ನಿಮ್ಮ ಮತಗಟ್ಟೆ ಯಾವುದು ಎಂಬುದನ್ನು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು ತಿಳಿದಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ :

ನಿಮ್ಮ ಮತಗಟ್ಟೆ ಯಾವುದು ಎಂಬುದನ್ನು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು ತಿಳಿದಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ :








ಈ ಬಾರಿ ಮತ ಹಾಕಬೇಕು. ಆದರೆ ಮತಗಟ್ಟೆ ಯಾವುದು ಅಂತ ತಿಳಿಯುತ್ತಿಲ್ಲ ಎಂಬ ಚಿಂತೆಯಲ್ಲಿ ನೀವಿದ್ದೀರಾ? ಹಾಗಾದ್ರೆ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ನೀವು ಮನಸ್ಸು ಮಾಡಿದರೆ ಕೆಲ ನಿಮಿಷದಲ್ಲೇ ನಿಮ್ಮ ಮೊಬೈಲ್ ನಲ್ಲೆ ಮತಗಟ್ಟೆಯ ವಿವರವನ್ನು ತಿಳಿಯಬಹುದು.
ಮತದಾರರು ಮೂರು ರೀತಿಯಲ್ಲಿ ಮತಗಟ್ಟೆಯನ್ನು ವಿವರವನ್ನು ಪಡೆದುಕೊಳ್ಳಬಹುದು. ಒಂದನೆಯದು ಮೊಬೈಲ್ ಅಪ್ಲಿಕೇಶನ್, ಎರಡನೇಯದ್ದು, ವೆಬ್ ಸೈಟ್, ಮೂರನೆಯದ್ದು ಕಾಲ ಸೆಂಟರ್ ಗೆ ಕರೆ ಮಾಡುವ ಮೂಲಕ ಮತಗಟ್ಟೆಯ ವಿವರವನ್ನು ತಿಳಿದುಕೊಳ್ಳಬಹುದು.



ಓಟರ್ ಐಡಿ ಇಲ್ಲದಿದ್ದರೇನು ?

ಚುನಾವಣೆ ಸಮಯದಲ್ಲಿ ಬಳಕೆಯಾಗುವ ಮತದಾರರ ಗುರುತಿನ ಚೀಟಿ ಅತ್ಯಂತ ಪ್ರಮುಖವಾದ ದಾಖಲೆ. ಒಂದು ವೇಳೆ ವೋಟರ್ ಐಡಿ ಇಲ್ಲದೆ ಇದ್ದರೂ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಪಾಸ್ಪೋರ್ಟ್, ಡ್ರೈವಿಂಗ್ ಲೈಸನ್ಸ್, ಸರ್ಕಾರೀ ನೌಕರರ ಗುರುತಿನ ಚೀಟಿ, ಫೋಟೋ ಸಹಿತ ಇರುವ ಪಾಸ್ಬುಕ್ , ಪಾನ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಸ್ಮಾರ್ಟ್ ಕಾರ್ಡ್, ಕಾರ್ಮಿಕ ಇಲಾಖೆ ಅರೋಗ್ಯ ವಿಮೆ ಕಾರ್ಡ್, ಪಿಂಚಣಿ ದಾಖಲೆ, ಆಧಾರ್ ಕಾರ್ಡ್ ಬಳಕೆ ಮಾಡಿಯೂ ಮತ ಹಾಕಬಹುದು.

ಪ್ರತಿ ಚುನಾವಣೆಯಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತದಾನ ನಡೆದರೆ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ ಇರುತ್ತದೆ. ಈ ಕಾರಣಕ್ಕೆ ಚುನಾವಣಾ ಆಯೋಗ ಮತದಾರರಿಗೆ ಸುಲಭವಾಗಿ ಮತಗಟ್ಟೆಯ ವಿವರ ತಿಳಿದುಕೊಳ್ಳಲು ಉತ್ತಮ ವ್ಯವಸ್ಥೆ ಮಾಡಿದೆ.


ಚುನಾವಣಾ ಅಪ್ಲಿಕೇಶನ್ : ಚುನಾವಣಾ ಆಯೋಗ ಚುನಾವಣಾ ಹೆಸರಿನಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಓಪನ್ ಮಾಡಿದಾಗ Search by Epic No ಅಥವಾ Search by Name ಎಂಬ ಎರಡು ಆಯ್ಕೆ ಸಿಗುತ್ತದೆ. 

Search by Epic No ಆಯ್ಕೆ ಮಾಡಿದರೆ ವೋಟರ್ ಐಡಿ ನಂಬರ್ ಹಾಕಿದರೆ ಸಾಕಾಗುತ್ತದೆ. Search by Name ಆಯ್ಕೆ ಆರಿಸಿದರೆ ಹೆಸರು, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಸಂಬಂಧಿಯ ಹೆಸರು, ಲಿಂಗ ಆಯ್ಕೆ ಮಾಡಿ ಹುಡುಕಬಹುದು. ಇಷ್ಟೇ ಅಲ್ಲದೆ ಜಿಪಿಎಸ್ ಆನ್ ಮಾಡಿ ಲೊಕೇಶನ್ ಮೂಲಕವು ಮತಗಟ್ಟೆಯನ್ನು ಹುಡುಕಬಹುದು. 



ವೆಬ್ ಸೈಟ್ :
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಸಾಧ್ಯವಾಗದವರು ವೆಬ್ ಸೈಟ್ ಮೂಲಕ ಮತಗಟ್ಟೆಯನ್ನು ಹುಡುಕಬಹುದು. ಆಪ್ ನಲ್ಲಿ ಹೇಗೆ ವೈಯಕ್ತಿಕ ಡೇಟಾ ಎಂಟ್ರಿ ಮಾಡುತ್ತಿರೋ ಅದೇ ರೀತಿಯ ವಿವರಗಳನ್ನು ಸಲ್ಲಿಸಿ ಮತಗಟ್ಟೆಯ ಮಾಹಿತಿಯನ್ನು ಪಡೆಯಬಹುದು.






ಚುನಾವಣಾ ಆಯೋಗದ ವೆಬ್ ಸೈಟ್ ಕ್ಲಿಕ್ ಮಾಡಿ: 






ದೂರವಾಣಿ : ಆಪ್ ಮತ್ತು ವೆಬ್ ಸೈಟ್ ಮೂಲಕ ಮತಗಟ್ಟೆಯ ಮಾಹಿತಿ ಪಡೆಯಲು ಸಾಧ್ಯವಾಗದವರು 1950 ಅಥವಾ 180042 551950 ನಂಬರ್ ಗೆ ಕರೆ ಮಾಡಿ ಮತಗಟ್ಟೆಯ ವಿವರ ತಿಳಿದುಕೊಳ್ಳಬಹುದು.

ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಸೈಟ್ ನಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ವಿವರ, ಪಾರ್ಕಿಂಗ್ ಸ್ಥಳ, ಗಾಲಿ ಕುರ್ಚಿ ನೋಂದಣಿ, ಸಮೀಪದ ಮತದಾನ ಕೇಂದ್ರಗಳು, ಅರೋಗ್ಯ ಸೌಲಭ್ಯಗಳನ್ನು ಸುಲಭವಾಗಿ ತಿಳಿಯಬಹುದು.







ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@





ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು