ಇಂದಿನಿಂದ ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ......!

ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ......!





ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ.... 2023 ವಿಧಾನಸಭಾ ಚುನಾವಣಾ ಎಫೆಕ್ಟ್ 

ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಬೆನ್ನಲ್ಲೇ ರಾಜ್ಯ ಸರ್ಕಾರವು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಎಲ್ಲಾ ಮದ್ಯಪ್ರಿಯರಿಗೆ ದೊಡ್ಡ ಶಾಕ್ ವೊಂದನ್ನು ನೀಡಿದೆ. ರಾಜ್ಯದಲ್ಲಿ ಇನ್ನೂ ಮುಂದೆ ಮದ್ಯ ಸಿಗುವುದಿಲ್ಲ. ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ರಾಜ್ಯದಂತ ಇರುವ ಎಲ್ಲಾ ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ಅನ್ನು ನೀಡಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.




ರಾಜ್ಯದಂತ ಮುಂದಿನ 3 ದಿನ ಬಾರ್. ರೆಸ್ಟೋರೆಂಟ್, ವೈನ್ ಶಾಪ್ ಸೇರಿದಂತೆ ಎಲ್ಲಾ ಎಣ್ಣೆ ಅಂಗಡಿಗಳು ಸತತವಾಗಿ 3 ದಿನ ಬಂದ್ ಇರುತ್ತವೆ. ಹಾಗಾದರೆ ಎಣ್ಣೆ ಅಂಗಡಿಗಳು ಬಂದ್ ಇರುವ ದಿನಗಳು ಯಾವುವು? ಯಾವ ದಿನಾಂಕ ದಿಂದ ಯಾವ ದಿನಾಂಕ ದವರೆಗೆ ಬಂದ್ ಆಗುತ್ತದೆ?


ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಈ ಹಿನ್ನೆಲೆಯಲ್ಲಿ 3 ದಿನ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ಕುರಿತಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದೇಶಗಳನ್ನು ಹೊರಡಿಸಿದ್ದು, ಮತದಾನದ ಪ್ರಯುಕ್ತ ದಿನಾಂಕ 8-5-2023 ಸಂಜೆ 5 ಗಂಟೆಯಿಂದ 10-5-2023 ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತ ಎಣಿಕೆ ಪ್ರಯುಕ್ತ 12-5-2023 ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.  


ಮತದಾನ ಮತ್ತು ಮತ ಎಣಿಕೆ ಸಂದರ್ಭದಲ್ಲಿ ಮದ್ಯದ ತಯಾರಿಕಾ ದಾಸ್ತಾನು, ಸಾಗಾಣಿಕೆ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಿ ಶುಷ್ಕ ದಿನ (ಡ್ರೈ ಡೇ ) ಅಂತ ಘೋಷಿಸಿ ಆದೇಶಿಸಿದೆ. ಈ ದಿನಗಳಂದು ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಯಾವುದೇ ತರದ ಮದ್ಯದ ತಯಾರಿಕೆಯನ್ನು ನಿಷೇಧಿಸಿದೆ ಎಂದು ಹೇಳಲಾಗಿದೆ.









ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@
























ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು