ಈ ಲೇಖನದಲ್ಲಿ ಐರಾವತ ಯೋಜನೆ' ಯ ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ.
ನಿಗಮದಿಂದ ಲಘು ವಾಹನ ಚಾಲನಾ ಪರವಾನಿಗೆ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ನಿರುದ್ಯೋಗಿ ವಿದ್ಯಾವಂತ ಯುವಕ/ಯುವತಿಯರಿಗೆ ಈ 'ಐರಾವತ ಯೋಜನೆ' ಯು ಸಹಾಯವಾಗಲಿದೆ. ಈ ಯೋಜನೆಗೆ ಹೆಚ್ಚಿನ ಬೇಡಿಕೆ ಇದೆ.
ಈ ಯೋಜನೆಯಡಿ ಗರಿಷ್ಟ ರೂ 5 ಲಕ್ಷಗಳವರೆಗೆ ನಿಗಮದಿಂದ ಸಹಾಯಧನ ಒದಗಿಸಲಾಗುವುದು. ಉಳಿದ ಭಾಗ ಬ್ಯಾಂಕ್/ಹಣಕಾಸು ಸಂಸ್ಥೆ/ಫಲಾನುಭವಿಯ ವಂತಿಕೆಯಿಂದ ಭರಿಸಿ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು.
ಆಯ್ಕೆಯಾದ ಫಲಾನುಭವಿಗಳಿಗೆ "ಓಲಾ/ಉಬರ್/ಮೇರು' ಸಂಸ್ಥೆಯೊಂದಿಗೆ ಟೈ-ಆಫ್ ಮಾಡಿಕೊಂಡು ಬೇಡಿಕೆ ಇರುವ ಮುಖ್ಯ ನಗರ ಪ್ರದೇಶಗಳಾದ ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ ಇನ್ನಿತರೇ, ಜಿಲ್ಲಾ ಕೇಂದ್ರಗಳಲ್ಲಿ ವಾಹನ ಚಾಲನೆ ಮಾಡಲು ವ್ಯವಸ್ಥೆ ಮಾಡಿ, ಯೋಜನೆಯನ್ನು ರೂಪಿಸಲಾಗಿದೆ,
"ಯೋಜನೆಗೆ ಸಂಬಂಧಿಸಿದ ನಿಯಮಗಳು:
1. "ಓಲಾ / ಉಬರ್/ ಮೇರು " ಸಂಸ್ಥೆಗಳೊಂದಿಗೆ ಟೈ-ಆಫ್ ಮಾಡಿಕೊಂಡು ಸೌಲಭ್ಯ ಪಡೆಯಲು ಬದ್ಧರಿರಬೇಕು.
2. ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಿರಬೇಕು.
3. ಆಯ್ಕೆಯಾದ ಫಲಾನುಭವಿಯು "ಓಲಾ/ಉಬರ್/ಮೇರು" ಸಂಸ್ಥೆಯಿಂದ ಟ್ಯಾಕ್ಸಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಬಗ್ಗೆ ಜ್ಞಾನವನ್ನು ಪಡೆಯುವ ಕಾರ್ಯಕ್ರಮಕ್ಕೆ ಹಾಜರಾಗಬೇಕು.
4. ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಸೌಲಭ್ಯ ಪಡೆದವರು ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಲ್ಲ.
ಯೋಜನೆಗೆ ಬೇಕಾದ ಅರ್ಹತೆಗಳು:
✔ ಅರ್ಜಿದಾರರು ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರಾಗಿರಬೇಕು.
✔ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
✔ ಅರ್ಜಿದಾರರು 21 ವರ್ಷದಿಂದ 50 ವರ್ಷದವರೆಗಿನ ವಯೋಮಾನದವರಾಗಿರಬೇಕು.
✔ ಲಘು ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು.
✔ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 5,00,000/- ಮಿತಿಯೊಳಗಿರಬೇಕು.
✔ ಅರ್ಜಿದಾರರು/ಕುಟುಂಬದ ವಾರ್ಷಿಕ ವರಮಾನವು ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮ/ಸರ್ಕಾರದಿಂದ ರೂ 1,00,000/- ಮೇಲ್ಪಟ್ಟು ಸೌಲಭ್ಯ ಪಡೆದಿದ್ದಲ್ಲ, ಅಂತಹ ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.
ಈ ವಂದು ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ಇರಬೇಕು. ಅರ್ಜಿ ಸಲ್ಲಿಸುವ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುತ್ತದೆ. ಜೊತೆಗೆ ಕೊನೆಯ ದಿನಾಂಕ ಕೂಡ ನಿಗದಿ ಮಾಡಲಾಗುತ್ತದೆ.
Tags
Govt.scheme

WhatsApp Group