27 ರಂದು 11 ಸಾವಿರ ಕಡೆ ಗೃಹಲಕ್ಷ್ಮಿ ಚಾಲನೆ!!
ಕಾಂಗ್ರೆಸ್ ಸರ್ಕಾರದ 4 ನೇ ಗ್ಯಾರಂಟಿ 'ಗೃಹಲಕ್ಷ್ಮಿ' ಯೋಜನೆಗೆ ಆಗಸ್ಟ್ 27 ರಂದು ರಾಜ್ಯದ 11 ಸಾವಿರ ಕಡೆ ಏಕಕಾಲಕ್ಕೆ ಚಾಲನೆ ನೀಡಲು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆದಿದೆ. ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಷ್ಟೀಯ ನಾಯಕರನ್ನು ಆಹ್ವಾನಿಸಲಾಗುತ್ತಿದೆ. ವಿಕಾಸಸೌಧದಲ್ಲಿ ಗುರುವಾರ ಎಲ್ಲ ಜಿಲ್ಲಾಡಳಿತಗಳ ಜತೆ ವಿಡಿಯೋ ಸಂವಾದ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ ಯೋಜನೆಯ ಗ್ಯಾರಂಟಿ ಕಾರ್ಡ್ ಮತ್ತು ಸರ್ಕಾರದ ಪತ್ರವನ್ನು ಅರ್ಹ ಫಲಾನುಭವಿಗಳ ಮನೆಗೆ ನೀಡಬೇಕು ಎಂದು ಸೂಚಿಸಿದರು.
ಇಡೀ ದೇಶದಲ್ಲಿ 35 ಸಾವಿರ ಕೋಟಿ ರೂ. ಗಳನ್ನು ಒಂದು ಯೋಜನೆಗೆ ವೆಚ್ಚಮಾಡುತ್ತಿರುವುದು ಕರ್ನಾಟಕ ಸರ್ಕಾರ ಮಾತ್ರ. ಆದ್ದರಿಂದ ಈ ಯೋಜನೆಯನ್ನು ಪ್ರತಿ ಮನೆಯ ಯಜಮಾನಿಗೆ ತಲುಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಗ್ರಾಪಂ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಯೋಜನೆಯಲ್ಲಿ ಬಳಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಬೇಕು. ಪಂಚಾಯಿತಿಗೊಬ್ಬ ನೋಡಲ್ ಅಧಿಕಾರಿ ನೇಮಕ ಮಾಡಿ ಪ್ರಗತಿ ಪರಿಶೀಲನೆ ಮಾಡಬೇಕುಎಂದು ಡಿಕೆಶಿ ಸೂಚಿಸಿದರು.
ನೋಂದಣಿ ನಿರಂತರ :
ಸಭೆ ಬಳಿಕ ಡಿಸಿಎಂ ಮಾತನಾಡಿ ಸಂಪುಟದಲ್ಲಿ ವ್ಯಕ್ತವಾದ ಸಲಹೆ ಮೇರೆಗೆ ಉದ್ಘಾಟನೆ ದಿನವನ್ನು ಬದಲಿಸಲಾಗಿದ್ದು, ಬೆಳಗಾವಿಯಲ್ಲಿ ಆಗಸ್ಟ್. 27 ರಂದು ಚಾಲನೆ ನೀಡಲಾಗುವುದು ಎಂದರು. ಕಾರ್ಯಕ್ರಮ ಭಾನುವಾರ ನಡೆಯಲಿದ್ದು, ಶಾಲೆಗಳು, ಅಂಗನವಾಡಿ, ಗ್ರಾಪಂ ಸಮುದಾಯ ಭವನ ಮತ್ತಿತರ ಕಡೆಯಲ್ಲಿ ಸಮಾರಂಭ ನಡೆಸಲು ತಿಳಿಸಲಾಗಿದೆ. ಆಯಾ ಕ್ಷೇತ್ರದ ಶಾಸಕರು ಅವರಿಗೆ ಅನುಕೂಲವಾದ ಕಡೆ ಉದ್ಘಾಟನೆಯಲ್ಲಿ ಭಾಗವಹಿಸಬಹುದಾಗಿದೆ. ಪ್ರಕ್ಷಾತೀತವಾಗಿ ಕಾರ್ಯಕ್ರಮ ನಡೆಯಲಿದೆ ಎಂದರು. ರಾಜ್ಯದ 1.05 ಕೋಟಿ ಯಜಮಾನಿಯರಿಗೆ ಈ ಯೋಜನೆ ತಲುಪಲಿದೆ. ನೋಂದಣಿ ಪ್ರಕ್ರಿಯೆ ನಿರಂತರವಾಗಲಿದೆ ಎಂದು ತಿಳಿಸಿದರು
ಸಚಿವರಿಗೆ ಟಾಸ್ಕ್ "