ನಮಸ್ಕಾರ ಸ್ನೇಹಿತರೆ ..
ಇವತ್ತಿನ ಈ ಲೇಖನದಲ್ಲಿ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು ಎಂಬುದರ ಕುರಿತು ಜೊತೆಗೆ ಏನೆಲ್ಲಾ ದಾಖಲಾತಿಗಳು ಬೇಕು ಎಂದು ತಿಳಿದುಕೊಳ್ಳೋಣ ಬನ್ನಿ...
ಉದ್ದೇಶ :
2023-24 ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆಗಾಗಿ ಗ್ರಾಮೀಣ ಮಹಿಳಾ ಅಭ್ಯರ್ಥಿಗಳಿಂದ ವೆಬ್ ಸೈಟ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವೃತ್ತಿನಿರತ ಅಭ್ಯರ್ಥಿಗಳು ತಮ್ಮ ಕಸುಬನ್ನು ಮುಂದುವರೆಸಿಕೊಂಡು ಹೋಗಲು ಇಲಾಖಾ ಸೌಲಭ್ಯವನ್ನು ಪಡೆಯಲು ಇಚ್ಛಿಸಿದಲ್ಲಿ, ಅನುಬಂಧದಲ್ಲಿರುವ ಅರ್ಜಿ ಮಾಹಿತಿಯಂತೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿರಿ.
ಸಧ್ಯಕ್ಕೆ ಕೆಲವು ಜಿಲ್ಲೆಯಲ್ಲಿ ಮಾತ್ರ "ಉಚಿತ ಹೊಲಿಗೆ ಯಂತ್ರ" ಕ್ಕೆ ಅರ್ಜಿ ಸಲ್ಲಿಕೆ ಆಫ್ ಲೈನ್ ಮತ್ತು ಆನ್ಲೈನ್ ಮೂಲಕ ಪ್ರಾರಂಭವಾಗಿದೆ.
ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ, ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ, ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ ಯೋಜನೆಯಡಿ ಸಹಾಯಧನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
ಕಲಬುರಗಿ - ಅರ್ಜಿ ಸಲ್ಲಿಕೆ ದಿನಾಂಕ ಸೆಪ್ಟೆಂಬರ್ 01 ರಿಂದ ಸೆಪ್ಟೆಂಬರ್ 30 ರವರೆಗೆ
ಬೀದರ್ - ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 18 ರವರೆಗೆ ಕಾಲಾವಕಾಶ
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲಾತಿಗಳು:
✶ ಅರ್ಜಿದಾರರ ಆಧಾರ್ ಕಾರ್ಡ್
✶ ಪಾಸ್ಪೋರ್ಟ್ ಸೈಜ್ ಫೋಟೋ
✶ ಮೊಬೈಲ್ ನಂಬರ್
✶ ಹೊಲಿಗೆ ತರಬೇತಿ ಪಡೆದ ಪ್ರಮಾಣಪತ್ರ
✶ ಜಾತಿ ಪ್ರಮಾಣಪತ್ರ
✶ ಆದಾಯ ಪ್ರಮಾಣಪತ್ರ
✶ ರೇಷನ್ ಕಾರ್ಡ್, ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್
✶ ನಿರ್ಗತಿಕ ವಿಧವೆ ಪ್ರಮಾಣಪತ್ರ (ಅನ್ವಯಿಸಿದರೆ)
✶ ವಿಕಚೇತನ್ರ ಪ್ರಮಾಣಪತ್ರ (ಅನ್ವಯಿಸಿದರೆ)
✶ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ಧೃಢೀಕರಣ ಪತ್ರ/ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ
Tags
Govt.scheme

WhatsApp Group