್ನೇ ಸ್ಥಗಿತಗೊಳಿಸಿದ ಇಲಾಖೆ !!







ರಾಜ್ಯದಲ್ಲಿ ಇಂದಷ್ಟೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆ ವೇಳೆ ಜನೇವರಿಗೆ ನೀಡಿದ ಉಚಿತ ಕೊಡುಗೆಗಳ ಭರವಸೆಗಳನ್ನು ಈಡೇರಿಸುವುದು ನಿಚ್ಚಳವಾಗಿದೆ. ಆದರೆ ಆ ಕೊಡುಗೆಗಳನ್ನು ಬಡವರಿಗೆ ಮಾತ್ರ ಸೀಮಿತಗೊಳಿಸುವ ಎಲ್ಲ ಸಾಧ್ಯತೆ ಕಂಡುಬರುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಈ ಉಚಿತ ಕೊಡುಗೆಗಳ ಲಾಭ ಪಡೆಯಲು ಉತ್ಸುಕರಾಗಿರುವ ಜನರು, ಬಿಪಿಎಲ್ ಕಾರ್ಡ್ ಗಳನ್ನೂ ಮಾಡಿಸಿಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿಬೀಳತೊಡಗಿದ್ದರೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪ್ರತಿ ಮನೆಗೂ 200ಯುನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರೂ, ನಿರುದ್ಯೋಗಿ ಯುವ ಪದವೀಧರರಿಗೆ ಧನಸಹಾಯ, ಪ್ರತಿ ವ್ಯಕ್ತಿಗೆ ೧೦ ಕಿಲೋ ಅಕ್ಕಿ ಉಚಿತ ,,, ಹೀಗೆ ೫ ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಿದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸುವುದು ಗ್ಯಾರಂಟಿ ಎಂದೂ ಸ್ಪರ್ಷ್ಟಪಡಿಸಿದೆ.

ಇದಕ್ಕೆ ಪೂರಕವಾಗಿ ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡುವ ನಿರ್ಧಾರಗಳನ್ನು ಕೈಗೊಂಡು ಅಧಿಕೃತ ಆದೇಶಗಳನ್ನು ಹೊರಡಿಸಿದ್ದಾರೆ. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತ್ರ, ಹಾದಿಬೀದಿಯಲ್ಲಿ ಹೋಗುವವರಿಗೆಲ್ಲ ಈ ಯೋಜನೆಗಳ ಲಾಭ ಸಿಗುವುದಿಲ್ಲ. ನಿಜಕ್ಕೂ ಬಡವರಿಗೆ ಅರ್ಹರಿಗೆ ಮಾತ್ರ ಸಿಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾತ್ಕಾಲಿಕವಾಗಿ ಸ್ಥಗಿತ:

ಇದೆಲ್ಲವನ್ನೂ ಗಮನಿಸಿರುವ ಸಾರ್ವಜನಿಕರು ತಮ್ಮ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳಲು ಆಹಾರ, ನಾಗರೀಕ ಪೂರೈಕೆ ಮತ್ತು ಸಾರ್ವಜನಿಕ ಸರಬರಾಜು ಇಲಾಖೆಯ ವೆಬ್ ಸೈಟ್ ಗೆ ಮೊರೆ ಹೋಗಿದ್ದಾರೆ. ಕೆಲವರು ತಮ್ಮ ಮೊಬೈಲ್ ಮತ್ತು ಕಂಪ್ಯೂಟರ್ ಗಳ ಸಹಾಯದಿಂದ ಆಹಾರ ahar.kar.nic.in  ವೆಬ್ ಸೈಟ್ ಓಪನ್ ಮಾಡಲು ಪ್ರಯತ್ನಿಸುತ್ತಿದ್ದರೆ ಇನ್ನು  ಕೆಲವರು ಸಮೀಪದ ಸೈಬರ್ ಸೆಂಟರ್ ಗಳಿಗೆ ಹೋಗಿ ಬಿಪಿಎಲ್ ಕಾರ್ಡ್ ಗಳನ್ನೂ ಮಾಡಿಸಿಕೊಳ್ಳಲು  ಮುಂದಾಗುತ್ತಿದ್ದಾರೆ.ಹೆಚ್ಚು ಜನ ಒಂದೇ ಸಲಕ್ಕೆ ಪ್ರಯತ್ನ ಮಾಡುತ್ತಿರುವುದರಿಂದ ವೆಬ್ ಸೈಟ್ ನಿಧಾನವಾಗಿದೆ. ಕೆಲವೆಡೆ ಓಪನ್ ಕೂಡ ಆಗುತ್ತಿಲ್ಲ.




            ಈ ಸಮಸ್ಯೆಯನ್ನು ಮನಗಂಡ ಆಹಾರ ಇಲಾಖೆಯವರು ಹೊಸ ಪಡಿತರ ಚೀಟಿ ನೀಡುವ ಪ್ರಕ್ರಿಯೆಯನ್ನೇ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. 'ಹೊಸ ಪಡಿತರ ಚೀಟಿಗಾಗಿ ಅರ್ಜಿ ಸ್ವೀಕರಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.' ಎಂದು ತಮ್ಮ ವೆಬ್ ಸೈಟ್ ನಲ್ಲೆ ಸ್ಪಷ್ಟವಾಗಿ ನಮೂದಿಸಿಬಿಟ್ಟಿದ್ದಾರೆ.
ಇದರಿಂದಾಗಿ ನೂತನ ಸರ್ಕಾರದ ಉಚಿತ ಕೊಡುಗೆಗಳ ಲಾಭ ಪಡೆಯುವ ಸಲುವಾಗಿ ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸಲು ಹೊರಟಿದ್ದ ಜನರಿಗೆ ನಿರಾಸೆಯಾಗಿದೆ.






ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು