ಈ ಯೋಜನೆಯನ್ನು ಮುಖ್ಯವಾಗಿ ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಆರಂಭ ಮಾಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಸತ್ತು ಸಮಿತಿ ಸಭೆಯಲ್ಲಿ ಹೊಸದಾದ ಕೇಂದ್ರ ಸರ್ಕಾರದ ಯೋಜನೆ ಪಿಎಂ ವಿಶ್ವಕರ್ಮ'ಕ್ಕೆ ಅನುಮೋದನೆ ನೀಡಲಾಗಿದೆ. ಹಣಕಾಸು ವರ್ಷ 2023-24 ಹಣಕಾಸು ವರ್ಷ 2027-28ರ ಐದು ವರ್ಷಗಳ ಅವಧಿಯ 13,000 ಕೋಟಿ ರೂಪಾಯಿಯ ಯೋಜನೆ ಇದಾಗಿದೆ.
ಉದ್ದೇಶ :
"ಕುಶಲಕರ್ಮಿಗಳು ಮತ್ತು ಕಲೆಗಾರರು ತಮ್ಮ ಕೈ ಮತ್ತು ಉಪಕರಣಗಳೊಂದಿಗೆ ಕೆಲಸ ಮಾಡುವ ಗುರು-ಶಿಷ್ಯ ಪರಂಪರೆ ಅಥವಾ ಕುಟುಂಬ ಆಧಾರಿತ ಸಾಂಪ್ರದಾಯಿಕ ಕೌಶಲ್ಯಗಳನ್ನು ಬಲಪಡಿಸುವ ಮತ್ತು ಪೋಷಿಸುವ ಗುರಿಯನ್ನು ಈ ಯೋಜನೆಯು ಹೊಂದಿದೆ" ಎಂದು ಸರ್ಕಾರವು ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವಕರ್ಮ ಯೋಜನೆ ಮಾಹಿತಿ:
'ಪಿಎಂ ವಿಶ್ವಕರ್ಮ' ಯೋಜನೆಯಡಿ ಕುಶಲಕರ್ಮಿಗಳು ಮತ್ತು ಕಲೆಗಾರರು ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ, 1 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಮತ್ತು 2 ಲಕ್ಷ ರೂಪಾಯಿ ಶೇಕಡಾ 5 ರಷ್ಟು ಬಡ್ಡಿ ದರದಲ್ಲಿ ಪಡೆಯಲು ಸಾಧ್ಯವಾಗುತ್ತದೆ.
ಹೆಚ್ಚಿನ ಕಲೆ ಕಳೆಯಲು, ಬೇಕಾದ ವಸ್ತುಗಳಿಗೆ ಪ್ರೋತ್ಸಾಹ ನಿಧಿ, ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಮತ್ತು ಮಾರ್ಕೆಟಿಂಗ್ ಬೆಂಬಲವನ್ನು ಈ ಯೋಜನೆಯು ಒದಗಿಸುತ್ತದೆ. ಮಾಹಿತಿಯ ಪ್ರಕಾರ ಹದಿನೆಂಟು ಸಾಂಪ್ರದಾಯಿಕ ವಹಿವಾಟುಗಳನ್ನು ಈ ಪಿಎಂ ವಿಶ್ವಕರ್ಮ ಅಡಿಯಲ್ಲಿ ಒಳಗೊಳ್ಳುತ್ತದೆ.
ವಿಶ್ವಕರ್ಮ ಯೋಜನೆ ಬಗ್ಗೆ ಪ್ರಧಾನಿ ಮೋದಿ:
"ಮುಂದಿನ ದಿನಗಳಲ್ಲಿ, ನಾವು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಒಂದು ಯೋಜನೆಯನ್ನು ಪ್ರಾರಂಭಿಸುತ್ತೇವೆ. ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ, ವಿಶೇಷವಾಗಿ OBC ಸಮುದಾಯಕ್ಕೆ ಸೇರಿದವರಿಗೆ ಪ್ರಯೋಜನ ಲಭ್ಯವಾಗುತ್ತದೆ. ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಲಾಂಡ್ರಿ ಕಾರ್ಮಿಕರು, ಕ್ಷೌರಿಕರು ಮತ್ತು ಅಂತಹ ಕುಟುಂಬಗಳನ್ನು ವಿಶ್ವಕರ್ಮ ಯೋಜನೆ ಮೂಲಕ ಸಬಲೀಕರಣಗೊಳಿಸಲಾಗುವುದು. ಇದು ಸುಮಾರು 13-15 ಸಾವಿರ ಕೋಟಿ ರೂಪಾಯಿಗಳ ಹಂಚಿಕೆಯೊಂದಿಗೆ ಆರಂಭವಾಗುವ ಯೋಜನೆಯಾಗಿದೆ," ಎಂದು ಪ್ರಧಾನಿ ಹೇಳಿದ್ದಾರೆ.
ZED certificate ಪಡೆಯಲು ಸಹಾಯಕ '
ವಿಶ್ವಕರ್ಮ ಯೋಜನೆ ಪಡೆಯಲು ZED ಪ್ರಮಾಣ ಪತ್ರ ತುಂಬಾ ಸಹಾಯಕಾರಿಯಾಗಿದೆ. ಹೇಗೆ ಎಂಬುದು ತಿಳಿಯೋಣ ಬನ್ನಿ...
ZED ಪ್ರಯೋಜನಗಳು
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ :
ಅಂತಾರಾಷ್ಟ್ರೀಯ ಸಹಕಾರ (IC) ಸ್ಕೀಮ್ ಸ್ಟಾಲ್ ಶುಲ್ಕಗಳು ಗರಿಷ್ಟ 3.50 ರೂ ಲಕ್ಷಕ್ಕೆ ಒಳಪಟ್ಟಿರುತ್ತದೆ.
ಅಥವಾ
ಪಾವತಿಸಿದ ನಿಜವಾದ ಬಾಡಿಗೆ, ಯಾವುದು ಕಡಿಮೆ?
ಅಂತರಾಷ್ಟ್ರಿಯ ಸಹಕಾರ (IC) ಯೋಜನೆಯ ಆರ್ಥಿಕ ವರ್ಗದ ವಿಮಾನ ದರ ಗರಿಷ್ಟ 1.75/-ರೂ ಲಕ್ಷ ಅಥವಾ ಪಾವತಿಸಿದ ನಿಜವಾದ ದರ, ಯಾವುದು ಕಡಿಮೆಯೋ ಅದು ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ZED ಪ್ರಮಾಣೀಕೃತ MSME ಗಳಿಗೆ 85% ಗೆ ಹೆಚ್ಚಿದ ಗ್ಯಾರಂಟಿ ಕವರೇಜ್,
ZED ಪ್ರಮಾಣೀಕೃತ MSME ಗಳಿಗೆ ಗ್ಯಾರಂಟಿ ಶುಲ್ಕದ ಮೇಲೆ 10% ಹೆಚ್ಚುವರಿ ರಿಯಾಯಿತಿ / ವಿಶ್ರಾಂತಿ ಮತ್ತು ಅನೇಕ ಇತರ ಸೌಲಭ್ಯಗಳು .......
14 ವಿವಿಧ ಬ್ಯಾಂಕ್ ಗಳಿಂದ ಹಣಕಾಸಿನ ಸೌಲಭ್ಯಗಳು :
1. ಸಂಸ್ಕರಣಾ ಶುಲ್ಕದಲ್ಲಿ 25% ರಿಂದ 50% ರಿಯಾಯಿತಿ
2. ಬಡ್ಡಿದರದಲ್ಲಿ 0.5% ರಿಂದ 1% ವರೆಗೆ ಕಡಿತ ...
ಯಾವೆಲ್ಲ ಸಾಂಪ್ರದಾಯಿಕ ವಹಿವಾಟುಗಳು ಸೇರಿತ್ತವೆ.
👉 ಬಡಗಿ
👉 ದೋಣಿತಯಾರಕ
👉 ರಕ್ಷಾಕವಚ ತಯಾರಕ
👉 ಕಮ್ಮಾರ
👉 ಸುತ್ತಿಗೆ ಮತ್ತು ಇತರೆ ಸಾಮಗ್ರಿ ತಯಾರಿಕ
👉 ಅಕ್ಕಸಾಲಿಗರು
👉 ಮೂರ್ತಿ ಮಾಡುವ ಶಿಲ್ಪಿ, ಕಲ್ಲು ಒಡೆಯುವವ ನು
👉 ಚಮ್ಮಾರ, ಪಾದರಕ್ಷೆ ತಯಾರಕ
👉 ಗಾರೆ ಮೇಸ್ತ್ರಿ
👉 ಬುಟ್ಟಿ/ಚಾಪಿ/ಹಿಡಿಸೂಡಿ ತಯಾರಿಕರು, ಸೆಣಬು ನೇಕಾರರು
👉 ಗೊಂಬೆ ಮತ್ತು ಆಟಿಕೆ ತಯಾರಕ
👉 ಕ್ಷೌರಿಕ
👉 ಮಾಲೆ ತಯಾರಕ
👉 ದೋಬಿ ಅಥವಾ ಮಡಿವಾಳ
👉 ಟೈಲರ್
👉 ಮೀನಿನ ಬಲೆ ತಯಾರಕ
ಯೋಜನೆಯಡಿಯಲ್ಲಿ ಎರಡು ರೀತಿಯ ಕೌಶಲ್ಯ ಕಾರ್ಯಕ್ರಮಗಳು ಇರುತ್ತವೆ. ಮೂಲಭೂತ ಮತ್ತು ಸುಧಾರಿತವಾಗಿರುತ್ತದೆ. ಹಾಗೆಯೆ ಕೌಶಲ್ಯ ತರಬೇತಿ ಪಡೆಯುತ್ತಿರುವ ಫಲಾನುಭವಿಗಳಿಗೆ ದಿನಕ್ಕೆ 500 ರೂಪಾಯಿ ಸ್ಟೈಪಂಡ್ ಅನ್ನು ಸಹ ನೀಡಲಾಗುತ್ತದೆ. ಎಂದು ಸಚಿವ ಅಷ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಆಧುನಿಕ ಉಪಕರಣಗಳನ್ನು ಖರೀದಿಸಲು ಈ ಕುಶಲಕರ್ಮಿಗಳಿಗೆ 15,000 ರೂಪಾಯಿವರೆಗೆ ಬೆಂಬಲವನ್ನು ನೀಡಲಾಗುತ್ತದೆ. ಮೊದಲ ವರ್ಷದಲ್ಲಿ ಐದು ಲಕ್ಷ ಕುಟುಂಬಗಳು ಮತ್ತು 2024 ರಿಂದ 28 ರವರೆಗೆ ಐದು ವರ್ಷಗಲ್ಲಿ ಒಟ್ಟು 30 ಲಕ್ಷ ಕುಟುಂಬಗಳಿಗೆ ರಕ್ಷಣೆ ನೀಡಲಾಗುವುದು ಎಂದು ಕೂಡ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
Tags
Govt.scheme