ಯೂಟ್ಯೂಬ್ ನಿಂದ ಹಣ ಮಾಡುವುದು ಹೇಗೆ ? ಕನಿಷ್ಠ ಎಷ್ಟು ವೀಕ್ಷಣೆ (Views) ಆಗಬೇಕು ? ಈ ಎಲ್ಲಾ ಕುರಿತು ಮಹತ್ವದ ವಿವರ ಇಲ್ಲಿದೆ…
Earning money on YouTube :
ಯೂಟ್ಯೂಬ್ ನಲ್ಲಿ ಹಣ ಬರುವಂತಾಗಲು ಹಲವು ಮಾರ್ಗಗಳಿವೆ. ಯೂಟ್ಯೂಬ್ ಖಾತೆಯಿಂದ ಹಿಡಿದು ಪಾರ್ಟ್ನರ್ ಶಿಪ್ ವರೆಗೆ ಏನೇನು ಮಾಡಬಹುದು ಎಂಬ ಒಂದಿಷ್ಟು ವಿವರ ಇಲ್ಲಿದೆ ನೋಡಿ.
ಯೂಟ್ಯೂಬ್ ನಿಂದ ಹಣ ಮಾಡುವುದು ಹೇಗೆ ?
ಯೂಟ್ಯೂಬ್ ನಿಂದ ನೀವು ಹಣ ಮಾಡಬೇಕೆಂದು ನಿರ್ಧರಿಸಿದ್ದೆ ಆದಲ್ಲಿ ಮೊದಲಿಗೆ ಒಂದಿಷ್ಟು ವಿಷಯಗಳು ಗೊತ್ತಿರಲಿ. ನೀವು ಹಾಕುವ ವಿಡಿಯೋ ಗಳು ಗೂಗಲ್ ನ ಸಾರ್ವಜನಿಕ ನೀತಿಗೆ ಅನುಬದ್ಧವಾಗಿರಬೇಕು. ವಿಡಿಯೋಗಳು ಹೆಚ್ಚು ವೀಕ್ಷಣೆ ಪಡೆಯಬಲ್ಲಂತಹವಾಗಿರಬೇಕು. ಆ ನಿಟ್ಟಿನಲ್ಲಿ ನೀವು ಕಂಟೆಂಟ್ ಪ್ಲಾನ್ ಮಾಡಬೇಕು.
ಯೂಟ್ಯೂಬ್ ನಲ್ಲಿ ಬರುವ ಜಾಹಿರಾತುಗಳು ಆದಾಯಕ್ಕೆ ಮೂಲ. ನಿಮ್ಮ ವಿಡಿಯೋಗಳಿಗೆ ಬರುವ ಜಾಹೀರಾತಿನಿಂದ ನಿಮಗೆ ದುಡ್ಡು ಸಿಗಬೇಕೆಂದರೆ ಗೂಗಲ್ ಆಡ್ ಸೆನ್ಸ್ ಅಕೌಂಟ್ ಅಕ್ಟಿವತೆ ಮಾಡಬೇಕು.
ಆಡ್ ಸೆನ್ಸ್ ಅಕೌಂಟ್ ಸಕ್ರಿಯವಾದಾಕ್ಷಣ ಹಣ ಹರಿದುಬರುವುದಿಲ್ಲ. ನಿಮ್ಮ ಯೂಟ್ಯೂಬ್ ಚಾನಲ್ ಕನಿಷ್ಠ 1,000 ಸಬ್ ಸ್ಕ್ರೈಬರ್ ಹೊಂದಿರಬೇಕು. ಕಳೆದ 1 ವರ್ಷದಲ್ಲಿ ನಿಮ್ಮ ಯೂಟ್ಯೂಬ್ ವಿಡಿಯೋಗಳನ್ನು ಜನರು ವಿಸ್ಖಿಸಿದ ಅವಧಿ 4,000 ಗಂಟೆಗಳಿರಬೇಕು. ನಿಮ್ಮ ಶಾರ್ಟ್ಸ್ ವಿಡಿಯೋಗಳಿಗೆ 90 ದಿನಗಳಲ್ಲಿ 1 ಕೋಟಿ ವೀಕ್ಷಣೆ ಇರಬೇಕು. ಈ ಮಾನದಂಡಕ್ಕೆ ನಿಮ್ಮ ಯೂಟ್ಯೂಬ್ ಚಾನಲ್ ತಲೆಯಾಗಿದ್ದರೆ ಆಗ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ ಗೆ ಅರ್ಜಿ ಹಾಕಬಹುದು. ಆ ಮೂಲಕ ಹಣ ಸಂಪಾದನೆಗೆ ದಾರಿ ಮಾಡಬಹುದು.
ವಿಡಿಯೋಗಳ ಮಹಾಸಾಗರ ಎನಿಸಿರುವ ಯೂಟ್ಯೂಬ್ ನಲ್ಲಿ ಲೆಕ್ಕವಿಲ್ಲದಷ್ಟು ವಿಡಿಯೋ ಗಳು ದಿನವೂ ಅಪ್ಲೋಡ್ ಆಗುತ್ತಲೇ ಇರುತ್ತವೆ. ವಿಡಿಯೋ ಹಾಕುವುದುರ ಜೊತೆಗೆ ಜನರು ಹಣವನ್ನೂ ಮಾಡುತ್ತಿದ್ದಾರೆ. ಯೂಟ್ಯೂಬ್ ನಂಥ ವಿಡಿಯೋ ಪ್ಲಾಟ್ ಫಾರ್ಮ್ ಗಳಿಂದ ಹಲವು ಜನರು ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಮಾಡುತ್ತಿರುವ ಬಗ್ಗೆ ಮಾತುಗಳನ್ನು ಕೇಳಿರುತ್ತೇವೆ. ನಮ್ಮಲ್ಲಿ ಅನೇಕರು ಯೂಟ್ಯೂಬ್ ಚಾನಲ್ ಹೊಂದಿದ್ದು ವಿಡಿಯೋ ಗಳನ್ನು ಪೋಸ್ಟ್ ಮಾಡುತ್ತಾರಾದರೂ ಅದರಿಂದ ಯಾವ ಹಣವು ಬರುವುದಿಲ್ಲ. ಬೇರೆ ಜನರು ಯೂಟ್ಯೂಬ್ ನಲ್ಲಿ ಹೇಗೆ ಹಣ ಮಾಡುತ್ತಾರೆ ಎಂದು ಅಚ್ಚರಿ ಆಗಬಹುದು. ಯೂಟ್ಯೂಬ್ ಶಾರ್ಟ್ಸ್ ಗಳಂತೂ ಬಹಳ ಜನಪ್ರಿಯ ಎನಿಸಿವೆ. ಯೂಟ್ಯೂಬ್ ನಲ್ಲಿ ಹಣ ಬರುವಂತಾಗಲು ಹಲವು ಮಾರ್ಗಗಳಿವೆ. ಯೂಟ್ಯೂಬ್ ಖಾತೆಯಿಂದ ಹಿಡಿದು ಪಾರ್ಟ್ನರ್ ಶಿಪ್ ವರೆಗೆ ಏನೇನು ಮಾಡಬಹುದು ಎಂಬ ಒಂದಿಷ್ಟು ವಿವರ ಇಲ್ಲಿದೆ.
ನಿಮ್ಮ ವಿಡಿಯೋ ವೀಕ್ಷಣೆಗೆ ತಕ್ಕಂತೆ ಹಣ ಬರುವುದಿಲ್ಲ, ನೆನಪಿರಲಿ
ನಮ್ಮ ವಿಡಿಯೋಗಳು ಲಕ್ಷ ವೀವ್ಸ್ ಪಡೆದಿವೆ. ಆದರೂ ನಮಗೆ ನಿರೀಕ್ಷಿಸಿದಷ್ಟು ಆದಾಯ ಸಿಕ್ಕಿಲ್ಲ ಎಂದು ದುರುವವರು ಇದ್ದಾರೆ. ಒಂದು ನೆನಪಿರಲಿ, ನಾವು ಪೋಸ್ಟ್ ಮಾಡುವ ವಿಡಿಯೋಗಳು ಎಷ್ಟು ವೀಕ್ಷಣೆ ಹೊಂದಿದೆ ಎಂಬುದಕ್ಕಿಂತ ವಿಡಿಯೋ ವೇಳೆ
ಮಧ್ಯೆ ಮಧ್ಯೆ ಪ್ರಸಾರವಾಗುವ ಜಾಹಿರಾತುಗಳನ್ನು ಎಷ್ಟು ಮಂದಿ ಕ್ಲಿಕ್ ಮಾಡಿದ್ದಾರೆ ಅಥವಾ ಇಡೀ ಜಾಹಿರಾತನ್ನು ಎಷ್ಟು ಮಂದಿ ನೋಡಿದ್ದರೆ ಎಂಬುದು ಮುಖ್ಯ. ಗೂಗಲ್ ಸಂಸ್ಥೆಗೆ ಆದಾಯ ತರುವುದು ಇದೆ ಜಾಹಿರಾತುಗಳೇ ಅದಕ್ಕೆ ಬಂಡ ಜಾಹಿರಾತು ಆದಾಯವನ್ನು ಯೂಟ್ಯೂಬ್ ವಿಡಿಯೋ ಕ್ರಿಯೇಟರ್ಸ್ ಜೊತೆ ಹಂಚಿಕೊಳ್ಳುತ್ತದೆ ಅಷ್ಟೇ. ನಿಮ್ಮ ಆಡ್ ಸೆನ್ಸ್ ಅಕೌಂಟ್ ನಲ್ಲಿ ೧೦೦ ಡಾಲರ್ ನಷ್ಟು ಹಣ ಜಮೆ ಆಗುವವರೆಗೂ ನಿಮಗೆ ಸಂದಾಯ ಆಗುವುದಿಲ್ಲ.
ಗೂಗಲ್ ಆಡ್ ಅಲ್ಲದೆ ಬೇರೆ ಮಾರ್ಗಗಳು೦ಟು ಯುಟ್ಯೂಬಿರಿಗೆ
ನೀವು ತಕ್ಕಮಟ್ಟಿಗೆ ಸಬ್ ಸ್ಕ್ರೈಬರ್ ಗಳನ್ನೂ ಹೊಂದಿದ ಯೂಟ್ಯೂಬ್ ಚಾನಲ್ ಮಾಲೀಕರಾಗಿದ್ದಾರೆ ಸೋಷಿಯಲ್ ಇನ್ ಫ್ಲ್ಯೂಎನ್ಸರ್ ಎನಿಸುತ್ತಿರಿ. ಯಾವುದಾದರು ಉತ್ಪನ್ನಗಳ ಕಂಪನಿ ಜೊತೆ ಸೇರಿ ಅವುಗಳ ಪ್ರಚಾರ ಮಾಡಬಹುದು. ನಿಮ್ಮ ವಿಡಿಯೋದಲ್ಲಿ ಅದರ ಜಾಹಿರಾತು ಸೇರಿಸಬಹುದು. ಜನರು ಈ ಲಿಂಕ್ ಕ್ಲಿಕ್ ಮಾಡಿ ಆ ವೆಬ್ ಸೈಟ್ ಗೆ ಹೋಗಿ ಏನಾದರೂ ಖರೀದಿಸಿದರೆ ಆ ವಿವರವು ದಾಖಲಾಗುತ್ತದೆ. ಈ ವಹಿವಾಟಿನ ಮೊತ್ತದಲ್ಲಿ ಕಮಿಷನ್ ಆಗಿ ಒಂದಷ್ಟು ಹಣ ಯೂಟ್ಯೂಬ್ ಮಂದಿಗೆ ಸಿಗುತ್ತದೆ.
ಮಾನಿ ಟೈಸೇಶನ್ ಆಕ್ಟಿವೇಟ್ ಮಾಡುವುದು ಹಾಗೆ?
ಯೂಟ್ಯೂಬ್ ಗೆ ಲಾಗ್ ಇನ್ ಆಗಿ, ಯೂಟ್ಯೂಬ್ ಸ್ಟುಡಿಯೋ ಕ್ಲಿಕ್ ಮಾಡಿ.
ಎಡಬದಿಯ ಮೆನುನಲ್ಲಿ ಅದರ್ ಫೀಚರ್ಸ್ ಹಾಗೂ ಮಾನಿ ಟೈಸೇಶನ್ ಕ್ಲಿಕ್ ಮಾಡಿ.
ಯೂಟ್ಯೂಬ್ ಪರ್ಟ್ನರ್ಸ್ ಪ್ರೋಗ್ರಾಮ್ ನ ಷರತ್ತುಗಳಿಗೆ ಒಪ್ಪಿಗೆ ಇದೆ ಎಂದು ಚೆಕ್ ಬಾಕ್ಸ್ ಕ್ಲಿಕ್ ಮಾಡಿ.
ಇಲ್ಲಿ ಗೂಗಲ್ ಆಡ್ ಸೆನ್ಸ್ ಅಕೌಂಟ್ ಅನ್ನು ರಚಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Social