ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನೇರ ನೇಮಕಾತಿ:

ಕರ್ನಾಟಕ ರಾಜ್ಯಪತ್ರ 
ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನೇರ ನೇಮಕಾತಿ:





ಕರ್ನಾಟಕ ನ್ಯಾಯಿಕ ಸೇವಾ (ನೇಮಕಾತಿ) ನಿಯಮಗಳು, 2004 ಮತ್ತು 2011, 2015 ಮತ್ತು 2016 ತಿದ್ದುಪಡಿ ನಿಯಮಗಳ ಅಡಿಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು, ಪ್ರಸ್ತುತ ಇರುವ ಹಾಗೂ ಬ್ಯಾಕ್ ಲಾಗ್ ಹುದ್ದೆಗಳೂ ಸೇರಿದಂತೆ ಸಿವಿಲ್ ನ್ಯಾಯಾಧೀಶರ 57 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಈ ಮೂಲಕ ಅಧಿಸೂಚಿಸಿದೆ.

1. ಕನಿಷ್ಠ ವಿದ್ಯಾರ್ಹತೆ ಮತ್ತು ವಯೋಮಿತಿ :

A . ನೇರ ನೇಮಕಾತಿ :

       ಭಾರತದಲ್ಲಿನ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾಲಯವು ನೀಡಿದ ಕಾನೂನು ಪದವಿಯನ್ನು ಹೊಂದಿರಬೇಕು. ಮತ್ತು ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಆಗಿರಬೇಕು.

      ಅಭ್ಯರ್ಥಿಗಳ ವಯಸ್ಸು, ಅರ್ಜಿಗಳನ್ನು ಸಲ್ಲಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳ ಸಂದರ್ಭದಲ್ಲಿ 38 ವರ್ಷ ವಯಸ್ಸು ಮತ್ತು ಇತರರ ಸಂದರ್ಭದಲ್ಲಿ 35 ವರ್ಷ ವಯಸ್ಸು ಮೀರಿರಬಾರದು.

      ಮಾಜಿ-ಸೈನಿಕ ಅಭ್ಯರ್ಥಿಗಳಿಗಾಗಿ, ಗರಿಷ್ಟ ವಯೋಮಿತಿಯಲ್ಲಿ ಮೂರೂ ವರ್ಷಗಳ ಸಡಿಲಿಕೆ ಇರುತ್ತದೆ.

B . ಸೇವಾ ನಿರಂತರ ಅಭ್ಯರ್ಥಿಗಳ ನೇಮಕಾತಿ (ಉಚ್ಚ ನ್ಯಾಯಾಲಯ, ಜಿಲ್ಲಾ ನ್ಯಾಯಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂಧಿಗಳು ಮತ್ತು ಪ್ರಾಸ್ಟಿಕ್ಯುಷನ್ಸ್ ಮತ್ತು ಸರ್ಕಾರೀ ವ್ಯಾಜ್ಯ ನಿರ್ವಹಣೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಸರ್ಕಾರೀ ಪ್ರಾಸಿಕ್ಯೂಟರ್ - ಹಾಗೂ ಹೆಚ್ಚುವರಿ ಸರ್ಕಾರಿ ನ್ಯಾಯವಾದಿಗಳು):

1,  ಭಾರತದ ಕಾನೂನಿನ ಮೇರೆಗೆ ಸ್ಥಾಪಿತವಾದ ವಿಶ್ವವಿದ್ಯಾಲಯವು ನೀಡಿದ ಕಾನೂನು ಪದವಿಯನ್ನು ಹೊಂದಿರಬೇಕು.

2,  ಅರ್ಜಿಗಳನ್ನು ಸಲ್ಲಿಸುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದಂದು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಕ್ಕೆ ಸಂಬಂಧಿಸಿದ ಅಭ್ಯರ್ಥಿಗಳ ಸಂದರ್ಭದಲ್ಲಿ 43 ವರ್ಷಗಳ ವಯಸ್ಸು ಮತ್ತು ಇತರರ ಸಂದರ್ಭದಲ್ಲಿ 40 ವರ್ಷ ವಯಸ್ಸು ಮೀರಿರಬಾರದು.

3,  ಉಚ್ಚ ನ್ಯಾಯಾಲಯದಲ್ಲಿ ಮತ್ತು ಜಿಲ್ಲಾ ನ್ಯಾಯಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಅಗತ್ಯ ವಿದ್ಯಾರ್ಹತೆಯನ್ನು ಹೊಂದಿರುವ ಎಲ್ಲಾ ಸೇವಾನಿರತ ಅಭ್ಯರ್ಥಿಗಳೂ, ಅವರ ವೃಂದ ತಾರತಮ್ಯವಿಲ್ಲದೆ ಎಲ್ಲಾರೂ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

4,  ಪ್ರಾಸಿಕ್ಯೂಷನ್ಸ್ ಮತ್ತು ಸರ್ಕಾರಿ ವ್ಯಾಜ್ಯ ನಿರ್ವಹಣೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಸರ್ಕಾರೀ ಪ್ರಾಸಿಕ್ಯೂಟರ್- ಹಾಗೂ - ಹೆಚ್ಚುವರಿ ಸರ್ಕಾರಿ ನ್ಯಾಯವಾದಿಗಳು ಸಹ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.



57 ಖಾಲಿ ಹುದ್ದೆಗಳ ವರ್ಗಿಕರಣ 



2. ವೇತನ ಶ್ರೇಣಿ :

ರೂ 27700 - 770 - 33090 - 920 - 40450 - 1080 - 44770


3. ನೇಮಕಾತಿ ವಿಧಾನ :

ಉಚ್ಚ ನ್ಯಾಯಾಲಯವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ (ಮುಖ್ಯ ಲಿಖಿತಿ ಮತ್ತು ಮೌಖಿಕ )
ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ನೇರ ನೇಮಕಾತಿಯನ್ನು ಮಾಡಲಾಗುತ್ತದೆ.

✔ ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯು ಮೂರೂ ಹಂತಗಳನ್ನು ಒಳಗೊಂಡಿದ್ದು, ಅವುಗಳೆಂದರೆ, 
 ಪೂರ್ವಭಾವಿ ಪರೀಕ್ಷೆ 
 ಮುಖ್ಯ ಲಿಖಿತ ಪರೀಕ್ಷೆ
 ಮೌಖಿಕ ಪರೀಕ್ಷೆಯಾಗಿರುತ್ತದೆ. 
 ಪೂರ್ವ ಭಾವಿ ಪರೀಕ್ಷೆಯ ಅಂಕಗಳನ್ನು ಮುಖ್ಯ ಲಿಖಿತ  ಪರೀಕ್ಷೆಗೆ ಅರ್ಹತೆ ಹೊಂದಲು ಮಾತ್ರ   ಪರಿಗಣಿಸಲಾಗುತ್ತದೆ.

👉 ಪೂರ್ವಭಾವಿ ಪರೀಕ್ಷೆ : ಪೂರ್ವಭಾವಿ ಪರೀಕ್ಷೆಯನು 100 ಅಂಕಗಳಿಗೆ ವಸ್ತುನಿಷ್ಠ ಮಾದರಿಯ ಪ್ರಶ್ನೆ ಪತ್ರಿಕೆಯ ರೂಪದಲ್ಲಿ ನಡೆಸಲಾಗುತ್ತದೆ ಮತ್ತು ಸದರಿ ಪರೀಕ್ಷೆಯ ಪಠ್ಯಕ್ರಮವು ಈ 👇👇👇 ಕೆಳಕಂಡಂತಿರುತ್ತದೆ. 
 
ಭಾಗ - a : ಸಿವಿಲ್ ಪ್ರಕ್ರಿಯೆ ಸಂಹಿತೆ, 1908 :
                   ವರ್ಗಾವಣೆಯ ಲಿಖಿತ ಪಾತ್ರಗಳ ಅಧಿನಿಯಮ, 1881:
                   ಸ್ವತ್ತು ವರ್ಗಾವಣೆ ಅಧಿನಿಯಮ, 1882:
                   ಭಾರತೀಯ ಕರೂರು ಅಧಿನಿಯಮ, 1872
                   ನಿರ್ದಿಷ್ಟ ಪರಿಹಾರ ಅಧಿನಿಯಮ್, 1963
                   ಭಾರತದ ಸಂವಿಧಾನ ಲ್ ಮತ್ತು 
                   ಕರ್ನಾಟಕ ಬಾಡಿಗೆ ಅಧಿನಿಯಮ, 1990

ಭಾಗ - b: ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ, 1973:
                   ಭಾರತೀಯ ದಂಡ ಸಂಹಿತೆ, 1860 ; ಮತ್ತು 
                   ಭಾರತೀಯ ಸಾಕ್ಷ್ಯ ಅಧಿನಿಯಮ, 1872,

ಭಾಗ - c : ಸಾಮಾನ್ಯ ಜ್ಞಾನ - ತಾರ್ಕಿಕ ಮತ್ತು 
                  ಮನೋಸಾಮರ್ಥ್ಯ ಪರೀಕ್ಷೆ.

👉 ಮುಖ್ಯ ಲಿಖಿತ ಪರೀಕ್ಷೆ
ಭಾಷಾಂತರ ಪತ್ರಿಕೆ (ಗರಿಷ್ಟ ಅಂಕಗಳು 100)
ಒಂದು ಭಾಷಣತರ ಪತ್ರಿಕೆಯಿದ್ದು, ಅಭ್ಯರ್ಥಿಗಳು ಆಂಗ್ಲಭಾಷೆಯಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಆಂಗ್ಲಭಾಷೆಗೆ ಕೆಲವು ಉಧೃತ ಭಾಗಗಳನ್ನು ಭಾಷಾಂತರಿಸುವ ಅಗತ್ಯವಿರುತ್ತದೆ. ಉಧೃತ ಭಾಗಗಳನ್ನು (1) ಹೇಳಿಕೆಗಳು, (2) ತೀರ್ಪುಗಳು ಮತ್ತು (3) ದಸ್ತಾವೇಜುಗಳಿಂದ ಆರಿಸಿ ತೆಗೆದುಕೊಳ್ಳಲಾಗಿರುತ್ತದೆ.

👉 ಮೌಖಿಕ ಪರೀಕ್ಷೆ : (ಗರಿಷ್ಟ ಅಂಕಗಳು 100)
ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಕಾನೂನು ತತ್ವಗಳ ಗ್ರಹಿಕೆ ಮತ್ತು ಸಿವಿಲ್ ನ್ಯಾಯಾಧೀಶರಾಗಿ ನೇಮಕವಾಗಲು ಅವರಿಗಿರುವ ಅರ್ಹ್ತೆಗಳನ್ನು ಪರೀಕ್ಷಿಸಲಾಗುವುದು.

👉 ಕಂಪ್ಯೂಟರ್ ಜ್ಞಾನದ ಪರೀಕ್ಷೆ (ಗರಿಷ್ಟ ಅಂಕಗಳು 25)
ಕಂಪ್ಯೂಟರ್ ಜ್ಞಾನದ ಪರೀಕ್ಷೆಯು 25 ಅಂಕಗಳಿಗೆ ಇರುತ್ತದೆ. ಅಭ್ಯರ್ಥಿಗಳು ಗಳಿಸಿದ ಈ ಅಂಕಗಳನ್ನು ಅವರ ಅರ್ಹತೆಯನ್ನು ನಿಶ್ಚಿತಪಡಿಸಲು ಪರಿಗಣಿಸಲಾಗುತ್ತದೆ, ಮತ್ತು ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನದ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮುಖ್ಯ ಲಿಖಿತ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳಿಗೆ ಸೇರಿಸಲಾಗುವುದಿಲ್ಲ.

👉 ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ನಿಗದಿಪಡಿಸಿರುವ ಕನಿಷ್ಠ ಅಂಕಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 50 ಅಂಕಗಳು ಮತ್ತು ಇತರರಿಗೆ 60 ಅಂಕಗಳಾಗಿರುತ್ತವೆ.

ಮುಖ್ಯ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ರತಿಯೊಂದು ಪತ್ರಿಕೆಯ್ಲಲೂ ನಿಗದಿಪಡಿಸಿರುವ ಕನಿಷ್ಠ ಅಂಕಗಳು, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ ಅಂಕಗಳು 40 ಮತ್ತು ಇತರರು ೫೦ ಅಂಕಗಳು 

ಮೌಖಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಿಗದಿಪಡಿಸಿರುವ ಕನಿಷ್ಠ ಅಂಕಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 40 ಮತ್ತು ಇತರರಿಗೆ 50 ಅಂಕಗಳು.


4. ನೇಮಕಾತಿಯ ಅನರ್ಹತೆ:

ಯಾವುದೇ ವ್ಯಕ್ತಿಯು ಭಾರತೀಯ ಪೌರನಾಗಿರದ ಹೊರತು;

ಆತನು/ಆಕೆಯು ನ್ಯಾಯಿಕ ಸೇವೆಯಿಂದ ಅಥವಾ ಸರ್ಕಾರಿ ಅಥವಾ ಶಾಸನಾತ್ಮಕ/ ಸ್ಥಳೀಯ ಪ್ರಾಧಿಕಾರ ಸೇವೆಯಿಂದ ಕಡ್ಡಾಯ ನಿವೃತ್ತಿ ಹೊಂದಿದ್ದಾರೆ, ತೆಗೆದು ಹಾಕಿದ್ದಾರೆ / ವಜಾಗೊಳಿಸಿದ್ದಾರೆ / ಅಭ್ಯರ್ಥಿಯು ನ್ಯಾಯಾಂಗ ಅಧಿಕಾರಿಯಾಗಿ ಆಯ್ಕೆಗೊಂಡ ನಂತರ ಪರಿವೀಕ್ಷಣಾ ಅವಧಿಯಲ್ಲಿ ಸೇವೆಯಿಂದ ವಿಮುಕ್ತಿಗೊಂಡಿದ್ದರೆ;

ನೈತಿಕ ಅಧಃಪತನಕ್ಕೆ ಸೇರುವ ಯಾವುದೇ ಅಪರಾಧದಲ್ಲಿ ಅಪರಾಧಿಯೆಂದು ನಿರ್ಣಿತನಾಗಿದ್ದಲ್ಲಿ / ಉಚ್ಚ ನ್ಯಾಯಾಲ / ಕೇಂದ್ರ ಲೋಕಸೇವಾ ಆಯೋಗ / ಯಾವುದೇ ರಾಜ್ಯ ಲೋಕಸೇವಾ ಆಯೋಗಗಳು ಸವೆಸುವ ಪರಿಸ್ಖೆಗಳಿಗೆ ಹಾಜರಾಗುವುದರಿಂದ . ಇವು ನಡೆಸುವ ನೇಮಕಾತಿಗಳಿಗೆ ಶಾಶ್ವತವಾಗಿ ಅನರ್ಹಗೊಂಡಿರುವ / ಯಾವುದೇ ಬಾರ್ ಕೌನ್ಸಿಲ್ ನ ನೋಂದಣಿ ಪಟ್ಟಿಯಿಂದ ತೆಗೆದು ಹಾಕಲ್ಪಟ್ಟಿದ್ದಲ್ಲಿ;

ಬಾರ್ ಕೌನ್ಸಿಲ್ / ಯಾವುದೇ ಶಿಸ್ತುಪಾಲನ ಪ್ರಾಧಿಕಾರ ದಂಡ ಅಥವಾ ಶಿಕ್ಷೆ ವಿಧಿಸಿದ್ದಲ್ಲಿ, ಅರ್ಜಿದಾರ ನ್ಯಾಯಿಕ ಹುದ್ದೆಗೆ ಸೂಕ್ತವಲ್ಲವೆಂದು ಆಯ್ಕೆ ಪ್ರಾಧಿಕಾರ ಅಭಿಪ್ರಾಯಪಟ್ಟಲ್ಲಿ ;

ತನ್ನ ಅಭ್ಯರ್ಥಿಗೆ ಸಂಬಂಧಿಸಿದಂತೆ ಯಾವುದೇ ರೂಪದಲ್ಲಿ ನೇಮಕಾತಿ ಪ್ರಾಧಿಕಾರವನ್ನು ಪ್ರತ್ಯಕ್ಷವಾಗಿ / ಪರೋಕ್ಷವಾಗಿ ಪ್ರಭಾವಿಸಿದ್ದಲ್ಲಿ 

ಅಭ್ಯರ್ಥಿಯ ವೈವಾಹಿಕ ಸ್ಥಿತಿಯಲ್ಲಿ ದ್ವಿ ಪತ್ನಿತ್ವ ಇದ್ದಲ್ಲಿ ಸೇವೆಯ ನೇಮಕಾತಿಗೆ ಅರ್ಹರಾಗಿರತಕ್ಕದ್ದಲ್ಲ 


5. ಪ್ರೊಬೇಷನ್ :

                ಆಯ್ಕೆಯಾದ ಅಭ್ಯರ್ಥಿಗಳು, ಪ್ರಾರಂಭದಲ್ಲಿ ಎರಡು ವರ್ಷಗಳ ಅವಧಿಗೆ / ವಿಸ್ತರಿಸಬಹುದಾದ ಅವಧಿಗೆ ಪ್ರೊಬೆಷನಲ್ಲಿರುತ್ತಾರೆ. ಹಾಗೂ ಕರ್ನಾಟಕ ಸಿವಿಲ್ ಸೇವಾ ನಿಯಮಗಳು 1977 ಉಪಬಂಧಗಳು, ಹಾಗೆ ನೇಮಕಗೊಂಡ ವಿವ್ಯಕ್ತಿಗಳಿಗೆ ಉಚಿತ ವಿಟ್ಯಾತ್ಯಾಸಗಳೊಂದಿಗೆ ಅನ್ವಯವಾಗತಕ್ಕಾದ್ದು. ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ಅಭ್ಯರ್ಥಿಗಳು ಸೇವೆಯ ಪ್ರೊಬೆಷನಲ್ಲಿರುವಾಗ 

ಒಂದು ವರ್ಷಕ್ಕಿಂತ ಕಡಿಮೆಯಿರದ ಅಥವಾ ಉಚ್ಚ ನ್ಯಾಯಾಲಯವು ನಿರ್ದಿಷ್ಟಪಡಿಸಬಹುದಾದಂಥ ಹೆಚ್ಚಿನ ಅವಧಿಯ ಅಂತ ತರಬೇತಿಯನ್ನು ಪಡೆದುಕೊಳ್ಳತಕ್ಕದ್ದು,

ಹಾಗೂ

ಅವನು/ಅವಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರದಿದ್ದರೆ ಕರ್ನಾಟಕ ಸಿವಿಲ್ ಸೇವಾ ನಿಯಮಗಳು, 1974 ರ ಅನುಸಾರವಾಗಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗತಕ್ಕದ್ದು.

7. ಆನ್ಲೈನ್ ಅರ್ಜಿ ಸಲ್ಲಿಸಲು ಅಥವಾ೯ ಶುಲ್ಕ ಸಂದಾಯ ಮಾಡಲು ಸೂಚನೆ 

ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು https://karnatakajudiciary.kar.nic.in/recuitment.phd ವೆಬ್ಸೈಟ್ ನ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಅನ್ನು ಹೊರತುಪಡಿಸಿ ಇತರ ಯಾವುದೇ ವಿಧಾನದಲ್ಲಿ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸಲುವುದಿಲ್ಲ. ಈ ಮುಂದೆ ಹೇಳಿರುವಂತೆ ಶುಲ್ಕ ತುಂಬುವುದು.

ಆನ್ಲೈನ್ ಮೂಲಕ ಶುಲ್ಕ ಸಂದಾಯ 
ಚಲನ್ ನಮೂನೆಯಲ್ಲಿ ಶುಲ್ಕ ಸಂದಾಯ 
ಪೂರ್ವಭಾವಿ ಪರೀಕ್ಷೆ ಶುಲ್ಕ ಸಂದಾಯ 

ಪೂರ್ವಭಾವಿ ಪರೀಕ್ಷೆಯಲ್ಲಿ ಯಶಸ್ವಿಯಾದ ಪ್ರತಿಯೊಬ್ಬ ಅಭ್ಯರ್ಥಿಯು, ಮುಖ್ಯ ಲಿಖಿತ ಪರೀಕ್ಷೆಗೆ ಹಾಜರಾಗಲು, ಪೂರ್ವಭಾವಿ ಫಲಿತಾಂಶವನ್ನು ಘೋಷಿಸಿದ ದಿನಾಂಕದಿಂದ ೧೫ ದಿನಗಳೊಳಗೆ ಮುಖ್ಯ ಲಿಖಿತ ಪರೀಕ್ಷಾ ಶುಲ್ಕವನ್ನು ಸಂದಾಯ ಮಾಡತಕ್ಕದ್ದು, ಹಾಗೆ ಸಂದಾಯ ಮಾಡಲು ತಪ್ಪಿದಲ್ಲಿ, ಅಂತ ಅಭ್ಯರ್ಥಿಯ ಅಭ್ಯರ್ತಿಕೇಯನ್ನು ಮುಖ್ಯ ಲಿಖಿತ ಪರೀಕ್ಷೆಗೆ ಪರಿಗಣಿಸಲಾಗುವುದಿಲ್ಲ. 

ಸಾಮಾನ್ಯ ಅಭ್ಯರ್ಥಿಯು ಮತ್ತು ಪ್ರವರ್ಗ 2ಎ / 2(ಬಿ) / 3(ಬಿ) ಅಭ್ಯರ್ಥಿಯು ರೂ 1,500/- ಶುಲ್ಕವನ್ನು ಸಂದಾಯ ಮಾಡತಕ್ಕದ್ದು 
ಪ/ಜ/ಪ/ಪಂ ಪ್ರವರ್ಗ -1ಕ್ಕೆ ಸೇರಿದ ಅಭ್ಯರ್ಥಿಗಳು ರೂ 750/- ಶುಲ್ಕವನ್ನು ಸಂದಾಯ ಮಾಡತಕ್ಕದ್ದು.









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು