ಕಾರ್ಮಿಕ ದುರ್ಬಲತೆ ಪಿಂಚಣಿ ಸೌಲಭ್ಯ

ಕಾರ್ಮಿಕ ದುರ್ಬಲತೆ ಪಿಂಚಣಿ ಸೌಲಭ್ಯ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ :


           ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಇಲಾಖೆಯಿಂದ ದುರ್ಬಲತೆ ದುರ್ಬಲತೆ ಪಿಂಚಣಿ ನೀಡಲಾಗುತ್ತದೆ. ನೀವು ಅರ್ಜಿ ಸಲ್ಲಿಸಬೇಕೇ ? ಹಾಗಿದ್ದಲ್ಲಿ ಈ ಲೇಖನದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.



ನಿಯಮ 40 : ದುರ್ಬಲತೆ ಪಿಂಚಣಿ ಸೌಲಭ್ಯ 

✔ ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ನೋಂದಾಯಿತ ನಿರ್ಮಾಣ ಕಾರ್ಮಿಕನು/ಳು ಕೆಲಸದ ಸಮಯದಲ್ಲಾದ ಅಪಘಾತದಿಂದ / ಯಾವುದಾದರು  ಭಾಗಶಃ ದುರ್ಬಲತೆಗೆ ಒಳಗಾದಾಗ ಅವನಿಗೆ/ ಅವಳಿಗೆ ಸರ್ಕಾರದ ಅಧಿಸೂಚನೆಯಂತೆ ರೂ 2000/-ಗಳನ್ನು ದುರ್ಬಲತೆ ಪಿಂಚಣಿಯನ್ನಾಗಿ ಮಂಜೂರು ಮಾಡಲಾಗುತ್ತದೆ. ರೂ 2 ಲಕ್ಷದ ಮೊತ್ತವನ್ನು ಮೀರದೆ, ಅವನ/ಅವಳ ಶೇಕಡಾವಾರು ದುರ್ಬಲತೆಗೆ ಅನುಗುಣವಾಗಿ ಈ ಕೆಳಕಂಡ ಷರತ್ತು ನಿಭಂದನೆಗಳಿಗೆ ಒಳಪಟ್ಟು ದುರ್ಬಲರಿಗೆ ಪರಿಹಾರ ಸಹಾಯಧನ ಮಂಜೂರು ಮಾಡಬಹುದಾಗಿರುತ್ತದೆ.

✔ ನೋಂದಾಯಿತ ಫಲಾನುಭವಿಯು ನಿಯಮ 47 ರಲ್ಲಿ ಪರಿಹಾರ ಸಹಾಯಧನ ಪಡೆದಿದ್ದಲ್ಲಿ, ಈ ನಿಯಮದಡಿ ಪರಿಹಾರ ಸಹಾಯಧನ ಪಡೆಯಲು ಸಾಧ್ಯವಿಲ್ಲ. ಅಂಗವಿಕಲತೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಫಲಾನುಭವಿಯು ಗುರುತಿನ ಚೀಟಿಯನ್ನು ಪಡೆದಿರಬೇಕಾಗುತ್ತದೆ.

✔ ನೋಂದಾಯಿತ ಫಲಾನುಭವಿ ದುರ್ಬಲತೆ ಪಿಂಚಣಿಗಾಗಿ ಮಂಡಳಿಯ ತಂತ್ರಾಂಶದಿಂದ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

✔ ನೋಂದಾಯಿತ ಫಲಾನುಭವಿಯ ದುರ್ಬಲತೆಯು ಕೆಲಸದ ಸ್ಥಳದಲ್ಲಿ ಆದ ಅಪಘಾತ / ಯಾವುದಾದರು ಖಾಯಿಲೆಯಿಂದ ಉಂಟಾಗಿದ್ದು, ಅದರ ಶೇಕಡಾವಾರು ದುರ್ಬಲತೆಗೆ ಅನುಗುಣವಾಗಿ ಅಂಗವಿಕತೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ದುರ್ಬಲತೆಗೆ ಲೆಕ್ಕಾಚಾರ ಈ ಕೆಳಕಂಡ ಸೂತ್ರದ ಮುಖೇನ ನೀಡಲಾಗುವುದೆಂದು ಮಂಡಳಿಯ / ಅಧಿಕೃತ ಮಂಜೂರಾತಿ ಅಧಿಕಾರಿ ತೀರ್ಮಾನಿಸುತ್ತಾರೆ.

✔ ಫಾರ್ಮುಲಾ ರೂ 2,00,000 ಗರಿಷ್ಟ ಮೊತ್ತ X ಅಂಗವಿಕಲತೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಘೋಷಣೆ ಮಾಡಿದ ಧೇಕದವರು ದುರ್ಬಲತೆ = ಪರಿಹಾರ ಸಹಾಯಧನ.

