ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ತಿಳಿಯೋಣ ಶಾಲಾ ಕಾಲೇಜು ವಿದ್ಯಾರ್ಥಿವೇತನಗಳಿಗೆ ನೆರವು ನೀಡುವ ವಿದ್ಯಾರ್ಥಿವೇತನ ಕುರಿತಾದ ಸಂಪೂರ್ಣ ಮಾಹಿತಿಯನ್ನು..
ಇಂದಿನ ಸ್ಪರ್ಧಾತ್ಮಕ ಹಾಗೂ ವ್ಯಾಪಾರೀಕರಣಗೊಂಡಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನೇಕ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ವೆಚ್ಚ ಭರಿಸುವುದು ಸಾಧ್ಯವಾಗದ ಕಾರಣ ತಮ್ಮ ಕಲಿಕೆಯನ್ನು ಅರ್ಧದಲ್ಲಿಯೇ ಬಿಡುವಂತಾಗುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಿ ಬೆಂಬಲ ನೀಡಲು ಇಂತಹ ವಿದ್ಯಾರ್ಥಿವೇತನ ಅನುಕೂಲವಾಗುತ್ತವೆ.
ಟಾಟಾ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ :
ಟಾಟಾ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ವತಿಯಿಂದ ನೀಡಲಾಗುವ ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್ ಶಿಪ್ 2023 ಕಾರ್ಯಕ್ರಮದ ಅಡಿಯಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅವರ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ಹಣಕಾಸಿನ ನೆರವು ನೀಡಿ ಶಿಕ್ಷಣ ಬೆಂಬಲ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ 1 ರಿಂದ 12 ನೇ ತರಗತಿ ಮತ್ತು ಪದವಿ ಕೋರ್ಸ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವೆಚ್ಚಗಳನ್ನು ಬಾರಿಸಲು ಮತ್ತು ವೃತ್ತಿ ಕೌನ್ಸಿಲಿಂಗ್ ಮತ್ತು ಲೈಫ್ ಸ್ಕಿಲ್ಸ್ ನಂತಹ ಹೆಚ್ಚುವರಿ ಮೌಲ್ಯವರ್ಧಿತ ಸೇವೆಗಳನ್ನು ಪಡೆಯಲು 60,000 ರೂ ವರೆಗಿನ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
1 ರಿಂದ 8 ನೇ ತರಗತಿ :
1 ರಿಂದ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 18,000 ರೂ ಸ್ಕಾಲರ್ ಶಿಪ್ ಪ್ರಯೋಜನ ಪಡೆಯಬಹುದು.
9 ರಿಂದ 12ನೇ ತರಗತಿ :
9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ 24 ಸಾವಿರ ಸ್ಕಾಲರ್ ಶಿಪ್ ಪಡೆಯಬಹುದು.
ಪದವಿ ಓದುತ್ತಿರುವವರಿಗೆ :
👉 ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಕಾಲೇಜು/ವಿಶ್ವವಿದ್ಯಾಲಯಗಳಿಂದ ಯಾವುದೇ ಸಾಮಾನ್ಯ ಪದವಿ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಅಂದರೆ
👉 ಸಾಮಾನ್ಯ ಪದವಿ ಕೊರ್ಡ್ ಗಳಲ್ಲಿ ಓದುತ್ತಿರುವವರಿಗೆ 36 ಸಾವಿರ
👉 ವೃತ್ತಿಪರ ಕೋರ್ಸ್ ಗಳಲ್ಲಿ ಅಧ್ಯಯನ ಮಾಡುತ್ತಿರುವವರಿಗೆ (ಸಾಮಾನ್ಯ ಪದವಿ ಕೋರ್ಸ್) 60 ಸಾವಿರ ರೂಪಾಯಿಗಳು
ವಿದ್ಯಾರ್ಥಿಗಳು ಹೊಂದಿರಬೇಕಾದ ಅರ್ಹತೆ :
🌟 ಅರ್ಜಿದಾರರು ತಮ್ಮ ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು.
🌟 ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 6 ಲಕ್ಷ ರೂ ಮೀರಬಾರದು.
🌟 ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್ ಮತ್ತು ಅದರ ಅಂಗಸಂಸ್ಥೆಗಳ ಮಕ್ಕಳು ಅರ್ಹರಲ್ಲ.
ಅಗತ್ಯ ದಾಖಲೆಗಳು:
✔ ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಫೋಟೋ
✔ ಹಿಂದಿನ ತರಗತಿಯ ಮಾರ್ಕ್ ಕಾರ್ಡ್
✔ ಸರ್ಕಾರ ನೀಡುವ ಗುರುತಿನ ಚೀಟಿ (ಆಧಾರ್ ಕಾರ್ಡ್/ ವೋಟರ್ ಕಾರ್ಡ್/ಚಾಲನಾ ಪರವಾನಿಗಿ)
✔ ಪ್ರಸಕ್ತ ವರ್ಷದ ಪ್ರವೇಶ ಪುರಾವೆ(ಶುಲ್ಕ ರಶೀದಿ/ಪ್ರವೇಶ ಪತ್ರ/ ಸಂಸ್ಥೆಯ ಗುರುತಿನ ಚೀಟಿ/)
✔ ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು ಅಥವಾ (ಪೋಷಕರ ಬ್ಯಾಂಕ್ ಖಾತೆ ವಿವರ)
✔ ಆದಾಯ ಪ್ರಮಾಣಪತ್ರ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2023 ಆಗಿದೆ.. ಕೂಡಲೇ ಎಲ್ಲ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿ.
Tags
Scholarship
Nitish Kumar Popti
ಪ್ರತ್ಯುತ್ತರಅಳಿಸಿ