ಯೋಜನೆ 2 ತಿಂಗಳು ಪೂರ್ಣ ರೂ 854 ಕೋಟಿ ಆದಾಯ |
ಶಕ್ತಿಯಿಂದ ಸಾರಿಗೆ ನಿಗಮ ಸಶಕ್ತ :
ರಾಜ್ಯದ ಮಹಿಳೆಯರಿಗೆ ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವ ಶಕ್ತಿಯೋಜನೆ' ಜಾರಿಯಾಗಿ ಆಗಸ್ಟ್ 11ಕ್ಕೆ ಎರಡು ತಿಂಗಳಾಗಿದ್ದು, ಇದುವರೆಗೂ 36.82 ಕೋಟಿ ಮಹಿಳೆಯರು ಈ ಯೋಜನೆಯ ಸದುಪಯೋಗಪಡಿಸಿಕೊಂಡಿದ್ದು, ಮಹಿಳೆಯರ ಟಿಕೆಟ್ ಗೆ 854.44 ಕೋಟಿ ರೂ ವೆಚ್ಚವಾಗಿದೆ.
ಜೂನ್ 11 ರಂದು ವಿಧಾನಸೌಧ ಮುಂದೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ' ಶಕ್ತಿ ಯೋಜನೆಗೆ ಚಾಲನೆ ನೀಡಿದ್ದರು. ಜೂನ್ 11 ರಿಂದ ಆಗಸ್ಟ್ ೧೦10ರವರೆಗೆ ಒಟ್ಟು 36,82,87,475 (36 ಕೋಟಿ) ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದೂ ಇದಕ್ಕೆ ತಗಲಿರುವ ಟಿಕೆಟ್ ವೆಚ್ಚ 8,54,44,01,276 (854 ಕೋಟಿ) ಆಗಿದೆ. ಶಕ್ತಿ ಯೋಜನೆಯಡಿ ಜೂನ್ ನಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ ಟಿಕೆಟ್ ವಚ್ಚ 70 ಕೋಟಿ ರೂ ಗಳನ್ನೂ ರಾಜ್ಯ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಉಳಿದ 784 ಕೋಟಿ ಟಿಕೆಟ್ ಮೊತ್ತವನ್ನು ರಾಜ್ಯ ಸರ್ಕಾರ ಪಾವತಿಸಬೇಕಾಗಿದೆ.
ಅಂತಿಮವಾಗದ ಗೃಹಲಕ್ಷ್ಮಿ ಚಾಲನೆ ದಿನ :
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ' ಯೋಜನೆಗೆ ಬೆಳಗಾವಿಯಲ್ಲಿ ಆಗಸ್ಟ್ 27 ಅಥವಾ 30 ರಂದು ಚಾಲನೆ ನೀಡಲಾಗುತ್ತಿದ್ದು, 1 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು. ಕಾರ್ಯಕ್ರಮದ ಸ್ಥಳ ಅಂತಿಮಗೊಂಡಿಲ್ಲ. ಲಕ್ಷಕ್ಕೂ ಅಧಿಕ ಜನರು ಭಾಗವಹಿಸುತ್ತಿರುವ ಹಿನ್ನಲೆಯಲ್ಲಿ ದೊಡ್ಡ ಮೈದಾನ ವೀಕ್ಷಣೆ ನಡೆಸುತ್ತಿದ್ದೇವೆ. ಇನ್ನೆರಡು ದಿನದಲ್ಲಿ ಸ್ಥಳ ಅಂತಿಮಗೊಳಿಸಾಲಾಗುವುದು ಎಂದರು.
ಶಕ್ತಿ ಪಾಸ್ ವಿತರಣೆ ?
ಶಕ್ತಿ ಯೋಜನೆಗೆ' ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ಬದಲಿಗೆ ಸಾಮಾನ್ಯ ಬಸ್ ಪಾಸ್ ಗಳನ್ನು ಹೋಲುವ ಶಕ್ತಿ ಪಾಸ್ ಗಳನ್ನು ನೀಡಲು ನಾಲ್ಕು ಸಾರಿಗೆ ನಿಗಮಗಳು ನಿರ್ಧರಿಸಿವೆ ತಿಳಿದುಬಂದಿದೆ. ಸ್ಮಾರ್ಟ್ ಕಾರ್ಡ್ ಅಭಿವೃದ್ಧಿಪಡಿಸಿವೆ. ಸಂಪರ್ಕಿಸಲಾದ ಸೆಂಟರ್ ಫಾರ್ ಇ-ಗವರ್ನನ್ಸ್ ಪ್ರಸ್ತಾವನೆಯನ್ನು ನಿರಾಕರಿಸಿದೆ. ಹೀಗಾಗಿ ಸಾಮಾನ್ಯ ಬಸ್ ಪಾಸನ್ನೆ ನೀಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Tags
Govt.scheme