RTE ಕಾಯ್ದೆಯನ್ನು ಕರ್ನಾಟಕವು ಕೂಡ ಅಳವಡಿಸಿಕೊಂಡಿದೆ ಮತ್ತು ಈ ಕಾಯ್ದೆಯ ಗುರಿಯಂತೆ 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುತ್ತದೆ. RTE ಕಾಯ್ದೆ ಪ್ರಕಾರ ಎಲ್ಲಾ ಖಾಸಗಿ ಶಾಲೆಗಳಲ್ಲಿ 25% ರಷ್ಟು ಸೀಟುಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಮೀಸಲಿಡಬೇಕು, ಅದಕ್ಕೆ ತಗಲುವ ವೆಚ್ಚಕ್ಕೆ ಸರ್ಕಾರದಿಂದ ಆರ್ಥಿಕ ಸಹಾಯವನ್ನು ಪಡೆಯಬಹುದು.
ಅಂತೆಯೇ 2024-25 ಶೈಕ್ಷಣಿಕ ಸಾಲಿನ RTE ಸೀಟ್ ಗಾಗಿ ಅರ್ಜಿ ಸಲ್ಲಿಸಲು ಸರ್ಕಾರ ವೇಳಾಪಟ್ಟಿ ಬಿಡುಗಡೆಗೊಳಿಸಿದೆ. ಈ ಉಚಿತ ಶಿಕ್ಷಣ ಅನುಕೊಲತೆಯನ್ನು ಪಡೆಯಲು ಯಾರು ಅರ್ಹರು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಸಂಪೂರ್ಣ ಮಾಹಿತಿ ತಿಳಿಯಿರಿ.
ಅರ್ಜಿ ಸಲ್ಲಿಸುವ ವಿಧಾನ:
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಉಚಿತವಾಗಿ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್ ಜಿ ಜನಸ್ನೇಹಿ ಕೇಂದ್ರಗಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ :
ಗಣಕೀಕೃತ ವ್ಯವಸ್ಥೆಯ ಬಳಸಿಕೊಂಡು ಲಾಟರಿ ಮೂಲಕ ಅರ್ಜಿದಾರರ ಹೆಸರನ್ನು ಆಯ್ಕೆ ಮಾಡಲಾಗುತ್ತದೆ.
ನಂತರ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸೀಟುಗಳ ಲಭ್ಯತೆಯನ್ನು ಆಧರಿಸಿದೆ ಮತ್ತು ಆಯ್ಕೆ ಮಡಿದ ವಿದ್ಯಾರ್ಥಿಗಳನ್ನು ಆ ಸಂಸ್ಥೆಗಳಿಗೆ ನಿಯೋಜಿಸಲಾಗುತ್ತದೆ.
ಬೇಕಾಗುವ ಅರ್ಹತೆಗಳು:
👉 ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
👉 ಒಂದನೇ ತರಗತಿಗೆ ಪ್ರವೇಶಕ್ಕಾಗಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
👉 ವಿದ್ಯಾರ್ಥಿಗಳು 01/06/2016 ರಿಂದ 01/01/2018 ರ ಒಳಗಡೆ ಜನಿಸಿರಬೇಕು.
👉 ಕುಟುಂಬದ ಒಟ್ಟು ವಾರ್ಷಿಕ ಆದಾಯವು ರೂ 3.5 ಲಕ್ಷ ಮೀರಿರಬಾರದು.
👉 ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.
ಬೇಕಾಗುವ ದಾಖಲೆಗಳು:
1. ಮಗುವಿನ ಆಧಾರ್ ಕಾರ್ಡ್
2. ಮಗುವಿನ ಜನನ ಪ್ರಮಾಣ ಪತ್ರ
3. ಮಗುವಿನ ಜಾತಿ ,ಮತ್ತು ಆದಾಯ ಪ್ರಮಾಣ ಪತ್ರ
4. ಪೋಷಕರ ಆಧಾರ್ ಕಾರ್ಡ್
ತಾತ್ಕಾಲಿಕ ವೇಳಾಪಟ್ಟಿ "
2-24-25 ಸಾಲಿನ RTE ಪ್ರವೇಶಾತಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಪ್ರಕಟಣೆ - 07 ಫೆಬ್ರವರಿ, 2024
ಶಾಲೆಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸುವದು - 23 ಫೆಬ್ರವರಿ 2024
ನೆರೆಹೊರೆ ಶಾಲೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ - 28ಫೆಬ್ರವರಿ 2024
25% ಸೀಟುಗಳು ಲಭ್ಯವಿರುವ ಶಾಲೆಗಳ ಪಟ್ಟಿಯನ್ನು ಜಿಲ್ಲೆಯ ಅಧಿಕೃತ ವೆಬ್ ಸೈಟ್ ಹಾಗೂ ಕಚೇರಿ ಸೂಚನಾಲಕದಲ್ಲಿ ಪ್ರಕಟಿಸಿವುದು 04 ಮಾರ್ಚ್ 2024
ಪ್ರಾಯೋಗಿಕವಾಗಿ ಅರ್ಜಿ ಸಲ್ಲಿಕೆ ಆರಂಭ - ಮಾರ್ಚ್ 20 & 21, 2024
ಅರ್ಜಿ ಸ್ಲಲಿಸಲು ಅವಕಾಶ 22-ಮಾರ್ಚ್ 2024 ರಿಂದ 22 ಮಾರ್ಚ್ 2024
ಮೊದಲ ಸುತ್ತಿನ ಸೀಟು ಹಂಚಿಕೆ 30- ಏಪ್ರಿಲ್ 2024
Tags
Education