19 ಕೆಜಿ ಎಲ್ ಪಿ ಜಿ ಸಿಲಿಂಡರ್ ಬೆಲೆ 83.50 ರೂ. ಇಳಿಕೆ, ವಿವರಗಳು ಇಲ್ಲಿವೆ.

19 ಕೆಜಿ ಎಲ್ ಪಿ ಜಿ ಸಿಲಿಂಡರ್ ಬೆಲೆ 83.50 ರೂ. ಇಳಿಕೆ, ವಿವರಗಳು ಇಲ್ಲಿವೆ.




19 ಕೆಜಿ ಎಲ್ ಪಿ ಜಿ ಸಿಲಿಂಡರ್ ನ ಬೆಲೆ ಇಳಿಕೆಯಾಗಿದ್ದು ಗ್ರಾಹಕರಿಗೆ ಖುಷಿ ತಂದಿದೆ. ಸಿಲಿಂಡರ್ ಬೆಲೆ 83.50 ರೂ. ಗೆ ಇಳಿಕೆಯಾಗಿದೆ.

19 ಕೆಜಿ ಎಲ್ ಪಿ ಜಿ ಸಿಲಿಂಡರ್ ನ ಬೆಲೆ ಇಳಿಕೆಯಾಗಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಸಿಲಿಂಡರ್ ಬೆಲೆ 83.50 ರೂ. ಗೆ ಇಳಿಕೆಯಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 83 ರೂ. ನಷ್ಟು ಇಳಿಕೆಯಾಗಿದೆ. ಈ ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಈ ಬೆಲೆ ಕಡಿತ ನಿರ್ಧಾರ ಕೆಲವರಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಅನಿಲ ಸಿಲಿಂಡರ್ ಗಳಿಗೆ ಮಾತ್ರ ದರ ಇಳಿಕೆ ಅನ್ವಯವಾಗುತ್ತದೆ ಎಂದು ಕಂಪನಿಗಳು ಹೇಳಿಕೊಂಡಿವೆ. ಅಂದರೆ 14.2 ಕೆಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಯಾವುದೇ ಪ್ರಯೋಜನವಿಲ್ಲ. ಏತನ್ಮಧ್ಯೆ ವಾಣಿಜ್ಯ ಅನಿಲ ಸಿಲಿಂಡರ್ ಗಳ ಬೆಲೆ ಕ್ರಮೇಣ ಇಳಿಕೆಯಾಗುತ್ತಿದೆ. ಕಳೆದ ತಿಂಗಳು ಸಹ 172 ರೂ, ಗೆ ಇಳಿದಿದೆ. ಮತ್ತೆ ಈಗ ಸಿಲಿಂಡರ್ ಬೆಲೆ 85 ರೂ. ನಷ್ಟು ಇಳಿಕೆಯಾಗಿದೆ. ಅಂದರೆ ಒಂದು ತಿಂಗಳೊಳಗ ಸಿಲಿಂಡರ್ ಬೆಲೆ 250 ರೂ. ನಷ್ಟು ಕಡಿಮೆಯಾಗಿದೆ ಎನ್ನಬಹುದು.




19 ಕೆಜಿ ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ ರೂ. 1773 ಕ್ಕೆ ಲಭ್ಯವಿದೆ. 1875.50 ರೂ. ಗೆ ಕೋಲ್ಕತ್ತಾದಲ್ಲಿ ಜೂನ್ 1 ರಿಂದ ಲಭ್ಯವಿದೆ. ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1873 ರೂ. ಆಗಿದೆ. ಕೋಲ್ಕತ್ತಾದಲ್ಲಿ 85 ರೂ., ಮುಂಬೈನಲ್ಲಿ 83.50 ರೂ. ಮತ್ತು ಚೆನ್ನೈನಲ್ಲಿ 83.50 ರೂ. ಸಿಲಿಂಡರ್ ಬೆಲೆ ಅಗ್ಗವಾಗಿದೆ.

ಈಗಾಗಲೇ ವಾಣಿಜ್ಯ ಸಿಲಿಂಡರ್ ಬೆಲೆ 1856/50 ರೂ. ನಷ್ಟಿತ್ತು. ಅದು  1,773 ರೂ ಗೆ ಇಳಿಕೆಯಾಗಿದೆ. ವಾಣಿಜ್ಯ ಮತ್ತು ಗೃಹಬಳಕೆಯ LPG ಸಿಲಿಂಡರ್ ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿದೆ.

ಪಾಟ್ನಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ 2037 ರೂ ಅದೇ ಸಮಯದಲ್ಲಿ 14 ಕೆಜಿ ದೇಶಿಯ ಸಿಲಿಂಡರ್ 1201 ರೂ ಗೆ ಲಭ್ಯವಿರುತ್ತದೆ. ಜೈಪುರದಲ್ಲಿ ವಾಣಿಜ್ಯ ಸಿಲಿಂಡರ್ ನ ಬೆಲೆ 1796 ರೂ ಮತ್ತು ಗೃಹಬಳಕೆಯ ಸಿಲಿಂಡರ್ ನ ಬೆಲೆ 1106.50 ರೂ ಇದೆ. ಈಗ ಇಂದೋರ್ ನಲ್ಲಿ ವಾಣಿಜ್ಯ ಸಿಲಿಂಡರ್ ನ ಇತ್ತೀಚಿನ ದರ ರೂ 1877 ಆಗಿದೆ. ನಂತರ ಗೃಹಬಳಕೆಯ ಸಿಲಿಂಡರ್ ರೂ 1131 ಕ್ಕೆ ಲಭ್ಯವಿರುತ್ತದೆ.




ದೇಶದಲ್ಲಿ LPG ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರತಿ ತಿಂಗಳು ನಿಗದಿಪಡಿಸುತ್ತವೆ. ಜಾಗತಿಕ ಕಚ್ಚಾ ಇಂಧನ ದರಗಳ ಆಧಾರದ ಮೇಲೆ ತೈಲ ಬೆಲೆಗಳನ್ನು ನಿರ್ಧರಿಸಲಾಗುತ್ತದೆ. ಅದಕ್ಕಾಗಿಯೇ ಪ್ರತಿ ತಿಂಗಳು ತೈಲ ಬೆಲೆಗಳನ್ನು ಬದಲಾಯಿಸಲಾಗುತ್ತದೆ. ಕಚ್ಚಾ ತೈಲ ಬೆಲೆಗಳು LPG ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಇದಲ್ಲದೆ FBO, ಸಾರಿಗೆ, ವಿಮೆ, ಕಸ್ಟಮ್ ಸುಂಕ ಮತ್ತು ಪೋರ್ಟ್ ಡ್ಯೂಟಿ ಇತ್ಯಾದಿ  ಅಂಶಗಳಿಂದ LPG ಬೆಲೆಗಳು ಬದಲಾಗುತ್ತವೆ.





ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ



@@@@@@@@@@@@@@@@@@@@@@@@@










ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು