ಈಗಾಗಲೇ ರಾಜ್ಯಾದ್ಯಂತ ಕೃಷಿ ಮತ್ತು ಕಂದಾಯ ಇಲಾಖೆಯಿಂದ ರೈತರಿಗೆ FID ಮಾಡಿಕೊಳ್ಳಲು ಅಭಿಯಾನ ರೂಪದಲ್ಲಿ ಕಾರ್ಯಕ್ರಮ .ಇದರ ಜೊತೆಗೆ ಈ ಕುರಿತು ಮತ್ತೊಂದು ಪ್ರಕಟಣೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಹೊರಡಿಸಲಾಗಿದೆ.
ಈಗಾಗಲೇ ರಾಜ್ಯಾದ್ಯಂತ ಕೃಷಿ ಮತ್ತು ಕಂದಾಯ ಇಲಾಖೆಯಿಂದ ರೈತರಿಗೆ FID ಮಾಡಿಕೊಳ್ಳಲು ಅಭಿಯಾನ ಹೊಸ ಪ್ರಕಟಣೆಯ ಪ್ರಕಾರ FID ನಂಬರ್ ಅನ್ನು ರಚನೆ ಮಾಡಿಕೊಳ್ಳುವುದರ ಜೊತೆಗೆ ಈಗಾಗಲೇ ಈ ನಂಬರ್ ಅನ್ನು ಹೊಂದಿರುವ ರೈತರು ತಮ್ಮ ಎಲ್ಲಾ ಜಮೀನಿನ ಸರ್ವೇ ನಂಬರ್ ಅನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆಯ ಕೊರತೆಯಿಂದಾಗಿ ಬರ ಉಂಟಾಗಿದ್ದು ಬೆಳೆ ನಷ್ಟವಾಗಿರುವ ರೈತರು ಬೆಳೆ ನಷ್ಟ ಪರಿಹಾರಧನ ಪಡೆದುಕೊಳ್ಳಲು ತಮ್ಮ ಜಮೀನಿನ ಸಂಪೂರ್ಣ ವಿವರಗಳನ್ನು ಒಳಗೊಂಡ FRUITS ID ಹೊಂದಿರುವುದು ಕಡ್ಡಾಯವಾಗಿರುತ್ತದೆ.
ಬೆಳೆ ನಷ್ಟ ಪರಿಹಾರ ಅಪಡೆದುಕೊಳ್ಳಲು FRUITS ID ಗೆ ಎಲ್ಲ ಸರ್ವೇ ನಂಬರ್ ಗಳ ಜೋಡಣೆ ಕಡ್ಡಾಯ
FRUITS ತಂತ್ರಾಂಶದಲ್ಲಿ 3.73 ಲಕ್ಷ ಪಹಣಿಗಳ ಮಾಹಿತಿ ನೋಂದಾಯಿಸಲಾಗಿದ್ದು.ಉಳಿದ 1.43 ಲಕ್ಷ ಪಹಣಿಗಳ ಮಾಹಿತಿಯನ್ನು ರೈತರು ತುರ್ತಾಗಿ ನೋಂದಾಯಿಸಲು ಕೋರಿದೆ.
FID ಜೋಡಣೆ ಇನ್ನು ರಾಜ್ಯದಲ್ಲಿ ಶೇ 30 ಕ್ಕಿಂತ ಹೆಚ್ಚಿನ ಸೇರ್ಪಡೆ ಬಾಕಿ!!
ಹೌದು ಕೃಷಿ ಇಲಾಖೆಯ ಅಂಕಿ-ಅಂಶದ ಮಾಹಿತಿಯ ಪ್ರಕಾರ ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು ಲಭ್ಯವಿರುವ ಸರ್ವೇ ನಂಬರ್ ಗಳ ಪೈಕಿ ಇನ್ನು 30% ರಷ್ಟು ಜಮೀನಿನ ಸರ್ವೇ ನಂಬರ್ ಗಳನ್ನು ರೈತರು FID ಸೇರಿಸುವುದು ಬಾಕಿ ಇದೆ ಎನ್ನಲಾಗಿದೆ. ಈ ಕಾರಣ ರೈತರು ತಪ್ಪದೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಬಿಟ್ಟು ಹೋಗಿರುವ ಸರ್ವೇ ನಂಬರ್ ಅನ್ನು ಸೇರಿಸಿಕೊಳ್ಳಿ.
ರೈತರು FRUITS ID ಜೊತೆಗೆ ತಮ್ಮ ಹೆಸರಿನಲ್ಲಿರುವ ಎಲ್ಲ ಸರ್ವೇ ನಂಬರ್ ಗಳನ್ನೂ ಸೇರಿಸಿಕೊಳ್ಳದೆ ಇದ್ದಲ್ಲಿ ಪೂರ್ಣ ಪ್ರಮಾಣದಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರ ಸಿಗುವುದಿಲ್ಲ. ಕಾರಣ FRUITS ID ಹೊಂದಿರುವ ರೈತರು ಆಧಾರ್ ಕಾರ್ಡ್ ಹಾಗೂ ಉತರ್ ಹತ್ತಿರದ ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ ರೈತ ಸಂಪರ್ಕ ಕೇಂದ್ರಗಳು/ ಕಂದಾಯ ಲಾಖೆ / ತೋಟಗಾರಿಕೆ ಇಲಾಖೆ / ರೇಷ್ಮೆ ಇಲಾಖೆ/ ಪಶುಸಂಗೋಪನಾ ಇಲಾಖೆಗಳಿಗೆ ಭೇಟಿ ನೀಡಿ ತುರ್ತಾಗಿ ಬಾಕಿ ಇರುವ ಎಲ್ಲ ಜಮೀನುಗಳ ಸರ್ವೇ ನಂಬರ್ ಗಳನ್ನೂ fruits ತಂತ್ರಾಂಶದಲ್ಲಿ ಸೇರಿಸಿಕೊಳ್ಳಲು ಈ ಮೂಲಕ ಕೋರಿದೆ.
FID ಮಾಡಿಸಲು ಬೇಕಾಗುವ ದಾಖಲಾತಿಗಳು"
⇨ ಆಧಾರ್ ಕಾರ್ಡ್ ಪ್ರತಿ
⇨ ಪಹಣಿ ಪ್ರತಿ
⇨ ಬ್ಯಾಂಕ್ ಪಾಸ್ ಬುಕ್ ಪ್ರತಿ
⇨ ಮೊಬೈಲ್ ಸಂಖ್ಯೆ
⇨ ST / SC ಜಾತಿಗೆ ಸೇರಿದವರು ಜಾತಿ ಪ್ರಮಾಣ ಪತ್ರ
⇨ ಫೋಟೋ
ಜಂಟಿ ಖಾತೆದಾರರು ಇದ್ದಲಿ ಪ್ರತ್ಯೇಕವಾಗಿ FID ಮಾಡಿಸಿಕೊಳ್ಳಬೇಕು.
ಒಂದೊಮ್ಮೆ ನಿಮ್ಮ ಜಮೀನಿನ ಸರ್ವೇ ನಂಬರ್ ಜಂಟಿ ಮಾಲೀಕರನ್ನು ಹೊಂದಿದ್ದಾರೆ ಎಲ್ಲಾ ಮಾಲೀಕರ ದಾಖಲಾತಿಗಳನ್ನು ಸಲ್ಲಿಸಿ ಪ್ರತ್ಯೇಕವಾಗಿ ಒಂದೊಂದು FID ನಂಬರ್ ಅನ್ನು ರಚನೆ ಮಾಡಿಕೊಳ್ಳಬೇಕು. ಜಂಟಿ ಖಾತೆದಾರರು ಇದ್ದಲ್ಲಿ ಪ್ರತ್ಯೇಕವಾಗಿ FID ಮಾಡಿಸಿಕೊಳ್ಳಬೇಕು.
Tags
Govt.scheme