ಅನ್ನಭಾಗ್ಯ ಯೋಜನೆ: ಆಗಸ್ಟ್ ತಿಂಗಳ ಹಣ ಖಾತೆಗೆ ಜಮಾ ।। ಚೆಕ್ ಮಾಡುವ ವಿಧಾನ ಇಲ್ಲಿದೆ....
ಅನ್ನಭಾಗ್ಯ ಯೋಜನೆ ಅಡಿ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬದ ಸದಸ್ಯರಿಗೆ ಪ್ರಸ್ತುತ ವಿತರಿಸುತ್ತಿರುವ 5 ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿ ನೀಡುವುದಾಗಿ ಹೇಳಲಾಗಿತ್ತು. ಅಕ್ಕಿ ಲಭ್ಯವಾಗದ ಕಾರಣ ಪ್ರತಿ ವ್ಯಕ್ತಿಗೆ (5 ಕೆಜಿ ಅಕ್ಕಿ ದರ) ತಿಂಗಳಿಗೆ 170 ರೂ ಗಳಂತೆ ಕುಟುಂಬ ಸದಸ್ಯರ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಮಾಡುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಅಲ್ಲದೆ ಈಗಾಗಲೇ ಜೂಲೈ ತಿಂಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿ 5 ಕೆಜಿ ಅಕ್ಕಿಗೆ ಬದಲು ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ. ಈಗ ಆಗಸ್ಟ್ ತಿಂಗಳ ಹಣ ಜಮಾ ಆಗುವ ಸಮಯ. ಇದರಲ್ಲಿ ನಿಮ್ಮ ಹೆಸರು ಇದಿಯೋ ಇಲ್ಲವೋ ಚೆಕ್ ಮಾಡುವ ವಿಧಾನವನ್ನು ಇವತ್ತಿನ ಈ ಲೇಖನದಲ್ಲಿ ತಿಳಿಯಬಹುದು.

ಆಗಸ್ಟ್ ತಿಂಗಳ ಹಣ ಖಾತೆಗೆ ಜಮಾ ! ಸ್ಟೇಟಸ್ ಚೆಕ್ ಮಾಡುವ ಲಿಂಕ್
https://ahara.kar.nic.in/status2/status_of_dbt_new.aspx
ಮೇಲಿನ ಲಿಂಕ್ ನ ಮೂಲಕ ನಿಮ್ಮ ಖಾತೆಗೆ ಆಗಸ್ಟ್ ತಿಂಗಳ ಹಣ ಜಮಾ ಆಗಿದಿಯ ಎಂಬುದನ್ನು ತಿಳಿಯಬಹುದಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೂ ಆಗಸ್ಟ್ ತಿಂಗಳನ್ನು ಆಯ್ಕೆ ಮಾಡು ನಿಮ್ಮ ಪಡಿತರ ಚೀಟಿಯ ಸಂಖ್ಯೆ ನಮೂದಿಸಿ ಚೆಕ್ ಮಾಡಿ.

WhatsApp Group