✔ ದುರ್ಬಲತೆ ಪಿಂಚಣಿಯನ್ನು ನೋಂದಾಯಿತ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

✔ ನೋಂದಾಯಿತ ಫಲಾನುಭವಿಯು ದುರ್ಬಲತೆ ಪಿಂಚಣಿಯನ್ನು ಮುಂದುವರೆಸಲು ಪ್ರತಿ ವರ್ಷವೂ ಜೀವಿತ ಪ್ರಮಾಣ ಪತ್ರ ನಮುನೆ 14-A ಅನ್ನು ಮಂಡಳಿಯ ತಂತ್ರಾಂಶದಲ್ಲಿ ಮಂಜೂರಾತಿ ಅಧಿಅಕ್ರಿಗೆ ಸಲ್ಲಿಸಬೇಕು. 

✔ ದುರ್ಬಲತೆ ಪಿಂಚಣಿ ಪಡೆಯಲು ಫಲಾನುಭವಿ ಅರ್ಹನಲ್ಲ ಎಂದು ಕಂಡು ಬಂದಲ್ಲಿ ಅವನಿಗೆ ನಿಯಮಾನುಸಾರ ಪರಿಶೀಲಿಸಿ ಅರ್ಜಿಯನ್ನು ತಿರಸ್ಕರಿಸಬೇಕಾಗುತ್ತದೆ. ಒಂದು ವೇಳೆ ದುರ್ಬಲತೆ ಪಿಂಚಣಿದಾರರು ಮರಣಿಸಿದರೆ ಅವರ ಕಾನೂನುಬದ್ಧ ಅವಲಂಬಿತರು ಅಥವಾ ಉತ್ತರಾಧಿಕಾರಿಗಳು ಮರಣ ಪ್ರಮಾಣ ಪತ್ರವನ್ನು ಮಂಡಳಿಗೆ ಸಲ್ಲಿಸುವುದು.



ಪೂರಕ ದಾಖಲಾತಿಗಳು:

a. ಮಂಡಳಿಯಿಂದ ನೀಡಲಾದ ಮೂಲ ಗುರುತಿನ ಚೀಟಿ 
b. ಗೆಜೆಟೆಡ್ 
c. ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಗುರುತು ಚೀಟಿಯ ಛಾಯಾಪ್ರತಿ ನೀಡತಕ್ಕದ್ದು 
d. ಫಲಾನುಭವಿಯ ಬ್ಯಾಂಕ್ ಪಾಸ್ ಪುಸ್ತಕದ ಛಾಯಾಚಿತ್ರ ನೀಡತಕ್ಕದ್ದು 
e. ರೇಷನ್ ಕಾರ್ಡ್ ನೀಡತಕ್ಕದ್ದು 
f. ಪ್ರತಿವರ್ಷ ಜೀವಿತ ಪ್ರಮಾಣಪತ್ರ 
g. ಉದ್ಯೋಗದ ದೃಢೀಕರಣ ಪತ್ರ 
h. ವೈದ್ಯಕೀಯ ವರದಿ 
i. ವಿಕಲಚೇತನ ಹಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಪಡೆದ, ದೃಢೀಕರಸಲ್ಪಟ್ಟ  ಗುರ್ತಿನ ಚೀಟಿಯನ್ನು ಲಗತ್ತಿಸತಕ್ಕದ್ದು 
j. ದುರ್ಬಲತೆಗೊಳಗಾದ ಫಲಾನುಭವಿಯ ಭಾವಚಿತ್ರ ಲಗತ್ತಿಸತಕ್ಕದ್ದು 
k. ಫಲಾನುಭವಿಯು ಸಕ್ಷಮ ಪ್ರಾಧಿಕಾರದಿಂದ ದುರ್ಬಲತೆಯ ಗುರುತಿನ ಚೀಟಿಯನ್ನು ಪಡೆದ ಆರು  
ತಿಂಗಳೊಳಗೆ ಮರಣ ಹೊಂದಿದ ಪಕ್ಷದಲ್ಲಿ ನಾಮ ನಿರ್ದೇಶಿತರು ಮರಣ ಪ್ರಮಾಣಪತ್ರವನ್ನು ಮಂಡಳಿಗೆ ನೀಡತಕ್ಕದ್ದು.

ಅನ್ವಯಿಸುವ ವಿಧಾನ :

1. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು 
2. ನೋಂದಣಾಧಿಕಾರಿಗಳಾದ ಹಿರಿಯ/ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ 
3. ಸಹಾಯಕ ಕಾರ್ಮಿಕ ಆಯುಕ್ತರಿಂದ ಅನುಮೋದನೆ 


ಆತ್ಮೀಯ ಕಾರ್ಮಿಕರೇ ಈ ಎಲ್ಲ ಮಾಹಿತಿ ನಿಮಗೆ ಇಷ್ಟವಾದಲ್ಲಿ, ಹಾಗೂ ನೀವಿನ್ನು ಪಿಂಚಣಿ ಸೌಲಭ್ಯ  ಹೊಂದಿಲ್ಲದಿದ್ದರೆ ಕೂಡಲೇ  ಈ ನಂಬರ್ ಗೆ ಕರೆ ಮಾಡಿ ನಾವೇ ಅರ್ಜಿ ಸಲ್ಲಿಸಿಕೊಡುತ್ತೇವೆ.

ದೂರವಾಣಿ ಸಂಖ್ಯೆ ::: 8217716084, 7795063340


 ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@










ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು