ಸ್ವಾವಲಂಬನೆ ಸಾರಥಿ ಯೋಜನೆಯ ಅರ್ಜಿ ಸಲ್ಲಿಕೆಯು ಪ್ರಾರಂಭವಾಗಿದ್ದು, ಇಂದು ಈ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಈ ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ಪಡೆದ ಟ್ಯಾಕ್ಸಿ / ಸರಕು ವಾಹನಗಳನ್ನು ಖರೀದಿಸಲು ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ 50 ರಷ್ಟು ಅಥವಾ ಗರಿಷ್ಟ ರೂ 3 ಲಕ್ಷ ವರೆಗೆ ಪ್ರಯಾಣಿಕರ ಆಟೋ ರಿಕ್ಷಾ ಖರೀದಿಸಲು ಗರಿಷ್ಟ ರೂ 75,000 ಸಹಾಯಧನ ನೀಡಲಾಗುತ್ತದೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕು.
ಸ್ವಾವಲಂಬಿ ಯೋಜನೆಗೆ ಬೇಕಾದ ಅರ್ಹತೆಗಳು:
★ ಕರ್ನಾಟಕ ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದವರಾಗಿರಬೇಕು.
★ ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು.
★ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
★ ಎಲ್ಲಾ ಮೂಲಗಳಿಂದ ಬರುವ ವಾರ್ಷಿಕ ಕುಟುಂಬದ ಆದಾಯವು ರೂ 4.5 ಲಕ್ಷ ಕ್ಕಿಂತ ಕಡಿಮೆ ಇರಬೇಕು.
★ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ನೀಡಲಾದ ಚಾಲನಾ ಪರವಾನಗಿ ಹೊಂದಿರಬೇಕು.
★ ಕುಟುಂಬದ ಯಾವುದೇ ಸದಸ್ಯರು ಕೇಂದ್ರ /ರಾಜ್ಯ ಸರ್ಕಾರೀ ಉದ್ಯೋಗಿಯಾಗಬಾರದು.
★ ಕಳೆದ 05 ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ /ಅವಳ ಕುಟುಂಬದ ಸದಸ್ಯರು ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸುಳಭ್ಯ ಪಡೆದಿರಬಾರದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 25 ಆಗಿದ್ದು ಕೂಡಲೇ ಅರ್ಹ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು :
👉 ಅರ್ಜಿದಾರರ ಫೋಟೋ
👉 ಮೊಬೈಲ್ ನಂಬರ್
👉 ಜಾತಿ / ಅಲ್ಪಸಂಖ್ಯಾತ ಪ್ರಮಾಣಪತ್ರ
👉 ಆದಾಯ ಪ್ರಮಾಣಪತ್ರ
👉 ಆಧಾರ್ ಕಾರ್ಡ್ ಪ್ರತಿ
👉 ವಾಹನ ಚಾಲಾನಾ ಪರವಾನಿಗೆ ಪ್ರತಿ
👉 ಬ್ಯಾಂಕ್ ಪಾಸ್ಸ್ಬುಕ್
👉 ವಾಹನದ ಅಂದಾಜು ದರಪಟ್ಟಿ
👉 ಸ್ವಯಂ ಘೋಷಣೆ ಪತ್ರ
Tags
Govt.scheme