ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಅಕೌಂಟ್ ಇದೆಯಾ?? ಒಂದು ವೇಳೆ ಹಾಗೇನಾದ್ರೂ ಹೆಚ್ಚಿನ ಅಕೌಂಟ್ ಹೊಂದಿದ್ರೆ ಏನಾಗುತ್ತೆ ಗೊತ್ತಾ?? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ;
ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ ಹೊಂದಿರಬೇಕು? ಸಾಮಾನ್ಯವಾಗಿ ಕೆಲವರು ಯೋಚಿಸಿಯೇ ಇರೋದಿಲ್ಲ. ಅಂತಹ ಪ್ರಮುಖ ಮಾಹಿತಿಯನ್ನು ನಾವು ಇಲ್ಲಿ ತಿಳಿಸಿದ್ದೇವೆ. ಕೆಲವರು ಅವಶ್ಯಕತೆಗಾಗಿ ಗೊತ್ತಿದ್ದೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಇನ್ನು ಕೆಲವರು ಗೊತ್ತಿಲ್ಲದೇ ಅನಾವಶ್ಯಕವಾಗಿ ಖಾತೆಗಳನ್ನು ತೆರೆದಿರುತ್ತಾರೆ. ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾನೆ ಎಂಬುದು ಮುಖ್ಯವಲ್ಲ. ಆತ ಅಷ್ಟೂ ಖಾತೆಗಳನ್ನು ನಿಭಾಯಿಸುತ್ತಾನೆಯೇ ಎಂಬುದು ಮುಖ್ಯ. ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕೆಂಬ ಯಾವುದೇ ನಿಯಮವಿಲ್ಲ.
ಒಂದು ನಾವು ಮೊದಲಿನಿಂದಲೇ ತೆರೆದಿರುವ ಬ್ಯಾಂಕ್ ಖಾತೆಯಾಗಿದ್ದರೆ, ಉಳಿದವು ನಾವು ಕಾರ್ಯನಿರ್ವಹಣೆ ಮಾಡುವ ಸಂಸ್ಥೆಯು ಸಂಬಳವನ್ನು ಜಮೆ ಮಾಡಲು ತೆರೆದಿರುವ ಬ್ಯಾಂಕ್ ಖಾತೆ ಆಗಿರಬಹುದು. ಹೆಚ್ಚಾಗಿ ನಾವು ಒಂದು ಉದ್ಯೋಗದಿಂದ ಇನ್ನೊಂದು ಉದ್ಯೋಗ ಸ್ಥಳಕ್ಕೆ ವರ್ಗಾವಣೆ ಆಗುತ್ತಿದ್ದಂತೆ, ಬ್ಯಾಂಕ್ ಖಾತೆಗಳ ಸಂಖ್ಯೆಯು ಕೂಡ ಹೆಚ್ಚಾಗುತ್ತಾ ಹೋಗುವುದು ಸಹಜ.
ಹೆಚ್ಚಾಗಿ ಒಂದು ಸಂಸ್ಥೆಯು ತಮ್ಮ ಉದ್ಯೋಗಸ್ಥರ ವೇತನ ಖಾತೆಯನ್ನು ಒಂದೇ ಬ್ಯಾಂಕಿನಲ್ಲಿ ತೆರೆಯುತ್ತಾರೆ. ಆ ಬ್ಯಾಂಕ್ ನಲ್ಲೆ ನಿಮ್ಮ್ ಕುಟುಂಬಸ್ಥರ ಖಾತೆ, ಹೂಡಿಕೆಗಾಗಿ ಖಾತೆ ಮೊದಲಾದವುಗಳನ್ನು ತೆರೆಯಬಹುದು. ಒಟ್ಟಾರೆಯಾಗಿ ಒಂದಕ್ಕಿಂತ ಅಧಿಕ ಬ್ಯಾಂಕ್ ಖಾತೆಗಳನ್ನು ಹೊಂದಿರುವುದಕ್ಕೆ ಹಲವಾರು ಕಾರಣಗಳು ಇದೆ. ನಾವು ಉದ್ಯೋಗದ ಕಾರಣ ಹೊರತಾಗಿ ಕ್ರೆಡಿಟ್ ಕಾರ್ಡ್ ಗಾಗಿ, ಸಾಲಕ್ಕಾಗಿ, ಫಿಕ್ಸಿಡ್ ಡೆಪಾಸಿಟ್ ಗಾಗಿ, ಲಾಕರ್ ಗಳಿಗಾಗಿ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ಹೊಂದಬಹುದು. ಆದರೆ, ನಾವು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದುವುದು ಉತ್ತಮ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.....
ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮಾಸಿಕ ಮೊತ್ತ;-
ಬಹುತೇಕ ಎಲ್ಲಾ ಬ್ಯಾಂಕ್ ಗಳಲ್ಲಿ ಖಾತೆಯಲ್ಲಿ ಕನಿಷ್ಠ ನಿರ್ದಿಷ್ಟ ಮೊತ್ತ ಇರಬೇಕು ಎಂಬ ನಿಯಮವಿದೆ. ನೀವು ಕನಿಷ್ಠ ಮೊತ್ತವನ್ನು ಹೊಂದಿದ್ದರೇ, ನಿಮಗೆ ಬ್ಯಾಂಕ್ ದಂಡವನ್ನು ವಿಧಿಸಬಹುದ. ನೀವು ಒಂದು ಅಥವಾ ಎರಡು ಬ್ಯಾಂಕ್ ಖಾತೆಯನ್ನು ಹೊಂದಿದ್ದರೇ ನೀವು ಸುಲಭವಾಗಿ ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ. ಎಷ್ಟು ಕನಿಷ್ಠ ಮೊತ್ತ ಇರಬೇಕು ಎಂದು ನೋಡಿಕೊಂಡು ಅದನ್ನು ಬ್ಯಾಲೆನ್ಸ್ ಮಾಡಲು ಸಾಧ್ಯವಾಗಲಿದೆ. ಆದರೆ, ಎರಡಕ್ಕಿಂತ ಅಧಿಕ ಬ್ಯಾಂಕ್ ಖಾತೆ ಇದ್ದರೇ ನೀವು ಕನಿಷ್ಠ ಮೊತ್ತವನ್ನು ನಿರ್ವಹಣೆ ಮಾಡಲು ಕಷ್ಟವಾಗಬಹುದು. ಎಲ್ಲ ಬ್ಯಾಂಕ್ ಗಳಲ್ಲಿ ಕನಿಷ್ಠ ಮೊತ್ತ ಒಂದೇ ಆಗಿರುವುದಿಲ್ಲ. ಜಿರೋದಿಂದ ಹಿಡಿದು ಹತ್ತು ಸಾವಿರಕ್ಕಿಂತಲೂ ಅಧಿಕ ಮೊತ್ತದವರೆಗೂ ಕನಿಷ್ಠ ಬ್ಯಾಲೆನ್ಸ್ ಆಗಿರುತ್ತದೆ.
ಬ್ಯಾಂಕ್ ಖಾತೆಗಳನ್ನು ಹೊಂದಿದ್ರೆ ಅನುಕೂಲ-ಅನಾನುಕೂಲತೆಗಳೇನು?
✔ RBI ಅಡಿ ಬರುವ ಯಾವುದೇ ಬ್ಯಾಂಕಲ್ಲಾದರೂ ಸಹ ೫ ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟಿದ್ದು, ಆ ಬ್ಯಾಂಕ್ ದಿವಾಳಿಯಾದ್ರೆ ನಿಮಗೆ ವಾಪಾಸ್ ಸಿಗೋದು ೫ ಲಕ್ಷ ಮಾತ್ರ. ಉಳಿದ ನಿಮ್ಮ ಪರಿಶ್ರಮದ ಹಣ ನಿಮಗೆ ಸಿಗೋದಿಲ್ಲ.
✔ ನೀವು ಮೂರ್ನಾಲ್ಕು ಬ್ಯಾಂಕುಗಳಲ್ಲಿ ಖಾತೆ ಹೊಂದಿದ್ದು, ಆ ಪ್ರತೀ ಬ್ಯಾಂಕಿನಲ್ಲೂ ತಲಾ ೫ ಲಕ್ಷ ಇಟ್ಟಿದ್ದರೆ ನಿಮ್ಮ ಹಣ ಸೇಫ್. ಈ ಮೂಲಕ ಒಂದು ಬ್ಯಾಂಕ್ ಖಾತೆಯಲ್ಲಿ ೫ ಲಕ್ಷ ಮಾತ್ರ ಲಿಮಿಟ್ ಅಂತ ಇಲ್ಲಿ ಅರ್ಥ.
✔ ಹೆಚ್ಚು ಬ್ಯಾಂಕ್ ಖಾತೆ ಇದ್ದಲ್ಲಿ ನಮ್ಮ ಹೆಚ್ಚಿನ ಹಣ ಸುರಕ್ಷಿತವಾಗಿರುತ್ತದೆ.
✔ ಒಂದೇ ಬ್ಯಾಂಕ್ ಖಾತೆ ಇದ್ದಲ್ಲಿ ಈಟಿ ರಿಟರ್ನ್ಸ್ ಮಾಡೋದು ಸುಲಭ.
✔ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ಇರಲೇ ಬೇಕು. ಇಲ್ಲವಾದರೆ ಶುಲ್ಕ ಬೀಳಲಿದೆ.
✔ ಬ್ಯಾಂಕ್ ಖಾತೆಯನ್ನು ಹಾಗೆಯೆ ಖಾಲಿ ಬಿಡಬೇಡಿ. ಹಾಗೇನಾದ್ರೂ ಮಾಡಿದ್ರೆ, ಬಡ್ಡಿ ಸಮೇತ ಶುಲ್ಕ ವಸೂಲಿ ಮಾಡಲಾಗುತ್ತದೆ. ಇಲ್ಲವಾದಲ್ಲಿ ಖಾತೆ ನಿಷ್ಕ್ರಿಯವಾಗಲಿದೆ.
ನಿಮಗೆ ಲಭ್ಯವಾಗುವ ಸೌಲಭ್ಯಗಳು :
ಖಾತೆ ತೆರೆಯುವ ಮುನ್ನ ಖಾತೆಯಿಂದ ಲಭ್ಯವಾಗುವ ಸೌಲಭ್ಯಗಳನ್ನು ಪಟ್ಟಿಮಾಡಿ.
ನಿಮಗೆ ಪ್ರೀಮಿಯಂ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬೇಕಾಗಬಹುದು, ಲಾಕರ್ ಸೌಲಭ್ಯ ಬೇಕಾಗಬಹುದು, ನಗದು ಡೆಪಾಸಿಟ್ ಮೇಲೆ ಶೂನ್ಯ ಶುಲ್ಕ, ಎಟಿಎಂ ನಲ್ಲಿ ಅಧಿಕ ಹಣ ವಿತ್ ಡ್ರಾ ಆಯ್ಕೆಯಂತಹ ಸೌಲಭ್ಯ ಅಥವಾ ಆಫರ್ ಬೇಕಾಗಬಹುದು. ನಿಮಗೆ ಈ ಪೈಕಿ ಯಾವ ಸೌಲಭ್ಯ ಅಗತ್ಯವಿದೆಯೋ ಆ ಸೌಲಭ್ಯ ಲಭ್ಯವಾಗುವ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯಿರಿ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@