ಅಡುಗೆ ಅನಿಲ ಸಿಲಿಂಡರ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ :

ಅಡುಗೆ ಅನಿಲ ಸಿಲಿಂಡರ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ :




ಹಿಂದುಸ್ತಾನ ಜನತಾ ಪಾರ್ಟಿ ವತಿಯಿಂದ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾಡಳಿತ ಮುಖಾಂತರ ಘನವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಹಿಂದೂಸ್ತಾನ ಜನತಾ ಪಾಟೀಲ ಜಿಲ್ಲಾಧ್ಯಕ್ಷರಾದ ಅರುಣ ಶಟಗಾರ ಮಾತನಾಡಿ, ಕೇಂದ್ರ ಮತ್ತು ಕರ್ನಾಟಕ ರಾಜ್ಯ 40% ಕಮಿಷನ್ ಬಿಜೆಪಿ ಸರ್ಕಾರಗಳು ಅಡುಗೆ ಅನಿಲ ಹಾಗೂ ದಿನನಿತ್ಯದ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿ ಮತ್ತೆ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದೆ, ಪ್ರತಿ ಕುಟುಂಬಕ್ಕೆ ಅವಶ್ಯಕತೆ ಇರುವ ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿ ಬಡವರ ವಿರುದ್ಧ ನಿಲುವು ತೋರಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ತಮ್ಮದೇ ಸರ್ಕಾರ ಇದ್ದರೂ ಸತತವಾಗಿ ಬೆಲೆ ಏರಿಕೆ ಮಾಡುತ್ತ ಬಡವರು ಹಾಗೂ ಮಧ್ಯಮ ವರ್ಗದವರ ಜೀವನದ ಜೊತೆ ಆಟವಾಡುತ್ತಿದ್ದರೆ. ನಿರುದ್ಯೋಗ ತಂಡವಾಡುತ್ತಿದ್ದು, ದಿನಬಳಕೆ ವಸ್ತು ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಈ ಪ್ರಕ್ರಿಯೆಯನ್ನು ಹಿಂದೂಸ್ತಾನ ಜನತಾ ಪಾರ್ಟಿ ವಿಜಯಪುರ ಜಿಲ್ಲೆ ವತಿಯಿಂದ ಈ ಬೆಲೆ ಏರಿಕೆಯ ವಿರುದ್ಧ  ಪ್ರತಿಭಟಿಸುತ್ತಿದ್ದೇವೆ.ಕೂಡಲೇ ಘನವೆತ್ತ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಣ್ಣು ತೆರೆಸುವ ಕೆಲಸವನ್ನು ಮಾಡಿ ಏರಿಕೆಯಾದ ಬೆಳೆಗಳನ್ನು ತಕ್ಷಣವೇ ಇಳಿಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.

                 ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಮಹಾಂತೇಶ ಅವಟಿ, ಜಿಲ್ಲಾ ಸಹ ಕಾರ್ಯದರ್ಶಿಗಳಾದ ಶ್ರೀಕಾಂತ ಪೂಜಾರಿ, ಸಂತೋಷ ಮಠಪತಿ, ಚನ್ನವೀರ ಯಕ್ಕುಂಡಿ, ಮಹೇಶ ಹಿರೇಮಠ, ಆನಂದ ಹಾದಿಮನಿ, ರಾಜು ಅರಕೇರಿ, ಅಪ್ಪಣ್ಣ ಭೋಸಲೆ, ಕಡೇಶ ಗಚ್ಚಿನಕಟ್ಟಿ ಬೋರಮ್ಮ ಬಿರಾದಾರ, ಸುರೇಖಾ ಪಾಟೀಲ, ಮಲ್ಲಮ್ಮ ಚವ್ಹಾಣ, ಉಪಸ್ಥಿತರಿದ್ದರು.









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು