ಚಂದ್ರಯಾನ-3 ಯಶಸ್ವಿ ಉಡ್ಡಯನ
ಬಾಹ್ಯಾಕಾಶದಲ್ಲಿ ಭಾರತದ ತ್ರಿವಿಕ್ರಮ :
140 ಕೋಟಿ ಭಾರತೀಯರ ಹಾರೈಕೆಯೊಂದಿಗೆ ಇಸ್ರೋದ ಚಂದ್ರಯಾನ -3 ನೌಕೆಯನ್ನು ಹೊತ್ತ ರಾಕೆಟ್ ಶುಕ್ರವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಅಂತರಿಕ್ಷಕ್ಕೆ ಯಶಸ್ವಿಯಾಗಿ ಉಡಾವಣೆ ಆಯಿತು.
ಅಂತರಿಕ್ಷದಲ್ಲಿ ಹೊಸ ಅಧ್ಯಾಯ :
ಚಂದ್ರಯಾನ - 3 ಬಾಹ್ಯಾಕಾಶ ರಂಗದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಇದು ಪ್ರತಿಯೊಬ್ಬ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಎತ್ತರಕ್ಕೆ ಏರಿಸುತ್ತದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ನಾನು ಅವರ ಚೈತನ್ಯ ಮತ್ತು ಜಾಣ್ಮೆಯನ್ನು ಅಭಿನಂದಿಸುತ್ತೇನೆ.
40 ದಿನಗಳ ಚಂದ್ರ ಕುತೂಹಲ !
ಆಗಸ್ಟ್ 23ರ ಸಂಜೆ 5.47ಕ್ಕೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿದರೆ ಚಂದ್ರಯಾನ-3 ರ ಯಶಸ್ವಿ
ಚಂದ್ರಯಾನ-3 ನೌಕೆ ಈಗ ಭೂಕಕ್ಷೆಯಲ್ಲಿ ಸುತ್ತುತ್ತಿದೆ. 5 ರಿಂದ 6 ಬಾರಿ ಭೂಮಿಯನ್ನು ಈ ನೌಕೆ ಸುತ್ತು ಹಾಕಲಿದೆ ಈ ವೇಳೆ ನೌಕೆಯ ಕಕ್ಷೆಯನ್ನು ವಿಜ್ಞಾನಿಗಳು ಎತ್ತರಿಸುತ್ತಾರೆ.
1 ತಿಂಗಳ ಕಾಲ ಇದು ಚಂದ್ರನತ್ತ ಪ್ರಯಾಣ ಬೆಳೆಸುತ್ತದೆ. ನಂತರ ಚಂದ್ರನ ಸುತ್ತ 100 ಕಿ ಮೀ ದೂರದಲ್ಲಿ ಸುತ್ತುತ್ತದೆ. ಆಗಸ್ಟ್ 23 ರಂದು ಸಂಜೆ 5.47 ಕ್ಕೆ ಚಂದ್ರನ ಮೇಲೆ ಇಳಿಯಲಿದೆ. ಬಳಿಕ ವಿಕ್ರಮ್ ಲ್ಯಾಂಡರ್ ರೋವರ್ ಹೊರಬಂದು ಅಧ್ಯಯನ ನಡೆಸಲಿದೆ. ಅಲ್ಲಿಗೆ ಚಂದ್ರಯಾನ-3 ಯಶಸ್ವಿ
ಚಂದ್ರನತ್ತ ಭಾರತದ ಮಹತ್ವಾಕಾಂಕ್ಷಿ ಯಾನ ಶುರು :
ಚಂದ್ರಯಾನ 3 ನೌಕೆ ಉಡಾವಣೆ ಯಶಸ್ವಿ। ಚಂದ್ರನ ಮೇಲಿಳಿಯಲು 40 ದಿನ ಬೇಕು। ಆಗಸ್ಟ್ 23ಕ್ಕೆ ಸಂಕೀರ್ಣ ಸವಾಲ್
ಚಂದ್ರನ ಒಡಲಲ್ಲಿ ಇರುವ ಹಲವು ನಿಗೂಢಗಳನ್ನು ಭೇದಿಸುವ ಗುರಿಯೊಂದಿಗೆ, ಅನ್ಯಗ್ರಹದಲ್ಲಿ ನೌಕೆ ಇಳಿಸುವ ಕಲೆಯನ್ನು ಕರಗತ ಮಾಡಿಕೊಳ್ಳುವ ಛಲದೊಂದಿಗೆ ನೂರಾ ನಲವತ್ತು ಕೋಟಿ ಭಾರತೀಯರ ಶುಭ ಹಾರೈಕೆ ಹೊತ್ತು ಭಾರತದ ಮಹತ್ವಾಕಾಂಕ್ಷಿ 'ಚಂದ್ರಯಾನ ೩' ನೌಕೆ ಶುಕ್ರವಾರ ಯಶಸ್ವಿಯಾಗಿ ಉಡಾವಣೆಯಾಗಿದೆ. ಸುಧೀರ್ಘ 40 ದಿನಗಳ ಪ್ರಯಾಣದ ಬಳಿಕ ಇದು ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆ ಇದೆ. ಉಡಾವಣೆಗಿಂತ ಚಂದ್ರನ ಮೇಲೆ ನೌಕೆ ಇಳಿಸುವುದು ಅತ್ಯಂತ ಸಂಕೀರ್ಣ ಸವಾಲು. ಈ ಕಾರ್ಯದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಯಶಸ್ವಿಯಾದರೆ ಆಂತರಿಕ್ಷ ಲೋಕದಲ್ಲಿ ಭಾರತ ಹೊಸ ಇತಿಹಾಸವೊಂದನ್ನು ಸೃಷ್ಟಿಸಲಿದೆ.
ಆಂಧ್ರಪ್ರದೇಶದ ಶ್ರೀ ಹರಿಕೋಟದಿಂದ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಸರಿಯಾಗಿ ಚಂದ್ರಯಾನ -3 ನೌಕೆ ಹೊತ್ತ, ಭಾರಿ ತೂಕ ಹೊರುವ ಸಾಮರ್ಥ್ಯದಿಂದಾಗಿ ಫ್ಯಾಟ್ ಬಾಯ್ ಅಥವಾ ಬಾಹುಬಲಿ ಎಂದೂ ಕರೆಸಿಕೊಳ್ಳುವ ಇಸ್ರೋದ LVM೩-M೪ ರಾಕೆಟ್ ನಭೋಮಂಡಲದತ್ತ ಚಿಮ್ಮಿತು. ಇದರ ಬೆನ್ನಲ್ಲೇ ಎದ್ದ ದಟ್ಟವಾದ ಕಿತ್ತಳೆ ಬಣ್ಣದ ಹೊಗೆಯನ್ನು ಕಂಡು ವಿಜ್ಞಾನಿಗಳು ಅತಿಥಿ ಗಣ್ಯರು ಚಪ್ಪಾಳೆ ತಟ್ಟಿ ಸಂತಸ ಪಟ್ಟರು. ಪ್ರತಿ ಹಂತವನ್ನೂ ಯಶಸ್ವಿಯಾಗಿ ದಾಟಿ ರಾಕೆಟ್ ಮುನ್ನುಗ್ಗುತ್ತಿದ್ದ ಘೋಷಣೆಯನ್ನು ಇಸ್ರೋ ವಿಜ್ಞಾನಿಗಳು ಮಾಡುತ್ತಿದ್ದಾಗ ಚಪ್ಪಾಳೆಗಳ ಸುರಿಮಳೆಯಾದವು. ಇಸ್ರೋದ ಮಾಜಿ ಮುಖ್ಯಸ್ಥರು ಹಾಗೂ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಈ ಕ್ಷಣಗಳಿಗೆ ಸಾಕ್ಷಿಯಾದರು. ಉಡಾವಣೆ ಸ್ಥಳದಿಂದ 7 ಕಿ ಮೀ ದೂರದಲ್ಲಿರುವ ವೀಕ್ಷಣಾ ಸ್ಥಳದಲ್ಲಿ ನೆರೆದಿದ್ದ 10 ಸಾವಿರಕ್ಕೂ ಅಧಿಕ ಜನರು ಇಸ್ರೋದ ಅಮೋಘ ಸಾಧನೆಯನ್ನು ಕಂಡು ಕುಣಿದು ಕುಪ್ಪಳಿಸಿದರು.
ಉಡಾವಣೆಯಾದ 16 ನಿಮಿಷಗಳಲ್ಲೇ ರಾಕೆಟ್ ನಿಂದ ಪ್ರತ್ಯಕ್ಷಗೊಂಡ ಚಂದ್ರಯಾನ ನೌಕೆ ಭೂ ಕಕ್ಷೆಯನ್ನು ಸಂರಕ್ಷಿತವಾಗಿ ತಲುಪಿತು. ಇದರೊಂದಿಗೆ ಚಂದ್ರನ ಮೇಲೆ ನೌಕೆ ಇಳಿಸುವ ಭಾರತದ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ದೊರೆಯಿತು.
ಮುಂದೇನು?
ಇನ್ನು ಮುಂದೆ ಈ ನೌಕೆ 5 ರಿಂದ 6 ಸಲ ಭೂಕಕ್ಷೆಯಲ್ಲಿ ಅಂಡಾಕಾರದಲ್ಲಿ ಗಿರಕಿ ಹೊಡೆಯಲಿದೆ. ಭೂಮಿಗೆ 170 ಕಿ ಮೀ ಸನಿಹ ಹಾಗೂ 36500 ಕಿ ಮೀ ದೂರದಲ್ಲಿ ಸುತ್ತಲಿದೆ. ಬರುವ ದಿನಗಳಲ್ಲಿ ಈ ನೌಕೆ ಚಂದ್ರನತ್ತ ತನ್ನ ಪ್ರಯಾಣ ಆರಂಭಿಸಲಿದೆ. ಆಗಸ್ಟ್ ನಲ್ಲಿ ಚಂದ್ರನ ಕಕ್ಷೆಗೆ ಸೇರಿಸಲಾಗುತ್ತದೆ. ಆಗಸ್ಟ್ 23ರಂದು ಸಂಜೆ 5.47 ಕ್ಕೆ ಚಂದ್ರನ ಅಗಲದಲ್ಲಿ ಈ ನೌಕೆಯನ್ನು ನಿಧಾನವಾಗಿ ಇಳಿಸಲಾಗುತ್ತದೆ. ನೌಕೆಯಲ್ಲಿನ ಲ್ಯಾಂಡರ್ ಇಳಿಯುತ್ತಿದ್ದಂತೆ, ಅದರಿಂದ ರೋವರ್ ಹೊರಬಂದು ಅಧ್ಯಯನ ಪ್ರಕ್ರಿಯೆ ಕೈಗೊಳ್ಳಲಿದೆ.
2ನೇ ಸಲ ಪ್ರಯತ್ನ : ಕಳೆದ 15 ವರ್ಷಗಳಲ್ಲಿ ಚಂದ್ರನ ಅಧ್ಯಯನ ಇಸ್ರೋ ಕೈಗೊಳ್ಳುತ್ತಿರುವ 3ನೇ ಯಾತ್ರೆ ಇದು, 2008 ರಲ್ಲಿ ಚಂದ್ರನ ಕಕ್ಷೆಗೆ , ಸಂಗ್ರಹವನ್ನು ನಡೆಸಿತ್ತು. 2019ರಲ್ಲಿ ಚಂದ್ರನ ಮೇಲೆ ನೌಕೆ ಇಳಿಸುವ ಚಂದ್ರಯಾನ-2 ಸಾಹಸವನ್ನು ಇಸ್ರೋ ಕೈಗೊಂಡಿತಾದರೂ, ಚಂದ್ರನ ಅಂಗಳ ಪ್ರವೇಶಿಸುವ ಸಂದರ್ಭದಲ್ಲಿ 'ವಿಕ್ರಮ್' ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದರಿಂದ ಹಿನ್ನಡೆಯಾಗಿತ್ತು. ಆಗ ಎಡಿಎ ವೈಫಲ್ಯಗಳಿಂದ ಪಾಠ ಕಲಿತಿರುವ ವಿಜ್ಞಾನಿಗಳು, ಹಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸುಮಾರು 600 ಕೋಟಿ ರೂ ವೆಚ್ಚದಲ್ಲಿ ಚಂದ್ರಯಾನ-3' ಕೈಗೊಂಡಿದ್ದಾರೆ. ಹಾಲಿವುಡ್ ಸಿನಿಮಾಗಳಿಗೆ ಮಾಡುವ ಖರ್ಚಿಗಿಂತ ಕಡಿಮೆ ಬಂಡವಾಳ ಇದಾಗಿದೆ ಎಂಬುದು ವಿಶೇಷ.
ನೋಡುಗರಿಗೆ ಚಂದ್ರಯಾನ-3 ರೋಮಾಂಚನ
ರಾಕೆಟ್ ನಭಕ್ಕೆ ನೆಗೆಯುತ್ತಿದ್ದಂತೆಯೇ ಶಿಳ್ಳೆ, ಕೇಕೆಗಳ ಮಳೆ ! ವಾಹಕದ ಕಂಪನದಿಂದ ದೇಶಪ್ರೇಮದ ಸಂಚಲನ
ಶ್ರೀಹರಿಕೋಟಾ ಕಳೆದುಕೊಂಡಿದ್ದನ್ನು ಕಳೆದ ಸ್ಥಳದಲ್ಲಿ ಮತ್ತೆ ಹುಡುಕಬೇಕು, ಆಗಲೇ ಅದು ಸಿಕ್ಕಲು ಸಧ್ಯ ಎಂಬ ನಾಣ್ಣುಡಿಯಂತೆ ಅದನ್ನು ನಿಜವಾಗಿಸುವ ಪ್ರಯತ್ನ ಚಂದ್ರಯಾನ-3!
ನಾಲ್ಕು ವರ್ಷಗಳ ನಂತರ ಭಾರತ ಮತ್ತೆ ತನ್ನ ಪ್ರಯತ್ನ ಮುಂದುವರೆಸಿ ಜೂಲೈ, 14ರ ಶುಕ್ರವಾರ ಚಂದಿರನ ಚುಂಬನಕ್ಕೆ ವಿಕ್ರಮ್ ಹೆಸರಿನ ಲ್ಯಾಂಡರ್ ಮತ್ತು ಪ್ರಗ್ಯಾನ್ ಹೆಸರಿನ ರೋವರ್ ಹೊತ್ತ ಎಲ್ ವಿ ಎಮ್ -೩ ರಾಕೆಟ್ ಸೆಕೆಂಡಿಗೆ ೯.೨೫ ಕಿ ಮೀ ವೇಗದಲ್ಲಿ ನಭಕ್ಕೆ ಹಾರಿತು.
ಭೂಮಿಯ 14 ದಿನಗಳು ಚಂದ್ರನ 1 ದಿನಕ್ಕೆ ಸಮ. ರೋವರ್ 1 ಚಂದ್ರ ದಿನ (14 ಭೂಮಿ ದಿನ)ಗಳ ಕಾಲ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು ಹಲವು ಅಧ್ಯಯನ ನಡೆಸಲಿದೆ.
ಚಂದ್ರನ ಮೇಲೆ ನೌಕೆಯನ್ನು ಭಾರತ ಯಶಸ್ವಿಯಾಗಿ ಇಳಿಸಿದರೆ ಅಮೇರಿಕ, ರಷ್ಯಾ ಹಾಗೂ ಸೋವಿಯತ್ ಒಕ್ಕೂಟ ನಂತರ ಈ ಸಾಧನೆ ಮಾಡಿದ ವಿಶ್ವದ 4ನೇ ದೇಶ ಎಂಬ ಹಿರಿಮೆಗೆ ಭಾರತ ಭಾಜನವಾಗಲಿದೆ. ಹೀಗಾಗಿ ಆಗಸ್ಟ್ 23ನ್ನು ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದೆ.
2ನೇ ಸಲ ಪ್ರಯತ್ನ : ಕಳೆದ 15 ವರ್ಷಗಳಲ್ಲಿ ಚಂದ್ರನ ಅಧ್ಯಯನಕ್ಕೆ ಇಸ್ರೋ ಕೈಗೊಳ್ಳುತ್ತಿರುವ 3ನೇ ಯಾತ್ರೆ ಇದು. 2008 ರಲ್ಲಿ ಚಂದ್ರನ ಕಕ್ಷೆಗೆ ನೌಕೆಯೊಂದನ್ನು ರವಾನಿಸಿ, ಮಾಹಿತಿ ಸಂಗ್ರಹವನ್ನು ಯಶಸ್ವಿಯಾಗಿ ಇಸ್ರೋ ನಡೆಸಿತ್ತು. 2019ರಲ್ಲಿ ಚಂದ್ರನ ಮೇಲೆ ನೌಕೆ ಇಳಿಸುವ ಚಂದ್ರಯಾನ-೨ ಸಾಹಸವನ್ನು ಇಸ್ರೋ ಕೈಗೊಂಡಿತಾದರೂ, ಚಂದ್ರನ ಅಂಗಳ ಪ್ರವೇಶಿಸುವ ಸಂದರ್ಭದಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದರಿಂದ ಹಿನ್ನಡೆಯಾಗಿತ್ತು. ಆಗ ಆದ ವೈಫಲ್ಯಗಳಿಂದ ಪಾಠ ಕಲಿತಿರುವ ವಿಜ್ಞಾನಿಗಳು, ಹಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸುಮಾರು 600 ಕೋಟಿ ರೂ ವೆಚ್ಚದಲ್ಲಿ 'ಚಂದ್ರಯಾನ-3' ಕೈಗೊಂಡಿದ್ದಾರೆ. ಹಾಲಿವುಡ್ ಸಿನಿಮಾಗಳಿಗೆ ಮಾಡುವ ಖರ್ಚಿಗಿಂತ ಕಡಿಮೆ ಬಂಡವಾಳ ಇದಾಗಿದೆ ಎಂಬುದು ವಿಶೇಷ. ಈ ನೌಕೆಯಲ್ಲಿ ವಿಕ್ರಮ್ ಲ್ಯಾಂಡರ್, 'ಪ್ರಗ್ಯಾನ್' ರೋವರ್ ಹಾಗೂ ಪ್ರೊಪಲ್ಸನ್ ಮಾಡ್ಯುಲ್ ಗಳು ಇವೆ.
ಭೂಮಿಯ 14 ದಿನಗಳು ಚಂದ್ರನ 1 ದಿನಕ್ಕೆ ಸಮ. ರೋವರ್ 1 ಚಂದ ದಿನ' (14 ಭೂಮಿ ದಿನ)ಗಳ ಕಾಲ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು ಹಲವು ಅಧ್ಯಯನ ನಡೆಸಲಿದೆ.
ರಾಕೆಟ್ ನಭಕ್ಕೆ ನೆಗೆಯುತ್ತಿದ್ದಂತೆಯೇ ಶಿಳ್ಳೆ, ಕೇಕೆಗಳ ಮೇಳ ! ವಾಹಕದ ಕಂಪನದಿಂದ ದೇಶಪ್ರೇಮದ ಸಂಚಲನ
ನೋಡುಗರಿಗೆ ಚಂದ್ರಯಾನ -3 ರೋಮಾಂಚ :
ಶ್ರೀಹರಿಕೋಟಾ ಕಳೆದುಕೊಂಡಿದ್ದನ್ನು ಕಳೆದ ಸ್ಥಳದಲ್ಲಿ ಮತ್ತೆ ಹುಡುಕಬೇಕು. ಆಗಲೇ ಅದು ಸಿಕ್ಕಲು ಸಧ್ಯ ಎಂಬ ನಾಣ್ಣುಡಿಯಂತೆ ಅದನ್ನು ನಿಜವಾಗಿಸುವ ಪ್ರಯತ್ನ ಚಂದ್ರಯಾನ -3......
ನಾಲ್ಕು ವರ್ಷಗಳ ನಂತರ ಭಾರತ ಮತ್ತೆ ತನ್ನ ಪ್ರಯತ್ನ ಮುಂದುವರೆಸಿ ಜೂಲೈ 14ರ ಶುಕ್ರವಾರ ಚಂದಿರನ ಚುಂಬನಕ್ಕೆ ವಿಕ್ರಮ್ ಹೆಸರಿನ ಲ್ಯಾಂಡರ್ ಮತ್ತು ಪ್ರಗ್ಯಾನ್ ಹೆಸರಿನ ರೋವರ್ ಹೊತ್ತ ಎಲ್ ವಿ ಎಮ್-3 ರಾಕೆಟ್ ಸೆಕೆಂಡಿಗೆ 9.25 ಕಿ ಮೀ ವೇಗದಲ್ಲಿ ನಭಕ್ಕೆ ಹಾರಿತು.
ಐತಿಹಾಸಿಕ ದಿನಕ್ಕೆ ಸಾಕ್ಷಿಯಾದ ಜನಸಾಗರ: ಉಡ್ಡಯನದ ತಯಾರಿಯಾಗಿ ದಿನಾಂಕ ಖಾತ್ರಿಯಾದ ನಂತರ ಉಡ್ಡಯನ ನೇರವಾಗಿ ವೀಕ್ಷಿಸಲು ಆನ್ಲೈನ್ ನೋಂದಣಿ ಮಾಡುವಂತೆ ಕೋರಿತ್ತು. ಈ ಸುತ್ತೋಲೆ ಬಂಡ ಎರಡೇ ಗಂಟೆಗಳಲ್ಲಿ ಸಂಪೂರ್ಣವಾಗಿದ್ದು ಅಚ್ಚರಿ. ಇದಕ್ಕಿಂತಲೂ ಅಚ್ಚರಿ ಏನೆಂದರೆ ಈ ಬಾರಿ ಚಂದ್ರಯಾನ-3ರ ಉಡ್ಡಯನಕ್ಕೆ 14ರಿಂದ 20 ಸಾವಿರ ಜನ ಸಾಕ್ಷಿಯಾಗಿದ್ದು, ಸಾರ್ವಜನಿಕರ ವೀಕ್ಷಣೆಗೆಂದು ತೆರೆದ ಗ್ಯಾಲರಿ ಇದ್ದು, ಅಲ್ಲಿ ಎಲ್ಲ ಪಾಸ್ ಹೊಂದಿದ ಜನರಿಗೂ ಕುಳಿತು ನೋಡುವ ಅವಕಾಶ ಒದಗಿಸಿತ್ತು. ಈ ಬಾರಿ ಬೇರೆ ಉಪಗ್ರಹ ಉಡ್ಡಯನಕ್ಕೆ ಸೇರುತ್ತಿದ್ದ ಜನರಿಗಂತಲೂ ಮೂರ್ನಾಲ್ಕು ಪಟ್ಟು ಹೆಚ್ಚು ಜನಸಂದಣಿ ಇತ್ತು.
ಜನರ ಉತ್ಸಾಹ ಇಮ್ಮಡಿಸಿದ ಇಸ್ರೋ ಉದ್ಯೋಗಿಗಳು :
ವೀಕ್ಷಕರನ್ನು ನೀರಸವಾಗಿ ಬಿಡದೆ ಅಲ್ಲಿನ ಕೆಲವು ನಿರೂಪಕರು ವಿದ್ಯಾರ್ಥಿಗಳಿಂದ, ಬೇರೆ ಭಾಗಗಳಿಂದ ಆಗಮಿಸಿದ್ದ ಜನರ ಅಭಿಪ್ರಾಯ ಕೇಳಿ, ಜೈಕಾರಗಳನ್ನು ಹಾಕಿಸಿ ಜನರಲ್ಲಿ ಉತ್ಸಾಹ ತುಂಬಿದರು ಈ ಉಡ್ಡಯನ ವೀಕ್ಷಿಸಲು ಆಂಧ್ರ, ಕರ್ನಾಟಕ ಪಂಜಾಬ್ ಸೇರಿದಂತೆ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಕುತೂಹಲಿಗಳು ಆಗಮಿಸಿದ್ದು ವಿಶೇಷ.